ವೃದ್ಧರಿಗೆ ಪೊಲೀಸ್ ‘ಆಸರೆ’ : ಕರ್ತವ್ಯದ ಲಿಸ್ಟ್ನಲ್ಲಿ ಲೈಟ್ ಬಿಲ್ ಪಾವತಿ
ಹಾಸನ : ವೃದ್ಧರಿಗೆ ಸಹಾಯ ಮಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯು ‘ಆಸರೆ’ ಎನ್ನುವ ಹೊಸ ಯೋಜನೆಯನ್ನು ಆರಂಭಿಸಿದ್ದು , ದಕ್ಷಿಣ ವಲಯ ಡಿಐಜಿ ಶ್ರೀ ವಾಸ್ತವ ಅವರು ಹಾಸನದಲ್ಲಿ ಬುಧವಾರ ಈ ಯೋಜನೆಯನ್ನು ಉದ್ಘಾಟಿಸಿದರು.
ಯೋಜನೆಯ ಪ್ರಕಾರ, ಜಿಲ್ಲೆಯ ಆಯಾಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಸಾಕಷ್ಟು ಭದ್ರತೆಯಿಲ್ಲದ ಮನೆಯಲ್ಲಿ ವಾಸಿಸುತ್ತಿರುವ ವೃದ್ಧರ ಪಟ್ಟಿ ತಯಾರಿಸಲಾಗುವುದು . ಗ್ರಾಮ ಅಥವಾ ಮೊಹಲ್ಲಾಗಳಿಗೆ ಪೊಲೀಸ್ ಕಾನ್ಸ್ಟೇಬಲ್ ಒಬ್ಬರನ್ನು ನೇಮಿಸಿ ಅವರನ್ನು ಸಮುದಾಯ ಪೊಲೀಸ್ ಅಧಿಕಾರಿ ಎಂದು ಕರೆಯಲಾಗುವುದು. ಸಮುದಾಯ ಅಧಿಕಾರಿ ಪ್ರತಿ ವಾರಕ್ಕೊಮ್ಮೆ ಪಟ್ಟಿಯಲ್ಲಿರುವ ವೃದ್ಧರ ಮನೆಗಳಿಗೆ ಭೇಟಿ ನೀಡುವಂತೆ ನೋಡಿಕೊಳ್ಳಲಾಗುವುದು.
ಪ್ರತಿ ವಾರದ ಭೇಟಿಯ ಸಂದರ್ಭದಲ್ಲಿ ಸಮುದಾಯ ಪೊಲೀಸ್ ಅಧಿಕಾರಿಗಳು ವೃದ್ಧರ ಮನೆಯ ಫೋನ್ ಬಿಲ್, ಕರೆಂಟ್ ಬಿಲ್ ಇತ್ಯಾದಿಗಳನ್ನು ಕಟ್ಟಲು ಸಹಕರಿಸುತ್ತಾರೆ. ವೃದ್ಧಾಪ್ಯದ ಅಸೌಖ್ಯವಿದ್ದಲ್ಲಿ ನೆರೆಹೊರೆಯವರ ಸಹಾಯದೊಂದಿಗೆ ಅವರನ್ನು ಆಸ್ಪತ್ರೆಗೆ ಸಾಗಿಸುವ ಏರ್ಪಾಟು ಮಾಡಿ, ಅಗತ್ಯವಾದಲ್ಲಿ ಸಾಮಾಜಿಕ ಸಂಘ ಸಂಸ್ಥೆಗಳ ಮೂಲಕ ನೆರವು ಕಲ್ಪಿಸಿಕೊಡುವುದು ಈ ಯೋಜನೆಯಲ್ಲಿ ಅಡಕವಾಗಿದೆ.
ಸಮುದಾಯ ಅಧಿಕಾರಿ ವೃದ್ಧರ ಮನೆಗೆ ಭೇಟಿ ನೀಡಿರುವ ಕುರುಹಾಗಿ ಪಾಯಿಂಟ್ ಪುಸ್ತಕವಿಟ್ಟು ಅದರಲ್ಲಿ ಭೇಟಿ ನೀಡಿದ ಸಮಯ ಮತ್ತು ದಿನವನ್ನು ನಮೂದಿಸಲಾಗುತ್ತದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications