Get Updates
Get notified of breaking news, exclusive insights, and must-see stories!

ಭೀಕರ ರಸ್ತೆ ದುರಂತ : ಮದುವೆಗೆ ಹೊರಟ 20 ಮಂದಿ ಮಸಣಕ್ಕೆ

ಬೆಂಗಳೂರು : ತಮಿಳು ನಾಡಿನ ಧರ್ಮ ಪುರಿ ಜಿಲ್ಲೆಯ ಸಿಂಗಂ ಪೇಟೆಯ ಬಳಿ ತಿಪಟೂರಿನ ಪಂಚನಾಥನ್‌ ಅವರ ಮಗನ ಮದುವೆ ದಿಬ್ಬಣವನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್‌ ಕೆರೆಗೆ ಉರುಳಿ ಬಿದ್ದು ಬಸ್ಸಿನಲ್ಲಿದ್ದ ಇಬ್ಬರು ಮಕ್ಕಳೂ ಸೇರಿದಂತೆ 20 ಮಂದಿ ಮೃತ ಪಟ್ಟಿದ್ದಾರೆ.

ತಿರುವಣ್ಣಾ ಮಲೈ ಮಾರ್ಗದ ಸಿಂಗಂಪೇಟೆ ಕೆರೆ ಬಳಿ ಬುಧವಾರ ಮಧ್ಯಾಹ್ನ ಕಬ್ಬು ತುಂಬಿದ್ದ ಲಾರಿಯಾಂದು ಖಾಸಗಿ ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಬಸ್‌ ಕೆರೆಗೆ ಬಿದ್ದು ಮುಳುಗಿತು.

ಅಪಘಾತದಲ್ಲಿ ಪಂಚನಾಥನ್‌ ಅವರ ಕುಟುಂಬದ ಎಲ್ಲರೂ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತರನ್ನು , ಮುರಳೀಧರ್‌(32), ನರಸಿಂಹ ಮೂರ್ತಿ (55), ಎಸ್‌. ಎಂ. ಮಂಜುನಾಥ(68), ವಾದ್ಯರಾಜ್‌(35), ನಾಗರತ್ನಂ (40), ಸುಲೋಚನಮ್ಮ (52), ಶೋಭಾ (28), ಶೈಲಕುಮಾರಿ (35), ಮಂಜುಳಾ(32), ಪುಷ್ಪಾ (23), ರಾಜಸಿರಿ (4) ಮತ್ತು ಗಣೇಶ (4) ಎಂದು ಗುರುತಿಸಲಾಗಿದೆ.

ಉಳಿದವರ ಮೃತ ದೇಹಗಳು ಬಸ್ಸಿನಲ್ಲಿ ಸಿಲುಕಿರಬಹುದು ಎಂದು ಶಂಕಿಸಲಾಗಿದೆ. ಬಸ್ಸನ್ನು ಹೊರತೆಗೆಯಲು ಕ್ರೇನ್‌ನ್ನು ಬಳಸಲಾಗುತ್ತಿದೆ. ಪ್ರಯಾಣಿಸುತ್ತಿದ್ದ 59 ಮಂದಿಯಲ್ಲಿ 38 ಮಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ. ಮೂಲತಃ ತಮಿಳುನಾಡಿನವರಾದ ಪಂಚನಾಥನ್‌ ತಿಪಟೂರಿನಲ್ಲಿ ವ್ಯಾಪಾರ ನಡೆಸುತ್ತಿದ್ದರು. ಅವರ ಮಗ ರವಿಯ ವಿವಾಹ ಗುರುವಾರ ನಡೆಯಬೇಕಾಗಿತ್ತು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+