Get Updates
Get notified of breaking news, exclusive insights, and must-see stories!

ಟೆಲಿಫೋನ್‌ಗೆ ನಮಸ್ಕಾರ : ಕೇಬಲ್‌ ಮೂಲಕ ಇಂಟರ್ನೆಟ್‌ ಸಂಪರ್ಕ

ಮೊಹಮ್ಮದ್‌ ಶಫೀಕ್‌

ಹೈದರಾಬಾದ್‌: ಇಂಟರ್ನೆಟ್‌ ಸಂಪರ್ಕಕ್ಕಾಗಿ ಟೆಲಿಫೋನ್‌ ರಗಳೆಗಳನ್ನು ಸಹಿಸಿಕೊಳ್ಳುವ ಕಾಲ ಇನ್ನಿಲ್ಲ . ಕೇಬಲ್‌ ಮೂಲಕ ವಾಹಿನಿಗಳು ನಿಮ್ಮ ಮನೆಯ ಟೀವಿಗೆ ಹರಿದು ಬರುವಷ್ಟೇ ಸಲೀಸಾಗಿ, ಕೇಬಲ್‌ ಮೂಲಕವೇ ಇಂಟರ್ನೆಟ್‌ ಜೀವಗೊಳ್ಳುವ ಸವಲತ್ತು ಅಂಗಳದಲ್ಲಿದೆ. ಇಂಥಾ ಸೌಲಭ್ಯಕ್ಕೆ ಆಂಧ್ರಪ್ರದೇಶದ ರಾಜಧಾನಿಯಲ್ಲಿ ಬುಧವಾರ ಚಾಲನೆ ದೊರಕಿತು.

ಮ್ಯಾಕ್‌ ಇನ್‌ಫೋ ಕಂಪನಿ ಒದಗಿಸಿದ ಕೇಬಲ್‌ ಜಾಲವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು , ಈ ಸೌಲಭ್ಯ ಇತರ ಪ್ರಮುಖ ನಗರಗಳಿಗೂ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ ಎಂದರು. ಮುಂದಿನ 18 ತಿಂಗಳಲ್ಲಿ ರಾಜ್ಯದ ಪ್ರತಿ ಹಳ್ಳಿಗೂ ಇಂಟರ್ನೆಟ್‌ ಸೌಲಭ್ಯ ಕಲ್ಪಿಸಲಾಗುವುದು. ರಾಜ್ಯದಲ್ಲಿ ಫೈಬರ್‌ ಆಪ್ಟಿಕ್‌ ಲೈನ್‌ಗಳನ್ನು ಅಳವಡಿಸುವ ಕೆಲಸದಲ್ಲಿ ರಿಲಯನ್ಸ್‌ ಕಂಪನಿ ತೊಡಗಿದೆ ಎಂದು ನಾಯ್ಡು ಹೇಳಿದರು.

ಕೇಬಲ್‌ಗಳ ಅಳವಡಿಕೆಯಲ್ಲಿ ಮ್ಯಾಕ್‌ ಕಂಪನಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿದೆ. ಇದರಿಂದಾಗಿ ಕೇಬಲ್‌ ಸಂಪರ್ಕಕ್ಕೆ ಕಡಿಮೆ ವೆಚ್ಚವಾಗುತ್ತದೆ ಹಾಗೂ ಉತ್ತಮ, ತಡೆ ರಹಿತ ಕಾರ್ಯಕ್ಷಮತೆಯ ಇಂಟರ್ನೆಟ್‌ ಸೇವೆ ಲಭ್ಯವಾಗುತ್ತದೆ. ಅಧಿಕ ವೇಗದ ಇಂಟರ್ನೆಟ್‌ ಸೇವೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ನಾವು ನಡೆಸುತ್ತಿದ್ದೇವೆ ಎಂದು ಮ್ಯಾಕ್‌ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಎನ್‌.ವಿ. ಸುಬ್ಬರಾವ್‌ ಹೇಳಿದ್ದಾರೆ.

ಹೈದರಾಬಾದ್‌ ಹಾಗೂ ಸಿಕಂದರಾಬಾದ್‌ ಅವಳಿ ನಗರಗಳ 60 ಕಿಮೀ ವ್ಯಾಪ್ತಿಯಲ್ಲಿ ಕಂಪನಿ ಈಗಾಗಲೇ ಕೇಬಲ್‌ಗಳನ್ನು ಅಳವಡಿಸಿದೆ. ಮುಂದಿನ ಒಂದು ವರ್ಷದಲ್ಲಿ ಮತ್ತೆ 100 ಕಿಮೀ ಕೇಬಲ್‌ ಅಳವಡಿಸುವ ಉದ್ದೇಶವನ್ನು ಕಂಪನಿ ಹೊಂದಿದ್ದು, ಶೀಘ್ರದಲ್ಲಿಯೇ ವಿಜಯವಾಡಾ, ವಿಶಾಖಪಟ್ಟಣ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ತನ್ನ ಜಾಲವನ್ನು ವಿಸ್ತರಿಸುವುದು.

ಇಂಟರ್ನೆಟ್‌ ಕೇಬಲ್‌ ಸಂಪರ್ಕ ಪಡೆಯಲು ಕಂಪನಿ ಅಳವಡಿಕೆಯ ವೆಚ್ಚವಾಗಿ 5000 ಸಾವಿರ ರುಪಾಯಿ ಹಾಗೂ ತಿಂಗಳ ನಿರ್ವಹಣೆಯ ವೆಚ್ಚವಾಗಿ 1200 ರುಪಾಯಿ ಪಡೆಯಲಿದೆ. ಅಲ್ಲದೆ ಮೊದಲ ವರ್ಷದಲ್ಲಿ ಹೆಚ್ಚುವರಿ ನಿರ್ವಹಣಾ ವೆಚ್ಚವಾಗಿ ರು.500 ವಸೂಲು ಮಾಡುವುದು. ಇಂಟರ್ನೆಟ್‌ ಬಳಕೆಗೆ ಯಾವುದೇ ಕಾಲಮಿತಿಯಿಲ್ಲ ದ ಈ ಸೌಲಭ್ಯವನ್ನು ಹೊಂದಲು ಯೋಜನೆ ಜಾರಿಯಾಗುವ ಮುನ್ನವೇ ಸುಮಾರು 2 ಸಾವಿರ ಮಂದಿ ಹೆಸರುಗಳನ್ನು ನೋಂದಾಯಿಸಿದ್ದಾರೆ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+