Get Updates
Get notified of breaking news, exclusive insights, and must-see stories!

ಗೋಲ್ಡ್‌ ಫ್ಲೇಕ್‌ ಎಟಿಪಿ ವಿಶ್ವ ಡಬಲ್ಸ್‌ ಟೂರ್ನಿ : ಫೈನಲ್‌ಗೆ ಭಾರತ

ಬೆಂಗಳೂರು : ತಾಯ್ನಾಡಿನ ಅಂಗಣದಿ ಶನಿವಾರ, ಬಹುದಿನಗಳ ಕನಸು ನನಸಾಗಿ ಹೋಯ್ತು. ವೈಯುಕ್ತಿಕ ವೈಮನಸ್ಯ ತೊರೆದು ಮತ್ತೆ ಒಂದಾಗಿ ಹೋರಾಡುತ್ತಿರುವ ಭಾರತದ ಟೆನಿಸ್‌ ಜೋಡಿ ಲಿಯಾಂಡರ್‌ ಪೇಸ್‌ ಹಾಗೂ ಮಹೇಶ್‌ ಭೂಪತಿ ಇಲ್ಲಿ ನಡೆಯುತ್ತಿರುವ ಎಟಿಪಿ ವಿಶ್ವ ಡಬಲ್ಸ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ ಸೆಣಸಿನಲ್ಲಿ ಜಯಸಾಧಿಸಿ ವಿರೋಚಿತವಾಗಿ ಫೈನಲ್‌ ಪ್ರವೇಶಿಸಿದರು.

ಕಬ್ಬನ್‌ ಪಾರ್ಕ್‌ನ ಕೆಎಸ್‌ಎಲ್‌ಟಿಎ ಸೆಂಟರ್‌ ಕೋರ್ಟ್‌ನಲ್ಲಿ ನಡೆದ ರೋಮಾಂಚಕಾರಿ ಪಂದ್ಯದಲ್ಲಿ ಅಗ್ರಸೀಡ್‌ ಅಮೆರಿಕದ ರಿಕ್‌ ಲೀಚ್‌ ಮತ್ತು ದಕ್ಷಿಣ ಆಫ್ರಿಕಾದ ಎಲಿಸ್‌ ಫೆರಿರಾ ಜೋಡಿಯನ್ನು 6-3, 7-5 ನೇರ ಸೆಟ್ಟುಗಳಲ್ಲಿ ಸೋಲಿಸಿದ ಭಾರತದ ಲಿಯಾಂಡರ್‌ ಪೇಸ್‌ ಹಾಗೂ ಭೂಪತಿ ಜೋಡಿ ಈಗ ಫೈನಲ್‌ಗೆ ರಹದಾರಿ ಪಡೆದಿದ್ದು, ಭಾನುವಾರ ನಡೆವ ಅಂತಿಮ ಪಂದ್ಯದಲ್ಲಿ ಐದನೇ ಸೀಡ್‌ ಆಟಗಾರರಾದ ಅಮೆರಿಕದ ಜಾನ್ಸನ್‌ ಹಾಗೂ ದಕ್ಷಿಣ ಆಫ್ರಿಕಾದ ಪಿಯೆಟ್‌ ನಾರ್ವಲ್‌ ಅವರನ್ನು ಎದುರಿಸಲಿದ್ದಾರೆ.

ಶನಿವಾರ ಹೊನಲು ಬೆಳಕಿನಲ್ಲಿ 1ಗಂಟೆ 27 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಕಿಕ್ಕಿರಿದು ನೆರೆದಿದ್ದ ಟೆನಿಸ್‌ ಪ್ರೇಮಿಗಳ ಅಭಿಮಾನ, ಪ್ರೋತ್ಸಾಹ, ಚಪ್ಪಾಳೆಗಳ ನಡುವೆ ವೀರಾವೇಶದಿಂದ ಗೆಲ್ಲುವತನಕ ಹೋರಾಟ ಎಂಬ ಛಲದಿಂದ ಹೋರಾಡಿದ ಭಾರತದ ಜೋಡಿ ಈ ಟೂರ್ನಿಯ ಹಾಟ್‌ ಪೇವರಿಟ್‌ ಎನಿಸಿದ್ದ ರಿಕ್‌ ಲೀಚ್‌ ಮತ್ತು ಫೆರಿರಾ ಜೋಡಿಯನ್ನು ಪರಾಭವಗೊಳಿಸಿದಾಗ ಕರತಾಡನ, ಜಯಘೋಷ ಮುಗಿಲು ಮುಟ್ಟಿತು.

ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದ ಭೂಪತಿ ಹಾಗೂ ಪೇಸ್‌ರ ರ್ಯಾಕೆಟ್‌ನಿಂದ ಸಿಡಿಲಿನಂತೆ ಸಿಡಿದ ಸರ್ವ್‌ಗಳು, ಚಾಕಚಕ್ಯತೆಯಿಂದ ಕೂಡಿದ ರಿಟರ್ನ್‌ಗಳು, ಸರಿಸಾಟಿಯಿಲ್ಲದಂತಹ ಏಸ್‌ಗಳಿಂದಾಗಿ ಎದುರಾಳಿ ತಂಡ ನಿಬ್ಬೆರಗಾಗಿ ಶರಣಾಗುವುದು ಅನಿವಾರ್ಯವಾಯ್ತು. ಈ ಚರಿತ್ರಾರ್ಹ ಗೆಲುವನ್ನು ಕಣ್ಣಾರೆ ಕಂಡ ಬೆಂಗಳೂರು ಟೆನಿಸ್‌ ಅಭಿಮಾನಿಗಳು ಉದ್ಯಾನ ನಗರಿಯ ಕಬ್ಬನ್‌ ಉದ್ಯಾನದಲ್ಲಿ ವಿಜಯೋತ್ಸವ ಆಚರಿಸಿದರು.

ಪ್ರತಿಕ್ರಿಯೆ : ಪಂದ್ಯ ಗೆದ್ದ ನಂತರ ವಿಜಯ್‌ ಅಮೃತ್‌ ರಾಜ್‌ ಅವರಿಗೆ ಪ್ರತಿಕ್ರಿಯಿಸಿದ ಪೇಸ್‌ ಹಾಗೂ ಭೂಪತಿ ಜೋಡಿ ಹೇಳಿದ್ದು : ತಮ್ಮ ಈ ಗೆಲುವಿಗೆ ತಾಯ್ನಾಡಿನ ಅಭಿಮಾನಿಗಳ ಒಕ್ಕೂರಲಿನ ಬೆಂಬಲವೇ ಕಾರಣ. ಅವರೂ ಅತ್ಯುತ್ತಮವಾಗೇ ಆಡಿದರು. ಇಂದೂ ನಾವೂ ಪ್ರೇಕ್ಷಕರ ಪ್ರೋತ್ಸಾಹದಿಂದ ಹುರಿದುಂಬಿ ಆಡಿದೆವು. ಭಾನುವಾರದ ಪಂದ್ಯ ನಮಗೆ ಅತಿ ದೊಡ್ಡ ಸವಾಲು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+