Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ದೀರ್ಘ ಮನಸ್ತಾಪಗಳಿಗೆ ಎಡೆ ಮಾಡಿಕೊಡದಿರಿ. ಇಂದು ನಿಮ್ಮನ್ನು ಪರೀಕ್ಷಿಸುವಂತೆಯೇ ಗೆಳೆಯರು ನಡೆದುಕೊಳ್ಳುತ್ತಾರೆ. ಆದರದು ಅವರ ಪರೀಕ್ಷೆಯಾಗಿ ಪರಿಣಮಿಸಿ ನಿಜವಾದ ಬಣ್ಣ ಬಯಲಾಗುತ್ತದೆ.

ವೃಷಭ : ನೆಮ್ಮದಿಯ ನಾಳೆಗಾಗಿ ಈ ದಿನವನ್ನು ನರಕವಾಗಿಸಿಕೊಳ್ಳುವುದು ಬೇಡ. ಪ್ರಸ್ತುತ ವೃತ್ತಿಯಲ್ಲೇ ಆರಾಮಾಗಿರುವುದರಿಂದ ಹೊಸ ಅವಕಾಶದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.

ಮಿಥುನ : ಇದುವರೆಗೆ ಮಾಡಿದ ಮೋಜು ಸಾಕು. ಕರ್ತವ್ಯ ಕರೆಯುತ್ತಿದೆ. ಮರೆತದ್ದನ್ನು , ಮರೆತವರನ್ನು ಮತ್ತೆ ನೆನಪಿಸಿಕೊಳ್ಳಿ. ಸದ್ಯಕ್ಕೆ ಅವರ ಜೊತೆ ಏಗುವುದು ಅನಿವಾರ್ಯವಾದ್ದರಿಂದ ಚಿಂತೆ ಕೈ ಬಿಡಿ.

ಕಟಕ : ಯಾರು ಸಮರು ನನಗೆ ಎಂದು ನೀವೀವತ್ತು ಮೈ ಸೆಟೆಸಿ ನಡೆಯಬಹುದು. ಗ್ರಹಗತಿಗಳೆಲ್ಲಾ ನಿಮ್ಮ ಪರವಾಗಿಯೇ ಇವೆ. ಹೊಸ ಕೆಲಸ ಪ್ರಾರಂಭಿಸಲು ತಕ್ಕನಾದ ಮುಹೂರ್ತ.

ಸಿಂಹ : ಜಂಜಡದ ಬದುಕಿಗೆ ಹೊಸ ಹುರುಪು ತುಂಬಿಕೊಳ್ಳಲು ಪಿಕ್‌ನಿಕ್‌ ಯೋಚನೆ ಒಳ್ಳೆಯದೇ. ಮನೆ ಮಂದಿಯಾಂದಿಗೆ ಕಾಲ ಕಳೆಯುವಾಗ ಮಾಗಿ ಚಳಿ ಮನಸ್ಸಿಗೆ ತಟ್ಟದು.

ಕನ್ಯಾ : ಹೂ ಅರಳುತ್ತದೆ ಎಂದು ಏಸು ಕಾಲ ಕಾಯುತ್ತೀರಿ. ನಿಮ್ಮೆದುರಿಗೇ ಬೇಕಾದಷ್ಟು ಸೊಗಸಿನ ಹೂಗಳಿವೆ. ನೀವು ಇಷ್ಟ ಪಡುವವರಿಗಿಂತ ನಮ್ಮನ್ನು ಇಷ್ಟ ಪಡುವವರೇ ಒಳ್ಳೆಯ ಸಂಗಾತಿಯಾಗಬಲ್ಲರು.

ತುಲಾ : ಅಗ್ನಿ ದಿವ್ಯ ಎಂದರೆ ಇದುವೇನೆ. ಸದಾ ತುರುಸಿನಲ್ಲೇ ಬೆಳೆದು ಬಂದ ನಿಮಗೆ ಇದುವೇನೂ ಹೊಸದಲ್ಲವಾದರೂ, ತಲೆ ಮೇಲೆ ತೂಗುವ ಕತ್ತಿಯ ಬಗ್ಗೆ ಎಚ್ಚರ ಅಗತ್ಯ.

ವೃಶ್ಚಿಕ : ಏನ ಮಾಡಿದರೇನು ಭವ ಹಿಂಗದು ದಾಸ ವಾಣಿ ನಿಮ್ಮನ್ನು ಕುರಿತು ಹೇಳಿದ್ದೇನೂ ಇಲ್ಲ . ಅಸಲಿಗೆ ಕೆಲಸವನ್ನು ನೀವಿನ್ನು ಪ್ರಾರಂಭಿಸಿಯೇ ಇಲ್ಲ . ಈ ದಿನ ಅದು ಸಾಧ್ಯವಾಗುವುದೂ ಇಲ್ಲ .

ಧನಸ್ಸು : ಲಕುಮಿ ನಿಮ್ಮನ್ನು ಸೇರಲೆಂದು ಈ ಹೊತ್ತು ಧಾವಿಸಿ ಬರುವುದು ಖಂಡಿತ. ಜೂಜು, ಲಾಟರಿ.. ರೂಪು ಯಾವುದಾದರೂ ಆಗಬಹುದು. ಅದೃಷ್ಟದ ದಿನ.

ಮಕರ : ಯಾರನ್ನಾದರೂ ಅನುಮಾನಿಸುವುದು ಅವರನ್ನು ಅವಮಾನಿಸಿದಂತೆಯೇ ಅನ್ನುವ ಪ್ರಜ್ಞೆ ನಿಮ್ಮದಾಗಿದ್ದಲ್ಲಿ ನೀವು ಹೀಗೆ ಮಾಡುತ್ತಿರಲಿಲ್ಲ . ಅದೆಲ್ಲಾ ಇರಲಿ. ಇಂದು ಗುಂಗುಗಳ ದಿನ.

ಕುಂಭ : ಜೀವದ ಗೆಳೆಯ ಭೆಟ್ಟಿಯಾಗುತ್ತಾನೆ. ಸಂಜೆ ಐದರ ಚಳಿಯಾಂದಿಗೆ ಕಾಫಿ ಗುಟುಕರಿಸುವ ಮಧುರ ಆಹ್ಲಾದದ ದಿನ ಪೂರ್ತಿ ನಿಮ್ಮದು.

ಮೀನ : ಅಂತೂ ನಿಮ್ಮ ಒಂದು ಗುರಿ ಸಾಧಿಸಿತು. ಜಗ ಮೆಚ್ಚಿಸುವುದಿರಲಿ, ನಿಮ್ಮ ಮನಸ್ಸಿಗಾದರೂ ಬದ್ಧರಿದ್ದೀರಾ. ಆತ್ಮ ವಿಶ್ಲೇಷಣೆಗೆ ಸಕಾಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+