Get Updates
Get notified of breaking news, exclusive insights, and must-see stories!

ಇಂದೇ ಕೊಳ್ಳಿ : ಜನವರಿಯಿಂದ ಮಾರುತಿ ಕಾರುಗಳ ಬೆಲೆ ಏರಿಕೆ

ಮುಂಬಯಿ : ಕಳೆದ ಜೂನ್‌ನಲ್ಲಿ ಕಾರುಗಳ ಬೆಲೆ ಇಳಿಸಿದ್ದ ಭಾರತದ ಅತ್ಯಂತ ದೊಡ್ಡ ಕಾರುಗಳ ಉತ್ಪಾದಕ ಮಾರುತಿ ಉದ್ಯೋಗ್‌ ಲಿಮಿಟೆಡ್‌ ಪ್ರಸ್ತುತ ತನ್ನ ಹಿಂದಿನ ಕ್ರಮಕ್ಕೆ ವ್ಯತಿರಿಕ್ತವಾಗಿ ಬರುವ ಜನವರಿಯಿಂದ ಕಾರುಗಳ ಬೆಲೆಯನ್ನು ಏರಿಸಲಿದೆ ಎಂದು ಕಂಪನಿಯ ಅಧಿಕಾರಿಯಾಬ್ಬರು ಬುಧವಾರ ತಿಳಿಸಿದ್ದಾರೆ.

ದುರ್ಬಲಗೊಂಡ ರುಪಾಯಿ ಬೆಲೆ ಆಮದು ವಸ್ತುಗಳ ಬೆಲೆಯ ಮೇಲೆ ಬೀರಿದ ಪರಿಣಾಮ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದ ಅವರು ಬೆಲೆ ಏರಿಕೆಯ ಪ್ರಮಾಣವನ್ನು ಸ್ಪಷ್ಟವಾಗಿ ತಿಳಿಸಲಿಲ್ಲ . ಡೀಲರ್ಸ್‌ ಮತ್ತು ಬಳಕೆದಾರರೊಂದಿಗೆ ಚರ್ಚಿಸಿದ ನಂತರ ಏರಿಕೆಯ ಪ್ರಮಾಣವನ್ನು ನಿರ್ಧರಿಸಲಾಗುವುದು. ಇತ್ತೀಚೆಗೆ ತಾನೇ ಕೆಲವು ಕಂಪನಿಗಳು ತಮ್ಮ ಕಾರುಗಳ ಬೆಲೆ ಏರಿಸುವ ಮಾತಾಡಿವೆ. ಬೆಲೆ ಏರಿಕೆಗೆ ತಕ್ಕ ವಾತಾವರಣವೂ ಮಾರುಕಟ್ಟೆಯಲ್ಲಿದೆ ಎಂದು ಅವರು ಹೇಳಿದರು.

ಹೊಸದಾಗಿ ಭಾರತದ ಕಾರು ಮಾರುಕಟ್ಟೆ ಪ್ರವೇಶಿಸುತ್ತಿರುವ ಕಂಪನಿಗಳಿಂದಾಗಿ ಮಾರುತಿ ಪ್ರಬಲ ಸ್ಪರ್ಧೆ ಎದುರಿಸುತ್ತಿದೆ. ಮಾರುಕಟ್ಟೆಯ ಪ್ರತಿಶತ 80 ರಷ್ಟು ವ್ಯಾಪ್ತಿಯನ್ನು ಆವರಿಸಿದ್ದ ಮಾರುತಿಯ ವಹಿವಾಟಿನ ವ್ಯಾಪ್ತಿ ಪ್ರಸ್ತುತ ಶೇ. 54.5 ಕ್ಕೆ ಕುಸಿದಿರುವುದು ಪೈಪೋಟಿಯ ತುರುಸನ್ನು ತೋರಿಸುತ್ತದೆ. ಕೇಂದ್ರ ಸರ್ಕಾರ ಕೂಡ ಕಂಪನಿಯಲ್ಲಿ ತೊಡಗಿಸಿದ್ದ ತನ್ನ ಬಂಡವಾಳವನ್ನು ವಾಪಸ್ಸು ಪಡೆಯಲು ಉದ್ದೇಶಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+