Get Updates
Get notified of breaking news, exclusive insights, and must-see stories!

ವಜ್ರ ವ್ಯಾಪಾರ ವೃದ್ಧಿಗೆ ಆರ್‌ಬಿಐ ಅಡ್ಡಬಂಡೆ

*ಹಿಂದೋಲ್‌ ಸೇನ್‌ ಗುಪ್ತ

ನವದೆಹಲಿ : ಭಾರತ ಪ್ರಮುಖ ವಜ್ರೋದ್ಯಮ ಕೇಂದ್ರವಾಗಲು ಇನ್ನೊಂದೆರಡು ವರ್ಷಗಳಷ್ಟೇ ಸಾಕು. ಆದರೆ, ಈ ಹಾದಿಗೆ ಭಾರತೀಯ ರಿಸರ್ವ್‌ ಬ್ಯಾಂಕಿನ ಕಾನೂನು ಕಟ್ಟಳೆಗಳು ಕಲ್ಲು ಮುಳ್ಳು ಹಾಸುತ್ತಿವೆ. ವಜ್ರ ಮತ್ತು ಚಿನ್ನಾಭರಣ ರಫ್ತು ವೃದ್ಧಿ ಸಮಿತಿಯ ಅಧ್ಯಕ್ಷ ಸಂಜಯ್‌ ಎ. ಕೊಥಾರಿ ವಿಶೇಷ ಸಂದರ್ಶನವೊಂದರಲ್ಲಿ ಹೇಳಿರುವ ಮಾತಿದು.

ಕೊಥಾರಿ ಅವರ ಈ ಮಾತುಗಳಿಗೆ ರಿಸರ್ವ್‌ ಬ್ಯಾಂಕ್‌ ಸ್ಪಂದಿಸಿದರೆ ಭಾರತ ಎಲ್ಲೋ ಇರುತ್ತದೆ.....

ನಾವು ವಜ್ರೋತ್ಪಾದನೆಯಲ್ಲಿ ಸಾಕಷ್ಟು ಮುಂದಿದ್ದೇವೆ. ದೇಶವನ್ನು ವಜ್ರೋದ್ಯಮದ ಕೇಂದ್ರವನ್ನಾಗಿಸುವುದು ಅಂಥ ಕಷ್ಟವೇನೂ ಅಲ್ಲ. ಪ್ರಸ್ತುತ ಬೆಲ್ಜಿಯಂ ಮತ್ತು ಲಂಡನ್ನಿನ ಮೂಲಕ ಕಚ್ಚಾ ವಜ್ರ ಖರೀದಿಸುತ್ತಿದ್ದೇವೆ. ಇನ್ನೊಂದೆರಡು ವರ್ಷಗಳಲ್ಲಿ ಈ ತಾಪತ್ರಯವೇ ಇರುವುದಿಲ್ಲ. ಜನರೇ ನೇರವಾಗಿ ಕಚ್ಚಾ ವಜ್ರ ಒದಗಿಸುವಂತೆ ವ್ಯವಸ್ಥೆಯಲ್ಲಿ ಮಾರ್ಪಾಟಾಗಲಿದೆ.

ಮೊದಲು ನಮ್ಮ ರಿಸರ್ವ್‌ ಬ್ಯಾಂಕು ಸುಸ್ತಿ ಬಡ್ಡಿ ನಿಯಮಾವಳಿಗಳನ್ನು ಸಡಿಲಿಸಬೇಕು. ಕಚ್ಚಾ ವಜ್ರ ಒದಗಿಸುವವರಿಗೆ 30 ದಿನಗಳೊಳಗೆ ಹಣ ಪಾವತಿ ಮಾಡಬೇಕು ಎಂದಿಟ್ಟುಕೊಳ್ಳಿ. ಕೆಲವೊಮ್ಮೆ ದುಡ್ಡು ಕಟ್ಟುವುದು 35 ದಿನಗಳಾಗುತ್ತದೆ. ಆಗ ರಿಸರ್ವ್‌ ಬ್ಯಾಂಕ್‌ ವಿಧಿಸುವ ಸುಸ್ತಿ ಬಡ್ಡಿ ಎರಡಂಕೆಯದ್ದಾಗಿರುತ್ತದೆ. ನಮಗೆ ಶೇ. 25ರಷ್ಟು ದಂಡ ತಗಲುತ್ತದೆ. ರುಪಾಯಿ ಬೆಲೆ ಕುಸಿಯುವುದನ್ನೇ ಕಾಯುತ್ತಾ ನಾವು ತಡವಾಗಿ ಹಣ ಕಟ್ಟುತ್ತೇವೆ ಎಂಬ ತಪ್ಪು ಅಭಿಪ್ರಾಯ ಇರುವುದೇ ಇದಕ್ಕೆ ಕಾರಣ. ಇದರಿಂದ ವಜ್ರದ ರಫ್ತಿಗೆ ಭಾರಿ ಹೊಡೆತ ಬೀಳುತ್ತಿದೆ.

ವಜ್ರ ಕತ್ತರಿಸುವ ಮತ್ತು ಹೊಳಪು ನೀಡುವ ಕಾಮಗಾರಿಯಲ್ಲಿ ಭಾರತವೇ ಎಲ್ಲಾ ರಾಷ್ಟ್ರಗಳ ಹಿರಿಯಣ್ಣ. ಈ ಉದ್ಯಮದಲ್ಲಿ ಕಳೆದ ವರ್ಷ 6.6 ಶತಕೋಟಿ ಡಾಲರ್‌ ಮೌಲ್ಯದ ಮಾಲನ್ನು ರಫ್ತು ಮಾಡಿದ್ದೇವೆ. ಇದು ಸಾಫ್ಟ್‌ವೇರ್‌ ಉತ್ಪನ್ನಗಳ ರಫ್ತಿಗಿಂತಲೂ ಬಹುತೇಕ ಅಧಿಕ.

ಭಾರತ ಜಪಾನ್‌ ನಡುವೆ ಹಾಂಗ್‌ಕಾಂಗ್‌ ಏಕೆ?

ಉದ್ಯಮದ ಉತ್ತಮ ಭವಿಷ್ಯ ಕೇವಲ ಹರಳುಗಳ ಉತ್ಪಾದನೆಯಿಂದ ಸಾಧ್ಯವಿಲ್ಲ. ಚಿನ್ನಾಭರಣಗಳ ಉತ್ಪಾದನೆಯೂ ಅತ್ಯಗತ್ಯ. ನಾವು ಆಭರಣಗಳಿಗೆ ಹೊಳಪು ಕೊಟ್ಟು ಅವನ್ನು ಹಾಂಗ್‌ಕಾಂಗ್‌ಗೆ ಕಳುಹಿಸುತ್ತೇವೆ. ಹಾಂಗ್‌ಕಾಂಗ್‌ ಒಡವೆಗೆ ಅಂತಿಮ ರೂಪು ಕೊಟ್ಟು ಜಪಾನಿಗೆ ರಫ್ತು ಮಾಡುತ್ತದೆ. ಹಾಂಗ್‌ಕಾಂಗ್‌ ಮಾಡುತ್ತಿರುವ ಕೆಲಸವನ್ನು ನಾವೇ ಮಾಡಬೇಕು. ಆಗ ಉದ್ಯಮಕ್ಕೆ, ದೇಶಕ್ಕೆ ಉತ್ತಮ ಭವಿಷ್ಯವಿದೆ.

ವಿಶ್ವದ ಆಭರಣ ಉದ್ಯಮದಲ್ಲಿ ಭಾರತದ ರಫ್ತಿನ ಪಾಲು ಶೇ. 2ರಷ್ಟು ಮಾತ್ರ. ವಿಶ್ವ ಮಾರುಕಟ್ಟೆಯ 80 ಶತಕೋಟಿ ಡಾಲರ್‌ನಷ್ಟು ಚಿನ್ನಾಭರಣ ರಫ್ತಿನಲ್ಲಿ ಭಾರತದ ಪಾಲು ಕೇವಲ 1 ಶತಕೋಟಿ ಡಾಲರ್‌. ವಿಶ್ವ ಮಾರುಕಟ್ಟೆಯಲ್ಲಿನ ವಜ್ರದ ರಫ್ತಿನಲ್ಲಿ ಭಾರತದ್ದೇ ಶೇ. 90 ರಷ್ಟು ಭಾಗ. ಹೀಗಿದ್ದೂ ಚಿನ್ನಾಭರಣದ ರಫ್ತಿನಲ್ಲಿ ನಾವು ಲೆಕ್ಕಕ್ಕೇ ಇಲ್ಲ.

ಹರಳುಗಳ ರಫ್ತಿನ ಜೊತೆಗೆ ಚಿನ್ನಾಭರಣಗಳನ್ನೂ ಹೊರ ದೇಶಗಳಿಗೆ ರವಾನಿಸಬೇಕು. ಪ್ರಾಯೋಗಿಕವಾಗಿ ಜಾಗತೀಕರಣ ಪ್ರಕ್ರಿಯೆ ಶುರುವಾದ 1990ರವರೆಗೆ ಚಿನ್ನದ ಆಮದು ಸುಂಕ ಅತಿಯಾಗಿತ್ತು. ಆದರೆ ಈವತ್ತು ಪರಿಸ್ಥಿತಿ ಹಾಗಿಲ್ಲ. ನಮ್ಮಲ್ಲಿ ಚೆಂದದ ಒಡವೆಗಳನ್ನು ಮಾಡುವ ಕಲೆಗಾರರಿಗೇನೂ ಕೊರತೆಯಿಲ್ಲ. ಸಂಪ್ರದಾಯಸ್ಥ ಅಕ್ಕಸಾಲಿಗರು ಈಗಲೂ ಬದಲಾದ ಪರಿಸ್ಥಿತಿಗೆ ಸ್ಪಂದಿಸುತ್ತಾ, ಜನರ ಅಭಿರುಚಿಗೆ ತಕ್ಕಂತ ವಿನ್ಯಾಸಗಳ ಒಡವೆಗಳನ್ನು ಮಾಡಿ ಕೊಡುತ್ತಿದ್ದಾರೆ. ಆದರೂ ಅವರ ದೃಷ್ಟಿ ಇನ್ನಷ್ಟು ವಿಶಾಲವಾಗಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳ ಜನರ ಒಡವೆ ರುಚಿಗೂ ಹೊಂದುವಂಥ ಚಿನ್ನಾಭರಣಗಳನ್ನು ಮಾಡಬೇಕು. ಆಗ ಭಾರತ ಆರ್ಥಿಕವಾಗಿ ಎಲ್ಲೋ ಇರುತ್ತದೆ.

(ಐಎಎನ್‌ಎಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+