Get Updates
Get notified of breaking news, exclusive insights, and must-see stories!

ಕರ್ನಾಟಕ : ಇಲ್ಲಿ ವಿದ್ಯುತ್‌ ಯೋಜನೆಮುಗಿಯಲು 10 ವರ್ಷ ಬೇಕು!

ಕಾರವಾರ : ವಿದ್ಯುತ್‌ ಉತ್ಪಾದನೆಗೆ ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿ) ಏನೆಲ್ಲಾ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ ಉತ್ಪಾದನೆ ಮೀರಿ ಅಗತ್ಯ ದಿನೇದಿನೇ ಹೆಚ್ಚುತ್ತಿದೆ. ಯೋಜನೆಗಳನ್ನು ಹಮ್ಮಿಕೊಳ್ಳುವಾಗ ಅದಕ್ಕೆ ಎದುರಾಗುವ ತೊಂದರೆಗಳು, ಅವುಗಳ ನಿವಾರಣೆಗೆ ಸೂಕ್ತ ಪರ್ಯಾಯ ಕ್ರಮಗಳು, ಪರಿಸರವಾದಿಗಳ ನಿಸರ್ಗ ಕಳಕಳಿ ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳ ಬೇಕಾಗುತ್ತದೆ. ಆದರೆ ಆಗುತ್ತಿರುವುದೇ ಬೇರೆ?

ರಾಯಚೂರಿನ ಥರ್ಮಲ್‌ ವಿದ್ಯುತ್‌ ಕೇಂದ್ರದ ಬೂದಿ ಹೊಂಡದ ತಳವನ್ನು ಭದ್ರವಾಗಿ ಕಟ್ಟದೆ, ನೀರುಬೂದಿ ಕೃಷ್ಣಾ ನದಿಗೆ ಸೇರಿ ಅದನ್ನು ಹಾಳುಗೆಡವುತ್ತಿರುವ ಸುದ್ದಿ ಒಂದು ಕಡೆ. ವಿದ್ಯುತ್‌ ಉತ್ಪಾದನೆಗೆಂದೇ ಗೇರುಸೊಪ್ಪ ಬಳಿ ಶರಾವತಿ ನದಿಗೆ ಕಟ್ಟಿರುವ ಅಣೆಕಟ್ಟೆ 60 ಮೆಗಾವ್ಯಾಟ್‌ ಸಾರ್ಮರ್ಥ್ಯದ ಒಂದು ವಿದ್ಯುತ್‌ ಉತ್ಪಾದನಾ ಘಟಕದೊಂದಿಗೆ ತಲೆಯೆತ್ತಿ ಎಂಟು ತಿಂಗಳಾಗಿವೆ. ಆದರೂ ಅದರಿಂದ ಇನ್ನೂ ಒಂದೇ ಒಂದು ಯೂನಿಟ್‌ ವಿದ್ಯುತ್ತೂ ಉತ್ಪಾದನೆಯಾಗದಿರುವುದು ಇನ್ನೊಂದು ಸುದ್ದಿ.

ಗೇರುಸೊಪ್ಪ ಜಲವಿದ್ಯುತ್‌ ಅಣೆಕಟ್ಟು ನಿರ್ಮಾಣದ ಗುತ್ತಿಗೆಯನ್ನು ಕೆಪಿಸಿ ನವೀನ್‌ ಕನ್‌ಸ್ಟ್ರಕ್ಷನ್ಸ್‌ಗೆ ಕೊಟ್ಟಿತು. ಚುರುಕಾಗಿ ಕೆಲಸ ಮಾಡಿದ ಈ ಸಂಸ್ಥೆ ಅಂದುಕೊಂಡ ಅವಧಿಗಿಂತ ಮುನ್ನವೇ ತನ್ನ ಕೆಲಸ ಮಾಡಿ ಮುಗಿಸಿತು. ಆದರೆ ಅದುವರೆಗೆ ಕೈಕಟ್ಟಿ ಕುಳಿತಿದ್ದ ಕೆಪಿಸಿ ಗೇರುಸೊಪ್ಪದಿಂದ ತಾಳಗುಪ್ಪವರೆಗೆ ವಿದ್ಯುತ್‌ ಮಾರ್ಗ ರೂಪಿಸಲು ಹೊರಟಾಗ ಅರಣ್ಯ ಇಲಾಖೆಯ ಕಾನೂನುಗಳು ಕೆಲಸಕ್ಕೆ ತಡೆಯಾಡ್ಡಿದವು. ವಿದ್ಯುತ್‌ ಮಾರ್ಗ ನಿರ್ಮಿಸಲು ಕಾಡಿನ ಕೆಲ ಭಾಗವನ್ನು ಅನಿವಾರ್ಯವಾಗಿ ಕಡಿಯಬೇಕಾಗಿದ್ದು, ಇದಕ್ಕೆ ಅರಣ್ಯ ಇಲಾಖೆ ಒಪ್ಪುತ್ತಿಲ್ಲ.

ಮೊದಲಿನಿಂದಲೂ ಎಡರು : 1990ರಲ್ಲಿ ಪ್ರಾರಂಭವಾಗಬೇಕಿದ್ದ ಯೋಜನೆ ಕಾಮಗಾರಿಗೆ ಆಗಲೇ ಪರಿಸರ ವಾದಿಗಳು ತಡೆಯಾಡ್ಡಿದರು. ಪರಿಸರ ಹಾಳಾಗುತ್ತದೆ ಎಂದು ನ್ಯಾಯಾಲಯದ ಮೆಟ್ಟಿಲು ಹತ್ತಿದರು. ನಾಲ್ಕೈದು ವರ್ಷಗಳ ನಂತರ ಕೋರ್ಟು ಯೋಜನೆಗೆ ಅನುಮತಿ ಕೊಟ್ಟಿತು. 1995ರಲ್ಲಿ ಶುರುವಾದ ಕಾಮಗಾರಿ ಎಂಟು ತಿಂಗಳ ಹಿಂದೆ ಪೂರ್ಣವಾಯಿತು. ಆದರೆ ವಿದ್ಯುತ್‌ ಸರಬರಾಜಿಗೆ ಮಾರ್ಗ ನಿಮಾಣವಾಗಿಲ್ಲದ ಕಾರಣ ಇಲ್ಲಿವರೆಗೆ ಒಂದೇ ಒಂದು ಯೂನಿಟ್‌ ವಿದ್ಯುತ್‌ ಸಹ ಗೇರುಸೊಪ್ಪ ಅಣೆಕಟ್ಟೆಯಿಂದ ಉತ್ಪಾದನೆಯಾಗಿಲ್ಲ.

ಈಗ ಕೆಪಿಸಿ ವಿದ್ಯುತ್‌ ಮಾರ್ಗ ನಿರ್ಮಿಸಲು ಶತಾಯ ಗತಾಯ ಯತ್ನಿಸುತ್ತಿದೆ. ಕಳೆದೆಂಟು ತಿಂಗಳಿಂದ ವಿದ್ಯುತ್‌ ಉತ್ಪಾದನೆಯಲ್ಲಿ ದಿನಂಪ್ರತಿ 60 ಮೆ. ವ್ಯಾಟ್‌ ಖೋತಾ ಆದಂತಾಗಿದೆ. ಒಂದೊಂದು ಯೋಜನೆಯೂ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಲು ಇಷ್ಟೊಂದು ಸಮಯವಾದರೆ ವಿದ್ಯುತ್‌ ಸಮಸ್ಯೆಗೆ ಪರಿಹಾರ ಹೇಗೆ ತಾನೆ ಸಾಧ್ಯ?

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+