ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕಲ ಸರ್ಕಾರಿ ಗೌರವದೊಂದಿಗೆ ಜೆ.ಎಚ್‌. ಪಟೇಲ್‌ ಅಂತ್ಯಕ್ರಿಯೆ

By Staff
|
Google Oneindia Kannada News

ಕಾರಿಗನೂರು : ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಸಮಾಜವಾದಿ ಮುಖಂಡ ಜೆ.ಎಚ್‌. ಪಟೇಲ್‌ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ದಾವಣಗೆರೆಗೆ 20 ಕಿ.ಮೀ. ದೂರದಲ್ಲಿರುವ ಅವರ ಸ್ವಂತ ಊರಾದ ಕಾರಿಗನೂರಿನ ರುದ್ರಭೂಮಿಯಲ್ಲಿ ಬುಧವಾರ ಸಂಜೆ ನೆರವೇರಿತು.

ನೂರಾರು ಅಭಿಮಾನಿಗಳು , ಹಿರಿಯ ರಾಜಕಾರಣಿಗಳು, ರಾಜಕೀಯ ಕಾರ್ಯಕರ್ತರು ಮೃತರ ಅಂತ್ಯಕ್ರಿಯೆ ಸಂದರ್ಭದಲ್ಲಿ ಹಾಜರಿದ್ದು ತಮ್ಮ ಅಶ್ರುತರ್ಪಣ ಸಲ್ಲಿಸಿದರು. ಮೃತರ ಗೌರವ ಸೂಚಕವಾಗಿ ಸಶಸ್ತ್ರ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು. ಇದಕ್ಕೂ ಮುನ್ನ ದೇಹವನ್ನು ಮೆರವಣಿಗೆಯಲ್ಲಿ ರುದ್ರಭೂಮಿಗೆ ಒಯ್ಯಲಾಗಿತ್ತು.

ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ , ಕೇಂದ್ರಸಚಿವರಾದ ಧನಂಜಯ ಕುಮಾರ್‌, ನಿತೀಶ್‌ ಕುಮಾರ್‌, ಶ್ರೀನಿವಾಸ ಪ್ರಸಾದ್‌, ಶರದ್‌ಯಾದವ್‌ ಹಾಗೂ ಮಾಜಿ ಕೇಂದ್ರ ಸಚಿವರಾದ ರಾಮಕೃಷ್ಣ ಹೆಗಡೆ, ಎಸ್‌.ಆರ್‌. ಬೊಮ್ಮಾಯಿ, ಎಸ್‌.ಬಂಗಾರಪ್ಪ , ರಾಜ್ಯ ಕೆಪಿಸಿಸಿಐ ಅಧ್ಯಕ್ಷ ಶಿವಾನಂದ ಕೌಜಲಗಿ, ಭಾಜಪ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್‌ ಸೇಡಂ, ವಿರೋಧ ಪಕ್ಷಗಳ ನಾಯಕ ಜಗದೀಶ್‌ ಶೆಟ್ಟರ್‌ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಅಂತ್ಯಕ್ರಿಯೆ ಸಂದರ್ಭದಲ್ಲಿ ಹಾಜರಿದ್ದರು.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X