Get Updates
Get notified of breaking news, exclusive insights, and must-see stories!

ಮಗಳ ಮದುವೆಗಾಗಿ ಸಂಜಯ್‌ ಖಾನ್‌ಗೆ ಕೆಪಿಟಿಸಿಎಲ್‌ ಉಡುಗೊರೆ!

ಬೆಂಗಳೂರು : ಪುತ್ರಿ ಸೂಸನ್‌ ಖಾನ್‌ ಮದುವೆಯಲ್ಲಿ ವ್ಯಸ್ತರಾಗಿರುವ ಸಂಜಯ್‌ ಖಾನ್‌ ಅವರಿಗೆ ಕೆಪಿಟಿಸಿಎಲ್‌ ವಿಶೇಷ ಕೊಡುಗೆ ನೀಡಲು ನಿರ್ಧರಿಸಿದೆ! ವಿದ್ಯುತ್‌ ಕದ್ದಿರುವ ಖಾನ್‌ರಿಂದ 37 ಲಕ್ಷ ಬಾಕಿ ವಸೂಲಾತಿಗೆ ಇನ್ನೆರಡು ಮೂರು ದಿನಗಳಲ್ಲಿ ನಿಗಮ ನೋಟೀಸು ಕೊಡಲಿದೆ.

ಬೆಂಗಳೂರು- ತುಮಕೂರು ಹೆದ್ದಾರಿಯ ಮಾಕಳಿಯಿಂದ ಬಲ ಭಾಗಕ್ಕೆ ತಿರುಗಿದರೆ ನಗರೂರು ಎಂಬ ಗ್ರಾಮ. ನಗರದಿಂದ ಸುಮಾರು 23 ಕಿ.ಮೀ. ದೂರದಲ್ಲಿರುವ ಅಲ್ಲಿನ ಸರ್ವೆ ನಂಬರ್‌ 31 ಹಾಗೂ 32 ರ 31.5 ಎಕರೆ ಜಮೀನಿನಲ್ಲಿ ವರ್ಲ್ಡ್‌ ರೆಸಾರ್ಟ್ಸ್‌ ಲಿಮಿಟೆಡ್‌. ಸಂಜಯ್‌ ಖಾನ್‌ ಅದರ ವ್ಯವಸ್ಥಾಪಕ ನಿರ್ದೇಶಕ. 1996ರಿಂದ 98ರವರೆಗೆ ಸುಮಾರು 2.50 ಲಕ್ಷ ಯೂನಿಟ್‌ ವಿದ್ಯುತ್‌ ಕಳವು ಮಾಡಿದ್ದಾರೆ.

ಆಗ ಕೆಇಬಿಯ ನೆಲಮಂಗಲದ ವಿಭಾಗದ ಸಹಾಯಕ ಎಂಜಿನಿಯರ್‌ ಹನುಮಂತರಾಯ ಅವರ ನೆರವಿನಿಂದ ತಮ್ಮ ರೆಸಾರ್ಟ್‌ನ ಒಳಗೇ ಟ್ರಾನ್ಸ್‌ಫಾರ್ಮರನ್ನು ಖಾನ್‌ ಅಕ್ರಮವಾಗಿ ಹಾಕಿಸಿಕೊಂಡರು. ತೆಂಗಿನ ತೋಟಕ್ಕೆ ಸುಮಾರು ಏಳು ಕೋಟಿ ಲೀಟರ್‌ ನೀರೆತ್ತಲು ಕದ್ದ ವಿದ್ಯುತ್‌ ಬಳಸಿದರು. ಹಿಂದೊಮ್ಮೆ ತುಮಕೂರು ವಿಭಾಗದ ಜಾಗೃತಿ ದಳದವರು ವಿದ್ಯುತ್‌ ಕಳವನ್ನು ಪತ್ತೆ ಹಚ್ಚಿ, ಅದು ತಮ್ಮ ವ್ಯಾಪ್ತಿಗೆ ಬಾರದ ಕಾರಣ ಬೆಂಗಳೂರು ಜಾಗೃತಿ ದಳದವರಿಗೆ ವರ್ಗಾಯಿಸಿದ್ದರು.

ಬೆಂಗಳೂರು ಜಾಗೃತಿ ದಳದವರು ಸ್ಥಳಕ್ಕೆ ದಾಳಿ ನಡೆಸಿ, ಅಲ್ಲಿನ ವಿದ್ಯುತ್‌ ಪರಿಕರಗಳನ್ನು ವಶಪಡಿಸಿಕೊಂಡಿದ್ದರು. ಈಗ ಕೆಪಿಟಿಸಿಎಲ್‌ನ ಜಾಗೃತಿ ದಳದ ಅಧಿಕಾರಿಗಳು ಸಂಜಯ್‌ ಖಾನ್‌ ಕಟ್ಟಬೇಕಿರುವ ಬಾಕಿಯನ್ನು 37 ಲಕ್ಷ ರುಪಾಯಿ ಎಂದು ಗೊತ್ತು ಪಡಿಸಿದ್ದು, ನಾಳೆಯೋ ನಾಡಿದ್ದೋ ನೋಟೀಸು ಕೊಡಲಿದ್ದಾರೆ. ವಿದ್ಯುತ್‌ ಕಳವಿಗೆ ಕುಮ್ಮಕ್ಕು ಕೊಟ್ಟ ಕೆಇಬಿ ಸಹಾಯಕ ಎಂಜಿನಿಯರ್‌ ಹನುಮಂತರಾಯ ಅವರನ್ನು ಅಮಾನತು ಮಾಡಿ, ದೋಷಾರೋಪ ಪಟ್ಟಿಯಲ್ಲಿ ಸೇರಿಸುವಂತೆ ನಿಗಮದ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರವನ್ನೂ ಬರೆದಿದ್ದಾರೆ.

ಬಾಲಂಗೋಚಿ : ಟಿಪ್ಪು ಧಾರಾವಾಹಿಯ ಅನಾಹುತ ಪರಿಹಾರಕ್ಕಾದ ಗತಿ ಈ ಬಾಕಿ ವಸೂಲಿಗೂ ಆಗದಿರಲಿ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+