ಬೆಂಗಳೂರಲ್ಲಿ ವಿಶ್ವ ಡಬಲ್ಸ್ ಟೆನ್ನಿಸ್
ಬೆಂಗಳೂರು : ಟೆನ್ನಿಸ್ ಪ್ರಿಯರಿಗೆ ಸಂತಸದ ಸುದ್ದಿ. ಬೆಂಗಳೂರಿನಲ್ಲಿ ಬುಧವಾರದಿಂದ ಭಾನುವಾರದವರೆಗೆ ಗೋಲ್ಡ್ ಫ್ಲೇಕ್ ಎಟಿಪಿ ವಿಶ್ವ ಡಬಲ್ಸ್ ಟೆನ್ನಿಸ್ ಛಾಂಪಿಯನ್‌ಷಿಪ್ ಪಂದ್ಯಾವಳಿ ನಡೆಯಲಿದೆ. ಕಬ್ಬನ್ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಸಂಸ್ಥೆ ನಿರ್ಮಿಸಿರುವ ನೂತನ ಸ್ಟೇಡಿಯಂನಲ್ಲಿ ಐದು ದಿನಗಳ ಕಾಲ ಹೊನಲು ಬೆಳಕಿನಲ್ಲೂ ಈ ಚಾರಿತ್ರಿಕ ಪಂದ್ಯಾಟ ಜರುಗಲಿದೆ.
ವಿಶ್ವದ ಅಗ್ರಮಾನ್ಯ ಡಬಲ್ಸ್ ಆಟಗಾರರ ಜಟಾಪಟಿಗೆ ಮೂರು ಅಂಗಣಗಳು ಸಜ್ಜಾಗಿವೆ. ಭಾರತದ ಅಗ್ರಮಾನ್ಯ ಆಟಗಾರರಾದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಜೋಡಿ, ದಕ್ಷಿಣ ಆಫ್ರಿಕಾದ ಎಲಿಸ್ ಫೆರೆರಾ ಮತ್ತು ಅಮೆರಿಕದ ರಿಕ್‌ಲೀಚ್ ಜೋಡಿ, ಹಾಲೆಂಡ್‌ನ ಪಾಲ್ ಹಾರ್ಯೂಸ್ ಮತ್ತು ಆಸ್ಟ್ರೇಲಿಯಾದ ಸ್ಯಾಂಡೋನ್ ಸ್ಟೋಲ್ ಜೋಡಿ, ಅಮೆರಿಕದ ಅಲೆಕ್ಸ್ ಓಬ್ರಿಯಾನ್ ಮತ್ತು ಜರೇದ್ ಪಾಲ್ಮರ್ ಜೋಡಿ, ದಕ್ಷಿಣ ಆಫ್ರಿಕಾದ ಡೇವಿಡ್ ಆ್ಯಡಮ್ಸ್ ಹಾಗೂ ಜಾನ್ ಲಫ್ನಿ ಜೋಡಿ, ಆಸ್ಟ್ರೇಲಿಯಾದ ಜೋಶ್ ಈಗಲ್ ಮತ್ತು ಆಂಡ್ರಿವ್ ಫ್ಲೋರೆಂಡ್ ಜೋಡಿ, ಅಮೆರಿಕದ ಡಾನ್ ಜಾನ್ಸನ್ ಮತ್ತು ಪೀಯೆಟ್ ನಾರ್ವಲ್ ಜೋಡಿ, ದಕ್ಷಿಣ ಅಮೆರಿಕದ ಜೈಮೆ ಓನ್ಸಿನ್ಸ್ ಮತ್ತು ಅರ್ಜೆಂಟೀನಾದ ಡೇನಿಯಲ್ ಒರ್ಸಾನಿಕ್ ಜೋಡಿ ಪ್ರಶಸ್ತಿಗಾಗಿ ಸೆಣಸಲಿದೆ.
ಆತಿಥೇಯ ಭಾರತದ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಈ ಚಾಂಪಿಯನ್‌ಷಿಪ್‌ನಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದ ಏಕೈಕ ಜೋಡಿ. ತಾಯ್ನಾಡಿನ, ತಾಯ್ಮಣ್ಣಿನ ಕ್ರೀಡಾಂಗಣದಲ್ಲಿ ಅಪಾರ ಅಭಿಮಾನಿಗಳ ಹರ್ಷೋದ್ಗಾರ ಹಾಗೂ ಪ್ರೋತ್ಸಾಹದೊಂದಿಗೆ ಈ ಜೋಡಿ ಮಾಡಲಿರುವ ಸಾಧನೆಯ ಬಗ್ಗೆ ಈಗ ಎಲ್ಲರ ಗಮನ.
3.5 ಕೋಟಿ ರು ಬಹುಮಾನ : ಅಂದಹಾಗೆ ಈ ಟೂರ್ನಿಯ ಬಹುಮಾನದ ಮೊತ್ತ ಎಷ್ಟು ಗೊತ್ತೆ ? 7,50,000 ಅಮೆರಿಕನ್ ಡಾಲರ್‌ಗಳು ಅಂದರೆ ಸುಮಾರು ಮೂರು ಕೋಟಿ 50ಲಕ್ಷ ರುಪಾಯಿಗಳು.
ಮೊದಲ ಪಂದ್ಯ : ಭಾರತದ ಜೋಡಿ ಬುಧವಾರ ತನ್ನ ಮೊದಲ ಪಂದ್ಯದಲ್ಲಿ ಈ ಟೂರ್ನಿಯ ಬಲಿಷ್ಠ ಜೋಡಿಯಾದ ಎರಡನೇ ಶ್ರೇಯಾಂಕದ ಪಾಲ್ ಹಾರ್ಯೂಸ್ ಮತ್ತು ಸ್ಯಾಂಡನ್ ಸ್ಟೂಲ್ ವಿರುದ್ಧ ಸೆಣಸಲಿದೆ. ಇದೇ ಗುಂಪಿನಲ್ಲಿ ಭಾರತದ ಜೋಡಿ ಅಲೆಕ್ಸ್ ಓಬ್ರಿಯಾನ್ ಮತ್ತು ಜರೇದ್ ಪಾಲ್ಮರ್ ಜೋಡಿ, ಡಾನ4 ಜಾನ್ಸನ್ ಮತ್ತು ಪಿಯೆಟ್ ನಾರ್ವೆಲ್ ಜೋಡಿ ವಿರುದ್ಧವೂ ಸೆಣಸಬೇಕು.
ಅಗ್ರ ಶ್ರೇಯಾಂಕದ ಎಲಿಸ್ ಫೆರೆರಾ ಮತ್ತು ರಿಕ್ ಲೀಚ್ ಜೋಡಿ ರೆಡ್ ಗುಂಪಿನಲ್ಲಿದೆ. ಆದಗ್ಯೂ ಕೂಡ ಲೆಂಡರ್ ಪೇಸ್ ಪ್ರತಿಕ್ರಿಯೆ ಏನು ಗೊತ್ತೆ. ಡ್ರಾ ನಮಗೆ ಅನುಕೂಲ ಕರವಾಗಿಲ್ಲ ಎಂಬುದು. ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಂಗಳವಾರ ಡ್ರಾ ಎತ್ತಿದ್ದರು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications