ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೃದ್ಧ ಭಾರತ ! ಸಮುದ್ರಕ್ಕೆ ಕೊಳೆಸಿದ10 ಲಕ್ಷ ಟನ್‌ ಆಹಾರ ಧಾನ್ಯ

By Staff
|
Google Oneindia Kannada News

ನವದೆಹಲಿ : ಭಾರತೀಯ ಆಹಾರ ನಿಗಮದಲ್ಲಿ ದನಕರುಗಳೂ ತಿನ್ನುವುದಕ್ಕೆ ಯೋಗ್ಯವಲ್ಲದಷ್ಟು ಕೊಳೆತು ಹೋಗಿರುವ ಹತ್ತು ಲಕ್ಷ ಟನ್‌ ಆಹಾರ ಧಾನ್ಯವನ್ನು ಕೂಡಲೇ ಸಮುದ್ರಕ್ಕೆಸೆಯುವಂತೆ ಸಂಸತ್ತಿನ ಆಹಾರ ಮತ್ತು ನಾಗರಿಕ ಪೂರೈಕೆ ಸ್ಥಾಯಿ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ.

ಸ್ಥಾಯಿ ಸಮಿತಿಯ ಅಧ್ಯಕ್ಷ ಮತ್ತು ಕೇಂದ್ರದ ಮಾಜಿ ಆಹಾರ ಸಚಿವ ದೇವೇಂದ್ರ ಪ್ರಸಾದ್‌ ಯಾದವ್‌ ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಲೋಕಸಭೆಯ ಮುಂದೆ 1999-2000 ಸಾಲಿನ ವಿಶೇಷ ವರದಿ ಮಂಡಿಸಿ,

ಆಮದಾಗಿರುವ ಗೋಧಿಯೂ ಸೇರಿದಂತೆ ಭಾರೀ ಪ್ರಮಾಣದ ಆಹಾರ ಧಾನ್ಯ ಹಲವು ವರ್ಷಗಳಿಂದ ಉಗ್ರಾಣದಲ್ಲಿ ಕೊಳೆಯಲು ಆಹಾರ ನಿಗಮದ ನಿರ್ಲಕ್ಷ್ಯವೇ ಕಾರಣ. ಇದರಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಧಾನ್ಯಗಳ ಬೆಲೆ ಏರಿಸಿ ಈ ಭಾರೀ ನಷ್ಟವನ್ನು ಕೊನೆಗೆ ಬಡತನ ರೇಖೆಗಿಂತ ಕೆಳಗಿರುವ ಜನರ ಮೇಲೆ ಹೊರಿಸಲಾಗುತ್ತದೆ ಎಂದು ವರದಿಯಲ್ಲಿ ದೂರಲಾಗಿದೆ.

ಇಂತಹ ಅನಾಹುತಗಳನ್ನು ತಪ್ಪಿಸಲು, ಭಾರತೀಯ ಆಹಾರ ನಿಗಮದ ಉಗ್ರಾಣಗಳಿಗೆ ಹಠಾತ್‌ ಭೇಟಿ ನೀಡಿ ನಿರ್ಲಕ್ಷ್ಯದಿಂದ ನಡೆದುಕೊಳ್ಳುತ್ತಿರುವ ಅಧಿಕಾರಿಗಳನ್ನು ಶಿಕ್ಷಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಸೇವನೆಗೆ ಯೋಗ್ಯವಲ್ಲದ 185 ಕೋಟಿ ರೂಪಾಯಿ ಮೌಲ್ಯದ ಸುಮಾರು ಎರಡುವರೆ ಲಕ್ಷ ಟನ್‌ ಆಹಾರ 1998ನೇ ಇಸವಿಯಲ್ಲಿಯೇ ಉಗ್ರಾಣದಲ್ಲಿತ್ತು. ಪ್ರಸ್ತುತ 10 ಲಕ್ಷ ಟನ್‌ ಆಹಾರ ಧಾನ್ಯ ಕೊಳೆತಿದ್ದು, ಸರಕಾರಕ್ಕೆ 700 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಲಿದೆ.

ಪಡಿತರ ಸಾಮಾನುಗಳ ದರ ಏರಿಸಿರುವುದರಿಂದ ಬಡತನ ರೇಖೆಗಿಂತ ಕೆಳಗಿರುವ ಜನ ಪಡಿತರದ ಆಹಾರವನ್ನು ಕೊಳ್ಳುವುದು ಕಡಿಮೆಯಾಗಿದೆ. ದೇಶದಲ್ಲಿ ಈ ಸಾಲಿನಲ್ಲಿ ಉತ್ತಮ ಬೆಳೆಯಾಗುತ್ತಿದ್ದು , ಆಹಾರ ಸಂಗ್ರಹಣೆಯೂ ಹೆಚ್ಚುತ್ತಿರುವುದರಿಂದ ಏರಿಸಿರುವ ಪಡಿತರ ಸಾಮಾನು ದರವನ್ನು ಸರಕಾರ ವಾಪಾಸು ತೆಗೆದುಕೊಳ್ಳಬೇಕು ಎಂದು ಸಮಿತಿಯ ವರದಿ ಹೇಳಿದೆ.

ಬಾಲಂಗೋಚಿ : ಸಂಗ್ರಹಿಸಲು ಗೋದಾಮಿನ ಕೊರತೆ ಎಂದು ಪ್ರತಿಭಟಿಸಿ ಶಿವಮೊಗ್ಗದ ರೈತರಿಂದ ಜೋಳ ಸುಟ್ಟು ಪ್ರತಿಭಟನೆ. ಮತ್ತೊಂದೆಡೆ ಗೋದಾಮಿನಲ್ಲಿ ಧಾನ್ಯವನ್ನು ಕೊಳೆಸುವ ಸರ್ಕಾರ- ಅಧಿಕಾರಿಗಳು... ಇದು ಭಾರತದ ಕೃಷಿರಂಗ !

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X