Get Updates
Get notified of breaking news, exclusive insights, and must-see stories!

ಚಾಮರಾಜನಗರ ಜಿಲ್ಲೆ : ಮೂವರು ನೀರು ಪಾಲು

ಚಾಮರಾಜನಗರ : ಚಂದಕವಾಡಿ ಪಂಪ್‌ಹೌಸ್‌ ಬಳಿಯ ಸುವರ್ಣಾವತಿ ನಾಲೆಯಲ್ಲಿ ಒಬ್ಬ ಹಾಗೂ ಬಂಡೀಪುರ ಅಭಯಾರಣ್ಯದ ಹತ್ತಿರದ ಆನೆಗುಂದಿ ಕೆರೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಈಜಲು ಹೋಗಿ ಭಾನುವಾರ ನೀರು ಪಾಲಾಗಿದ್ದಾರೆ.

ಚಾಮರಾಜ ನಗರದ ನಾಲ್ಕು ವಿದ್ಯಾರ್ಥಿಗಳು ಸುವರ್ಣಾವತಿ ನಾಲೆಯಲ್ಲಿ ಈಜಲು ಹೋಗಿದ್ದರು. ಅವರಲ್ಲಿ ಕುರುಬಗೇರಿಯ ನಿವಾಸಿ ಮಹದೇವ ಸ್ವಾಮಿ (15) ನೀರಿನಿಂದ ವಾಪಸ್ಸು ಬರಲೇ ಇಲ್ಲ. ಈ ಹುಡುಗ ನಗರದ ಜೆ.ಎಸ್‌.ಎಸ್‌. ಕಾಲೇಜಿನಲ್ಲಿ 8ನೇ ಇಯತ್ತೆಯಲ್ಲಿ ಓದುತ್ತಿದ್ದ. ರಾಮಸಮುದ್ರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದೂರು ದಾಖಲಾಗಿದ್ದು, ಪೊಲೀಸ್‌ ತನಿಖೆ ನಡೆದಿದೆ.

ಇನ್ನೊಂದು ಪ್ರಕರಣದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪಿಕ್‌ನಿಕ್‌ಗೆ ಹೋಗಿದ್ದ ಐವರು ವಿದ್ಯಾರ್ಥಿಗಳ ತಂಡದ ಇಬ್ಬರು ಆನೆಗೊಂದಿ ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾರೆ. ಚಾಮರಾಜನಗರದ ಮಿಠಾಯಿ ವ್ಯಾಪಾರಿ ಶಾಂತಪ್ಪನವರ ಮಗ ಕಿರಣ್‌ (18) ಹಾಗೂ ವಡೆ ಗೋಪಾಲ್‌ ಎಂಬುವರ ಮೊಮ್ಮಗ ರಾಕೇಶ್‌ (16) ಇವರೇ ಆ ನತದೃಷ್ಟರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+