Get Updates
Get notified of breaking news, exclusive insights, and must-see stories!

ಬಿಎಸ್‌ಎಫ್‌ ಪಡೆ ಶುಕ್ರವಾರ ಕೊಯಂಬತ್ತೂರ್‌ಗೆ,ಅಲ್ಲಿಂದ ಕಾಡಿಗೆ

ಬೆಂಗಳೂರು : ಇಲ್ಲೊಂದು ಬದಲಾವಣೆ. ಬುಧವಾರ ನಾವು ಪ್ರಕಟಿಸಿದಂತೆ ವಿಶೇಷ ರೀತಿಯಲ್ಲಿ ತರಬೇತುಗೊಂಡ ಕಮಾಂಡರ್‌ಗಳುಳ್ಳ ಬಿಎಸ್‌ಎಫ್‌ತಂಡ ಶುಕ್ರವಾರ ಬೆಂಗಳೂರಿಗೆ ಬಂದಿಳಿದು, ನಂತರ ವೀರಪ್ಪನ್‌ ಶಿಕಾರಿಗೆ ಕಾಡಿಗೆ ಹೋಗಬೇಕಿತ್ತು. ಆದರೀಗ ಬಂದ ಸುದ್ದಿಯ ಪ್ರಕಾರ ಬಿಎಸ್‌ಎಫ್‌ ಪಡೆ ಕೊಯಂಬತೂರಿನಲ್ಲಿ ಇಳಿದು, ನಂತರ ಕಾಡಿಗೆ ನುಗ್ಗಲಿದೆ.

ಪೊಲೀಸ್‌ ಮಹಾ ನಿರ್ದೇಶಕ ಸಿ.ದಿನಕರ್‌ ಗುರುವಾರ ಮಾಧ್ಯಮಗಳ ವರದಿಗಾರರಿಗೆ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಬಹುತೇಕ ಕಮಾಂಡರ್‌ಗಳನ್ನೊಳಗೊಂಡ 1000 ಜವಾನ್‌ಗಳು ಮಣಿಪುರದ ಇಂಫಾಲ್‌ನಿಂದ ತಂಡೋಪತಂಡವಾಗಿ ಇನ್ನೆರಡು ದಿನಗಳಲ್ಲಿ ಕೊಯಂಬತ್ತೂರ್‌ಗೆ ಬಂದು, ಅಲ್ಲಿಂದ ಕಾಡು ಹೊಕ್ಕಿ, ಉಭಯ ರಾಜ್ಯಗಳ ಎಸ್‌ಟಿಎಫ್‌ ತಂಡಗಳನ್ನು ಕೂಡಲಿದ್ದಾರೆ.

ರಾತ್ರಿಯಲ್ಲೂ ಸ್ಪಷ್ಟವಾಗಿ ನೋಡಬಲ್ಲಂತಹ ಉಪಕರಣಗಳು, ತಂತಾನೇ ಗುಂಡುಗಳನ್ನು ತುಂಬಬಲ್ಲ ಬಂದೂಕುಗಳು, ಎಕೆ- 47, ಹುದುಗಿಸಿಟ್ಟ ಭೂಬಾಂಬುಗಳ ಪತ್ತೆ ಮಾಡುವ ಉಪಕರಣಗಳನ್ನು ತಂಡ ಒಯ್ಯಲಿದೆ ಎಂಬ ಸುದ್ದಿಗಳೂ ಕೇಳಿಬರುತ್ತಿವೆ. ಜಮ್ಮು ಕಾಶ್ಮೀರದಲ್ಲಿ ಅತ್ಯಂತ ಬಿಗು ಪರಿಸ್ಥಿಯನ್ನು ನಿಭಾಯಿಸಿದ ಛಾತಿಯುಳ್ಳ ಕ್ಷಿಪ್ರ ಪ್ರತಿಕ್ರಿಯಾ ದಳದ 40 ಮಂದಿ ಕಮಾಂಡೋಗಳು ತಂಡದಲ್ಲಿರುವುದು ವೀರಪ್ಪನ್‌ ಕಾರ್ಯತಂತ್ರಕ್ಕೆ ಹೊಸ ಕಳೆ ಕೊಟ್ಟಿದೆ.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+