ಭಾರತ್ ಸಂಚಾರ್ ಏಷ್ಯಾ ಕಪ್ ಟೆನಿಸ್ : ಭಾರತಕ್ಕೆ ಕೊರಿಯಾದ ಸ್ಪರ್ಧೆ
ನವದೆಹಲಿ : ಎಟಿಪಿ ವಿಶ್ವ ಡಬಲ್ಸ್ ನೆನಪು ಇನ್ನೂ ಹಸುರಾಗಿರುವಾಗಲೇ, ಮಂಗಳವಾರ ಪ್ರಾರಂಭವಾಗುವ ಭಾರತ್ ಸಂಚಾರ್ ಏಷ್ಯಾ ಕಪ್ ಟೆನಿಸ್ ಟೂರ್ನಿಯಲ್ಲಿ ಭಾರತ ಬಲಾಢ್ಯ ಕೊರಿಯಾದ ಸ್ಪರ್ಧೆಗೆ ಅಣಿಯಾಗುತ್ತಿದೆ.
ಎಟಿಪಿ ವಿಶ್ವ ಡಬಲ್ಸ್ ನಂತರ ವಿಶ್ರಾಂತಿ ಬಯಸಿರುವ ಲಿಯಾಂಡರ್ ಪೇಸ್ ಅನುಪಸ್ಥಿತಿಯ ಕಾರಣ ಮಹೇಶ್ ಭೂಪತಿ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಭಾರತ ಬುಧವಾರ ಟೂರ್ನಿಯಲ್ಲಿ ಕೊರಿಯಾ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.
ಹ್ಯುಯಂಗ್ ಟೇಕ್ ಲೀ, ಯಾಂಗ್-2 ಯೂನ್ ಹಾಗೂ ಸೇಯಂಗ್ ಹುನ್ ಲೀ ಅವರನ್ನೊಳಗೊಂಡ ಕೊರಿಯಾ ತಂಡ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿದೆ. ಕಳೆದ ಸಾಲಿನ ಚಾಂಪಿಯನ್ಸ್ ಉಜ್ಬೇಕಿಸ್ತಾನ ಈ ಬಾರಿ ಸ್ಪರ್ಧೆಗೆ ಸೆಣಸುತ್ತಿಲ್ಲ. ಪುರುಷರ ವಿಭಾಗದ ಸ್ಪರ್ಧೆಯಲ್ಲಿರುವ ಇತರೆ ತಂಡಗಳೆಂದರೆ ಥೈಲ್ಯಾಂಡ್ ಹಾಗೂ ಚೀನಾ.
ನಾಲ್ಕನೇ ವರ್ಷದ ಈ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಚಾಂಪಿಯನ್ಷಿಪ್ನ್ನು ಪರಿಚಯಿಸಲಾಗುತ್ತಿದೆ. ಪುರುಷರ ವಿಭಾಗದಲ್ಲಿ 4 ಹಾಗೂ ಮಹಿಳೆಯರ ವಿಭಾಗದಲ್ಲಿ 3 ತಂಡಗಳು ಸ್ಪರ್ಧಿಸಲಿವೆ. ಈ ಹಿಂದೆ ಗುಂಪುಗಳನ್ನಾಗಿ ವಿಂಗಡಿಸದೆ, 8 ಪುರುಷರ ತಂಡಗಳ ನಡುವೆ ಸ್ಪರ್ಧೆ ನಡೆದಿತ್ತು.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications