Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ವ್ಯವಹಾರದಲ್ಲಿ ಉತ್ಸಾಹ ಉಲ್ಲಾಸವಿದೆ. ವಿಚಲಿತರಾಗದೆ ಬರುವುದನ್ನು ಧೈರ್ಯವಾಗಿ ಎದುರಿಸಿ, ಜಗಳವಾಡುವ ಪ್ರಸಂಗ ಬಂದೀತು, ನೀವೇ ಸೋತು ಬಿಡಿ.

ವೃಷಭ : ನಿಮ್ಮ ವರ್ತನೆ ಏಕೋ ಹದ್ದು ಮೀರಿದೆ ಎಂದು ನಿಮಗೆ ಅನ್ನಿಸುತ್ತಿದೆ. ಮನಸ್ಸನ್ನು ನಿಯಂತ್ರಣದಲ್ಲಿದೆ. ನಿಮ್ಮನ್ನು ನೀವು ಗೆದ್ದರೆ, ಜಗವೇ ನಿಮ್ಮ ಅಧೀನ. ಕಠಿಣ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ.

ಮಿಥುನ : ಅಷ್ಟಮ ಸ್ಥಾನದಲ್ಲಿ ಶುಕ್ರ ನಿಮಗೆ ಅಸಂತೋಷ ತರಲಿದ್ದಾನೆ. ದೈವಾನುಗ್ರಹ ನಿಮ್ಮಲ್ಲಿರುವುದರಿಂದ ಸಹಾಯವೂ ದೊರಕಲಿದೆ. ಮನೆದೇವರನ್ನು ನಂಬಿ ಹೆಜ್ಜೆ ಇಡಿ.

ಕಟಕ : ನಿಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ. ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆಯೂ ಆದೀತು. ಬದುಕಲ್ಲಿ ಪ್ರಗತಿ ಇದೆ. ಮನಸ್ಸಿಗೆ ನೆಮ್ಮದಿ ಇದೆ. ವಿಶ್ರಾಂತಿಗೆ ಸುದಿನ.

ಸಿಂಹ : ಬಲವುಳ್ಳ ಗ್ರಹಗಳ ಪ್ರಭಾವದಿಂದ ನೀವು ಪುರುಷ ಸಿಂಹರೇ ಆಗಿದ್ದೀರಿ. ಹಾಗೆಂದು ಸ್ವರ್ಗಕ್ಕೆ ಸೋಪಾನ ಕಟ್ಟಬೇಡಿ. ಸತ್ಪುರುಷರ ದರ್ಶದಿಂದ ನಿಮಗೆ ಲಾಭವಿದೆ. ಆರೋಗ್ಯದ ಬಗ್ಗೆ ಕೊಂಚ ಕಾಳಜಿ ಅಗತ್ಯ.

ಕನ್ಯಾ : ಪ್ರಗತಿಯ ಹೊಸ ಮೆಟ್ಟಿಲುಗಳನ್ನು ಏರುತ್ತಿದ್ದೀರಿ. ಹತ್ತುವ ಏಣಿಯ ಕಾಲುಗಳೇ ಅಲುಗಾಡುತ್ತಿವೆ. ಎಚ್ಚರಿಕೆಯಿಂದ ಹೆಜ್ಜೆಯಿಡಿ. ಮನಸ್ಸಿನ ದ್ವಂದ್ವಗಳಿಂದ ಹೊರಬರಲು ಧ್ಯಾನವೇ ಆಧಾರ.

ತುಲಾ : ನಿಮ್ಮ ಮನಸ್ಸೂ ಹೆಚ್ಚು ಕಮ್ಮಿ ತಕ್ಕಡಿಯಂತೆಯೇ ತೂಗಾಡುತ್ತಿದೆ. ಇದೆಲ್ಲಾ ಕ್ಷಣಿಕ. ಸಾವಧಾನದಿಂದ ಚಿಂತಿಸಿದರೆ, ಪ್ರಗತಿ, ಅತುರಪಟ್ಟರೆ ಕೇಡು. ಅತಿಯಾಸೆ ಪಟ್ಟರಂತೂ ಮುಗಿದೇ ಹೋಯಿತು. ಮರೆಯಬೇಡಿ.

ವೃಶ್ಚಿಕ : ಚೇಳಿನಂತೆಯೇ ಇತರರಿಗೆ ಕುಟುಕುವ ಸ್ವಭಾವ ನಿಮ್ಮದು. ನಿಮ್ಮ ಅತಿ ಬುದ್ಧಿವಂತಿಕೆಯ ಸಲಹೆಗಳು, ಕುಹಕದ ನುಡಿಗಳು ಇತರರಿಗೆ ನೋವು ಮಾಡುತ್ತವೆ ಎನ್ನುವುದನ್ನು ಮರೆಯಬೇಡಿ. ಯಾರನ್ನೂ ಕಡೆಗಣಿಸಬೇಡಿ. ಒಂದು ಹುಲ್ಲೂ ನೆರವಿಗೆ ಬರುತ್ತದೆ.

ಧನಸ್ಸು : ಪ್ರೀತಿ, ಪ್ರೇಮ, ಸರಸಕ್ಕೆ ಬೇರೆಯೇ ವೇದಿಕೆ ಇದೆ. ಎಲ್ಲರ ಕಣ್ಣುಗಳೂ ನಿಮ್ಮ ಮೇಲೆ ಇದ್ದಾಗಲಾದರೂ ಕೊಂಚ ಅಂಜಿಕೆ ಇರಲಿ. ಗುರು - ಶನಿಗಳ ಅಸಹಕಾರವಿದ್ದಾಗ್ಯೂ ಮಂಗಳನ ಬಲದಿಂದ ಲಾಭವಿದೆ. ವ್ಯಾಪಾರದಲ್ಲಿ ಜಯವಿದೆ.

ಮಕರ : ಪ್ರಯಾಣದ ಯೋಚನೆ ಬಿಡಿ. ನಿಮಗೆ ಅಗತ್ಯವಾಗಿ ಬೇಕಿರುವುದು ನೆಮ್ಮದಿ, ವಿಶ್ರಾಂತಿ. ಶುಕ್ರನ ಉತ್ತಮ ಸಹಕಾರ ಇದೆ. ಭಾಗ್ಯದ ಬಾಗಿಲು ತೆರೆಯುತ್ತದೆ. ಸ್ಥಳ ಬದಲಾವಣೆಯ ಸೂಚನೆ ಬರುತ್ತದೆ. ಮಾನಸಿಕವಾಗಿ ಸಿದ್ಧರಾಗಿ.

ಕುಂಭ : ಇಷ್ಟು ದಿನ ಇದ್ದ ದುಗುಡ, ಸಮಸ್ಯೆ ಪರಿಹಾರವಾಗುತ್ತದೆ. ನಿಮ್ಮ ಪ್ರತಿಷ್ಠೆಗೆ ಕುಂದಾಗದಂತೆ ಕೆಲಸ ಮಾಡಿ. ಒತ್ತಡದ ಪರಿಸ್ಥಿತಿಗೆ ಮನಸ್ಸನ್ನು ಒಗ್ಗಿಸಿಕೊಳ್ಳಿ.

ಮೀನ : ಅನಂತ ಹಸ್ತದಿಂದ ಶುಭಫಲಗಳಿವೆ. ಮುಂದಾಲೋಚನೆಯಿಂದ ನಿಮ್ಮದೇ ಸಾಮ್ರಾಜ್ಯ ನೀವು ಕಟ್ಟುತ್ತೀರಿ. ಕುತ್ಸಿತ ಮನಸ್ಸಿನ ಎಳೆಯರ ಮಾತು ಉಪೇಕ್ಷಿಸಿ. ನಾಯಿ ಬೊಗುಳಿದರೆ ದೇವಲೋಕ ಹಾಳಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+