ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಹೀಗೂ ಆಗುತ್ತಾ ಎಂದು ಯೋಚಿಸುತ್ತೀರಿ. ಒಗರಿನ ಜೊತೆಗೆ ಖುಷಿಯ ಸಿಹಿ ನಿಮ್ಮ ನ್ನು ಎದುರು ನೋಡುತ್ತಿದೆ. ಬಾಂಧವರನ್ನು ನೋಡುವ ಯೋಗ ಇದೆ.ವೃಷಭ : ನೀವಂದು ಕೊಂಡಂತೆ ಆಗಬೇಕಿದ್ದರೆ ಪ್ರಯತ್ನ ಇನ್ನಷ್ಟು ಬೇಕು. ಬಿಸಿನೆಸ್ ಫೀಲ್ಡ್‌ನ ಆಕರ್ಷಣೆ ಉತ್ತಮವಾದದ್ದೇ.
ಮಿಥುನ : ಗೊಂದಲ ನಿಮಗಂಟಿಕೊಂಡದ್ದು ಎಂದು ಬೇಜಾರು ಬೇಡ. ಕಾಲ ಉತ್ತರಿಸುತ್ತದೆ. ಪರೀಕ್ಷೆಗಳು ಹತ್ತಿರದಲ್ಲೇ ಇದೆ ಆದ್ದರಿಂದ ಸಿದ್ಧರಾಗಿ.
ಕಟಕ : ಹತ್ತಿರದವರಿಗಾಗಿ ಕಾಯುತ್ತಿದ್ದೀರಿ. ಆದರೆ ನಿಮಗೆ ನಿರಾಶೆ ಕಾದಿದೆ. ಅವರನ್ನು ಬರ ಮಾಡಿಕೊಳ್ಳುವ ಯೋಗ ಮುಂದೂಡಲ್ಪಟ್ಟಿದೆ.
ಸಿಂಹ : ಕಲ್ಲು ಹೊಡೆದು ನೋಡುವ ಬುದ್ಧಿ ಎಲ್ಲದರಲ್ಲೂ ಫಲಿಸುವುದಿಲ್ಲ. ನಿಮ್ಮಷ್ಟೇ ನಿಮ್ಮ ಗೆಳೆಯರೂ ಚತುರರು. ಆದ್ದರಿಂದ ಗೆಳೆತನ ಉಳಿಸಿಕೊಳ್ಳುವತ್ತ ಗಮನ ಹರಿಸಿ.
ಕನ್ಯಾ : ಷೇರು ಕೊಂಡು ಕೊಳ್ಳಬೇಕೆಂದಿದ್ದರೆ, ತಡ ಬೇಡ. ಇದು ಒಳ್ಳೆಯ ಸಮಯ. ಮನೆದೇವರನ್ನು ಮರೆಯಬೇಡಿ.
ತುಲಾ : ಸ್ನೇಹಿತರ ಭೇಟಿ. ಮನೆಯಲ್ಲಿ ಕಿರಿಕಿರಿ. ಬಾಸ್‌ನಿಂದ ಹೊಗಳಿಕೆ. ಎಲ್ಲ ಅನಿರೀಕ್ಷಿತ ಎಂದು ಕಕ್ಕಾ ಬಿಕ್ಕಿಯಾಗುವುದಿಲ್ಲ ವಷ್ಟೇ !
ವೃಶ್ಚಿಕ : ಎಲ್ಲರೂ ಎಲ್ಲಾ ಸಮಯದಲ್ಲಿಯೂ ಸಲಹೆ ನೀಡುವುದಿಲ್ಲ, ನಿಮಗೆ ಕಷ್ಟ ಎಂದು ಪಾಪ ಪುಣ್ಯ ತೋರಿಸುವುದಿಲ್ಲ. ಸ್ವಲ್ಪ ಗಂಭೀರ ವಾಗಿರುವುದನ್ನು ಕಲಿತುಕೋಬೇಕು.
ಧನಸ್ಸು : ಅವಳು ಸಿಟ್ಟುಗೊಂಡಳೆಂದು ನೀವೂ ಸಿಟ್ಟುಗೊಳ್ಳುವುದಲ್ಲ. ರಮಿಸಿ. ಖುಷಿಯ ದಿನ ತಕ್ಷಣ ನಿಮ್ಮ ಮುಂದೆ ನಿಂತು ಬಿಡುತ್ತದೆ.
ಮಕರ : ಶುಭ ಸುದ್ದಿಗೆ ಕಾಯುತ್ತಿದ್ದುದು ಸಾರ್ಥಕವಾಗುತ್ತದೆ. ಮೇಲಧಿಕಾರಿಗಳಿಂದ ಹೊಗಳಿಸಿಕೊಳ್ಳುತ್ತೀರಿ. ಸಣ್ಣ ಪುಟ್ಟ ಜಗಳಗಳಿಗೆ ಮುನಿಸೇಕೆ ?
ಕುಂಭ : ಐಶಾರಾಮದ ಮಹಲು ಮುಂದಿರುವಾಗ ಎರಡು ಕ್ಷಣ ಕಾಯುವ ತಾಕತ್ತು ಇಲ್ಲವೇ... ? ಜೀವನದಲ್ಲಿ ಜಿಗುಪ್ಸೆ ಎಂದು ವರಾತ ಮಾಡುವುದರಿಂದ ಇಮೇಜು ಹಾಳು ಮಾಡಿಕೊಳ್ಳುತ್ತೀರಿ.
ಮೀನ : ನಿಮ್ಮ ಕೆಲಸವನ್ನು ಗಮನಿಸುತ್ತಿರುವವರ ಬಳಿಯೇ ಸುಳ್ಳು ಹೇಳುವ ಸಾಹಸ ಬೇಡ. ಅವಕಾಶಗಳು ಮುಚ್ಚಿಹೋಗುತ್ತವೆ ಎಂದೂ ಹೆದರಬೇಡಿ. ಒಟ್ಟಿನಲ್ಲಿ ಬೆಸ್ಟ್ ಆಫ್ ಲಕ್.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications