ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ವಿಮಾನ ನಿಲ್ದಾಣ ಸಂಚಾರಕ್ಕೆ ಮುಕ್ತ

By Staff
|
Google Oneindia Kannada News

ಮಂಗಳೂರು : ಜೆಟ್‌ ಏರ್‌ವೇಸ್‌ ವಿಮಾನದ ಟೈರ್‌ ಸ್ಫೋಟದಿಂದ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಶನಿವಾರ ಆರಂಭಗೊಂಡಿದೆ. ಶನಿವಾರ ಮಂಗಳೂರು ವಿಮಾನ ನಿಲ್ದಾಣದಿಂದ ಹಾರಿದ ಹಾಗೂ ನಿಲ್ದಾಣದಲ್ಲಿ ಇಳಿದ ವಿಮಾನಗಳು ಸುರಕ್ಷಿತ ಹಾರಾಟ ನಡೆಸಿವೆ.

ಅಪಘಾತಕ್ಕೀಡಾದ ವಿಮಾನವನ್ನು ಪಾರ್ಕಿಂಗ್‌ ಜಾಗಕ್ಕೆ ಸ್ಥಳಾಂತರಿಸಲು ಸಿಬ್ಬಂದಿ ಯಶಸ್ವಿಯಾಗಿದ್ದು, ರನ್‌ವೇ ಸಂಚಾರಕ್ಕೆ ಮುಕ್ತವಾಗಿದೆ. ಜೆಟ್‌ ವಿಮಾನದ ದುರಸ್ತಿಕಾರ್ಯ ಆರಂಭಗೊಂಡಿದ್ದು ಭಾನುವಾರ ಸಂಜೆಯ ವೇಳೆಗೆ ಹಾರಾಟಕ್ಕೆ ಯೋಗ್ಯವಾಗಲಿದೆ ಎಂದೂ ತಿಳಿದುಬಂದಿದೆ.

ವಿಮಾನ ಯಾನ ಸುರಕ್ಷತಾ ತಂಡದ ಅಧಿಕಾರಿಗಳು ಮಂಗಳೂರಿಗೆ ಬಂದಿದ್ದು, ಸ್ಫೋಟಕ್ಕೆ ಕಾರಣ ಏನು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X