Get Updates
Get notified of breaking news, exclusive insights, and must-see stories!

ಸೈಬರ್‌ ಅಪರಾಧ ತಡೆಗೆ ಸಮಗ್ರ ಕಾಯಿದೆ ನಿರ್ಧಾರ : ಸುಷ್ಮಾ ಸ್ವರಾಜ್‌

ಬೆಂಗಳೂರು : ಸೈಬರ್‌ ತಂತ್ರಜ್ಞಾನ ವಿಶ್ವ ವ್ಯಾಪಿಯಾಗುತ್ತಿರುವಂತೆಯೇ ರಾಷ್ಟ್ರದಲ್ಲಿ ಅಧಿಕಗೊಳ್ಳುತ್ತಿರುವ ಸೈಬರ್‌ ಅಪರಾಧಗಳನ್ನು ತಡೆಗಟ್ಟಲು ಸಮಗ್ರ ಕಾಯಿದೆಯಾಂದನ್ನು ತರಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ತಿಳಿಸಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು ಈ ತಿಂಗಳ 26ರೊಳಗೆ ಕಾಯ್ದೆಯ ರೂಪುರೇಷೆಗಳನ್ನು ಇಂಟರ್‌ನೆಟ್‌ನಲ್ಲಿ ಅಳವಡಿಸಲಾಗುವುದು ಎಂದೂ ಹೇಳಿದರು. ಸೈಬರ್‌ ಕಂಪನಿಗಳಿಂದ ಮಾಹಿತಿ ಸಂಗ್ರಹಿಸಿ ಹಾಗೂ ಸಲಹೆ ಸೂಚನೆಗಳನ್ನು ಪಡೆದು ಆನಂತರ ಮುಂದಿನ ಬಜೆಟ್‌ ಅಧಿವೇಶನದಲ್ಲಿ ಕಾಯಿದೆಯನ್ನು ಮಂಡಿಸಲಾಗುವುದು ಎಂದ ಅವರು, ಈ ಕಾಯಿದೆ ಇಂಟರ್‌ನೆಟ್‌ ಭಯೋತ್ಪಾದನೆಯನ್ನು ಹತ್ತಿಕ್ಕುತ್ತದೆ ಎಂದರು.

ಇದಕ್ಕೂ ಮುನ್ನ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದೆ ಯುದ್ಧಗಳು ನಡೆಯುವುದು ಎರಡು ರಾಷ್ಟ್ರಗಳ ಸೇನೆಗಳ ನಡುವೆ ಅಲ್ಲ. ಎರಡು ಸಂಸ್ಕೃತಿಗಳ ನಡುವೆ. ಇದಕ್ಕಾಗಿ ನಮ್ಮ ದೂರದರ್ಶನ ಮಾಧ್ಯಮಗಳನ್ನು ಸಮರಕ್ಕೆ ಸಜ್ಜುಗೊಳಿಸಲಾಗುವುದು. ಇದು ನಮ್ಮ ಪ್ರಥಮ ಆದ್ಯತೆ ಆಗಿದೆ ಎಂದರು.

ಪಾಶ್ಚಾತ್ಯ ಟೀವಿ ಮಾಧ್ಯಮಗಳಿಂದಾಗಿ ಮನೆಮನಗಳನ್ನು ಪಾಶ್ಚಾತ್ಯ ಸಂಸ್ಕೃತಿ ಆವರಿಸುತ್ತಿದೆ. ಇದನ್ನು ಹತ್ತಿಕ್ಕಿ ನಮ್ಮ ಸಾಹಿತ್ಯ, ಸಂಸ್ಕೃತಿ, ಪರಂಪರೆ, ಜನಪದವನ್ನು ಬಿಂಬಿಸುವ ಕಾರ್ಯ ಮಾಡಬೇಕಾಗಿದೆ ಎಂದರು. ಜನರಿಗೆ ಆರೋಗ್ಯಪೂರ್ಣ ಮನರಂಜನೆ ನೀಡುವುದು ನಮ್ಮ ಗುರಿಯಾಗಿದೆ ಎಂದ ಅವರು, ರಾಮಾಯಣ - ಮಹಾಭಾರತ ಧಾರಾವಾಹಿಗಳು ಬರುತ್ತಿದ್ದ ಕಾಲದಲ್ಲಿ ಮಮ್ಮಿ - ಡ್ಯಾಡಿ ಸಂಸ್ಕೃತಿ ಮಾಯವಾಗಿ ತಾತಾಶ್ರೀ, ಮಾತಾಶ್ರೀ, ಪಿತಾಶ್ರೀ ಎಂಬ ಸಂಸ್ಕೃತಿ ನೆಲೆಯೂರಿತು ಎಂದೂ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+