ರೋಹಿತ್ : ಜರ್ಮನಿ ಗ್ರೀನ್ ಕಾರ್ಡ್ ಪಡೆದ ಮೊದಲ ಕನ್ನಡಿಗ
ದಾವಣಗೆರೆ : ಜರ್ಮನಿಯ ಪ್ರಸಿದ್ಧ ವಾರಪತ್ರಿಕೆ ಡೆರ್ ಸ್ಪೀಜಲ್, ಅಮೆರಿಕೆಯ ಪತ್ರಿಕೆ ಫೋರ್ಬ್ಸ್ ಆಸೆಪ್‌ಗಳಲ್ಲಿ ನಗರದ 24 ವರ್ಷದ ಹುಡುಗ ರೋಹಿತ್ ಅಜ್ಜಂಪುರ್ ಭಾವಚಿತ್ರ ಪ್ರಕಟವಾಗಿದೆ. ಬಿಬಿಸಿ ಟಿವಿ ಚಾನೆಲ್ ಕೂಡ ಇವರ ಸಂದರ್ಶನ ಪ್ರಸಾರ ಮಾಡಿದೆ. ಈಗ ಈತ ಸುದ್ದಿಯಲ್ಲಿರಲು ಕಾರಣ- ಜರ್ಮನಿಯ ಗ್ರೀನ್ ಕಾರ್ಡ್ ಪಡೆದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು.
ಯೂರೋಪ್ ಒಕ್ಕೂಟದಲ್ಲೇ 12ನೇ ಸ್ಥಾನದಲ್ಲಿರುವ ಜರ್ಮನಿಯ ಪ್ರಸಿದ್ಧ ಇಂಟರ್‌ನೆಟ್ ಕಂಪನಿ ಡೆಟ್ಯಾಂಗೋದಲ್ಲಿ ರೋಹಿತ್ ಜಾವಾ ಪ್ರೋಗ್ರಾಮರ್. ಚೆನ್ನೈನ ವಿವೇಕ್ ಭಾರದ್ವಾಜ್ ಜರ್ಮನಿಯ ಗ್ರೀನ್ ಕಾರ್ಡ್ ಪಡೆದ ಮೊದಲ ಭಾರತೀಯರಾದರೆ, ರೋಹಿತ್ ಎರಡನೆಯವರು. ಜರ್ಮನ್ ಸರ್ಕಾರ ಮಾಹಿತಿ ತಂತ್ರಜ್ಞಾನ ನೀತಿಯಲ್ಲಿ ಕಳೆದ ಆಗಸ್ಟ್ ತಿಂಗಳಿಂದ ತಂದಿರುವ ಬದಲಾವಣೆಯೇ ರೋಹಿತ್‌ಗೆ ಗ್ರೀನ್ ಕಾಡ್ ಸಿಗಲು ಕಾರಣ.
ಕಂಪ್ಯೂಟರ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ದೇಶದ ಅಧಿಕೃತ ಪರವಾನಗಿ ಎನ್ನಬಹುದಾದ ಗ್ರೀನ್ ಕಾರ್ಡ್ ಈ ಮುಂಚೆ ದೊರೆಯುತ್ತಿರಲಿಲ್ಲ. ಭಾರತ ಐಟಿ ಪರಿಣತರನ್ನು ಹೊಂದಿರುವ ದೇಶ ಎಂಬುದನ್ನು ಅರಿತ ಜರ್ಮನಿ ಅವರಿಗೂ ಈ ವಿಶೇಷ ಸವಲತ್ತು ನೀಡುತ್ತಿದೆ. ಗ್ರೀನ್ ಕಾರ್ಡ್ ಇರುವವರಿಗೆ ಜರ್ಮನ್ ರಾಷ್ಟ್ರೀಯತೆಯ ಪ್ರಶ್ನೆ ಬರುವುದಿಲ್ಲ.
ಅಜ್ಜಂಪುರ ವಿರೂಪಾಕ್ಷಪ್ಪ ಹಾಗೂ ಕಮಲಮ್ಮ ಎಂದರೆ ಇಡೀ ದಾವಣಗೆರೆಗೇ ಗೊತ್ತು. ಅವರದ್ದು ಕೊಡುಗೈ. ಇಂಥ ವಂಶದಲ್ಲಿ ಹುಟ್ಟಿದವರು ರೋಹಿತ್. ತಂದೆ ಅಜ್ಜಂಪುರ ರಂಗನಾಥ್ . ತಾಯಿ ಉಷಾ. ರೋಹಿತ್ ಸ್ಥಳೀಯ ಅನುಭವ ಮಂಟಪ ಶಾಲೆಯಲ್ಲಿ ಹೈಸ್ಕೂಲ್ ಓದಿದರು. ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಷಯದಲ್ಲಿ ಬಿ.ಇ. ಮಾಡಿದರು. ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿ ಮೊದಲಿಂದಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದ ರೋಹಿತ್ ನಗರದ ಬಹುತೇಕರ ಹೊಗಳಿಕೆಗೆ ಪಾತ್ರರಾಗಿದ್ದರು. 1992ರಲ್ಲಿ ರಾಷ್ಟ್ರಪತಿಗಳ ಸ್ಕೌಟ್ ಪುರಸ್ಕಾರವೂ ಸಿಕ್ಕಿತು.
ಸೆಪ್ಟೆಂಬರ್‌ನಿಂದ ಜರ್ಮನಿಯಲ್ಲಿ ನೆಲೆಸಿರುವ ರೋಹಿತ್, ನಾನು ಇವತ್ತು ಏನು ಸಾಧಿಸಿದ್ದರೂ ಅದಕ್ಕೆ ನನ್ನ ಅಪ್ಪ- ಅಮ್ಮ, ಸೋದರರು ಹಾಗೂ ಕುಟುಂಬದ ಎಲ್ಲಾ ಸದಸ್ಯರ ಸಹಕಾರವೇ ಕಾರಣ ಎನ್ನುತ್ತಾರೆ. ರೋಹಿ-ತ್-ಗೆ ಇಂಡಿ-ಯಾ-ಇ-ನ್ಫೋ ಶುಭಾ--ಶ-ಯ-ಗ-ಳು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications