Get Updates
Get notified of breaking news, exclusive insights, and must-see stories!

ಅಂಚೆ ಮುಷ್ಕರ : ಕೆಲಸಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ - ಎಚ್ಚರಿಕೆ

ಬೆಂಗಳೂರು : ಡಿಸೆಂಬರ್‌ 5ನೇ ತಾರೀಖಿನಿಂದ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮುಷ್ಕರದ ಮಾರ್ಗ ಹಿಡಿದಿರುವ ಅಂಚೆ ನೌಕರರಿಗೆ ರಾಜ್ಯ ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ಕೇಳ್ಕರ್‌ ಅವರು ಮಾಡಿಕೊಂಡಿರುವ ಮನವಿಯೂ ಪಥ್ಯವಾಗಿಲ್ಲ. ಮುಷ್ಕರವನ್ನು ಕೇಂದ್ರ ಸರಕಾರ ಕಾನೂನು ಬಾಹಿರ ಎಂದಿದ್ದರೂ ನೌಕರರು ಜಗ್ಗಿಲ್ಲ.

11ನೇ ದಿನವಾದ ಶುಕ್ರವಾರವೂ ರಾಜ್ಯದಲ್ಲಿ ಅಂಚೆ ನೌಕರರು ತಮ್ಮ ಶಾಂತಿಯುತ ಪ್ರತಿಭಟನೆ ಮುಂದುವರಿಸಿದ್ದಾರೆ. ಶುಕ್ರವಾರ ನಗರದ ಮಹಾತ್ಮಾ ಗಾಂಧಿ ಪ್ರತಿಮೆಯ ಮುಂದೆ ಧರಣಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಶಿವಣ್ಣ ಹಾಗೂ ಕಾರ್ಯದರ್ಶಿ ಎಚ್‌.ಎಸ್‌.ನಾಗರಾಜ್‌ ಮಾತನಾಡಿ ದೆಹಲಿ ಹೈಕೋರ್ಟ್‌ ನೀಡಿರುವ ತೀರ್ಪು ಸರಕಾರಕ್ಕೆ ಅನ್ವಯಿಸುತ್ತದೆಯೇ ಹೊರತು ಅಂಚೆ ನೌಕರರಿಗಲ್ಲ ಎಂದು ಹೇಳಿದ್ದಾರೆ.

ಇತ್ತ ರಾಷ್ಟ್ರದಲ್ಲಿ ಅಂಚೆ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಆದರೂ ಉನ್ನತಾಧಿಕಾರಿಗಳು ನೌಕರರು ಕೆಲಸಕ್ಕೆ ಹಾಜರಾಗುತ್ತಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಮುಷ್ಕರ ಕಾನೂನು ಬಾಹಿರ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡಿದ್ದಾರೆ. ಸದನದಲ್ಲೂ ಮುಷ್ಕರದ ವಿಷಯ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸಭಾತ್ಯಾಗವೂ ನಡೆಯಿತು.

ಕಠಿಣ ಕ್ರಮ - ಎಚ್ಚರಿಕೆ : ರಾಷ್ಟ್ರವ್ಯಾಪಿ ಅಂಚೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ ಸೂಚಿಸಿದೆ. ಈ ಸಂಬಂಧ ಸೂಚನೆ ಪತ್ರ ಕಳುಹಿಸಲಾಗಿದೆ ಎಂದು ರಾಮ್‌ ವಿಲಾಸ್‌ ಪಾಸ್ವಾನ್‌ ತಿಳಿಸಿದ್ದಾರೆ. ನೌಕರರು ಕೆಲಸಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಸರಕಾರ ಎಚ್ಚರಿಸಿದೆ.

ಮಂಗಳೂರು ವರದಿ : ಕೇಂದ್ರ ಸರಕಾರ ಎಸ್ಮಾ ಜಾರಿಗೆ ತಂದರೂ ಎದುರಿಸಲು ನಾವು ಸಿದ್ಧ ಎಂದು ಅಂಚೆ ನೌಕರರ ಸಂಘದ ಜಂಟಿ ಕ್ರಿಯಾ ಸಮಿತಿ ಹೇಳಿದೆ. ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಟಿ. ರಾಮಕೃಷ್ಣರಾವ್‌ ಬೇಡಿಕೆ ಈಡೇರುವ ತನಕ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.

ಮುಷ್ಕರವನ್ನು ಕಾನೂನು ಬಾಹಿರ ಎನ್ನುವ ಸರಕಾರ ಮಾತುಕತೆ ನಡೆಸುತ್ತಿರುವ ಔಚಿತ್ಯವೇನು ಎಂದೂ ಅವರು ಪ್ರಶ್ನಿಸಿದರು.

ಮೈಸೂರು ವರದಿ : ಮೈಸೂರಿನಲ್ಲಿ ಅಂಚೆ ನೌಕರರು ಶುಕ್ರವಾರ ಮೆರವಣಿಗೆ ನಡೆಸಿದರು. ತಮ್ಮ ಬೇಡಿಕೆ ಈಡೇರುವ ತನಕ ಹೋರಾಟ ಮುಂದುವರಿಸುವ ನಿರ್ಧಾರವನ್ನೂ ಅವರು ಕೈಗೊಂಡರು. (ಯು.ಎನ್‌.ಐ. ಇನ್ಫೋ ವರದಿ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+