Get Updates
Get notified of breaking news, exclusive insights, and must-see stories!

ಮತ್ತೆ ಸುದ್ದಿಯಲ್ಲಿ ಸಿ. ಅಶ್ವತ್ಥ್‌ !

ಬೆಂಗಳೂರು : ಅಕ್ಕಾ ಚೆಕ್‌ ಬೌನ್ಸ್‌ ಹಗರಣವನ್ನು ಹಾದಿ ರಂಪ, ಬೀದಿ ರಂಪ ಮಾಡುವ ಮೂಲಕ ಜಗತ್ತಿನಾದ್ಯಂತ ಸುದ್ದಿಯಾಗಿದ್ದ ಗಾಯಕ ಸಿ. ಅಶ್ವತ್ಥ್‌ ಈಗ ಮತ್ತೆ ಸುದ್ದಿ ಮಾಡಿದ್ದಾರೆ. ಶಿಶುನಾಳ ಶರೀಫ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸಿ. ಅಶ್ವತ್ಥ್‌ ರಾಜೀನಾಮೆ ನೀಡಿದ್ದಾರೆ.

ಸುಗಮ ಸಂಗೀತಗಾರರಿಗೆ ರಾಜ್ಯ ಸರಕಾರ ಕೊಡ ಮಾಡುವ ಅತ್ಯುನ್ನತ ಗೌರವ ಸಂತ ಶಿಶುನಾಳ ಶರೀಫ ಪ್ರಶಸ್ತಿ. ಇಂತಹ ಅತ್ಯುನ್ನತ ಪ್ರಶಸ್ತಿಯ ಸಮಿತಿಗೆ ಅಧ್ಯಕ್ಷನಾಗುವುದು ಹೆಮ್ಮೆಯ ವಿಚಾರ. ಆದರೆ, ಆಯ್ಕೆ ಸಮಿತಿಯಲ್ಲಿ ಅನುಸರಿಸಲಾಗುತ್ತಿರುವ ಮಾನದಂಡ ನನಗೆ ಸಮ್ಮತವಾಗಿ ತೋರದ ಕಾರಣ ಆ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂಬುದು ಅಶ್ವತ್ಥ್‌ ಹೇಳಿಕೆ.

ಸುಗಮ ಸಂಗೀತದ ಜೊತೆಗೆ ತತ್ವಪದ, ದೇವರನಾಮ ಹಾಗೂ ವಚನಗಳನ್ನು ಸುಗಮ ಸಂಗೀತದ ಶೈಲಿಯಲ್ಲೇ ಹಾಡುವವರನ್ನೂ ಈ ಪ್ರಶಸ್ತಿಗೆ ಪರಿಗಣಿಸಬೇಕು ಎಂಬುದರಲ್ಲಿ ಅರ್ಥವೇ ಇಲ್ಲ ಎಂಬುದು ಅಶ್ವತ್ಥ್‌ ಅಭಿಪ್ರಾಯ. ಸುಗಮ ಸಂಗೀತ ಕರ್ನಾಟಕದ ಕೊಡುಗೆ. ಸುಗಮ ಸಂಗೀತ ಎಂಬುದು ಮೂಲತಃ ಕಾವ್ಯ ಗಾಯನ ಅದಕ್ಕೂ ಜನಪದಕ್ಕೂ ಸಂಬಂಧವೇ ಇಲ್ಲ ಎಂಬುದು ಅಶ್ವತ್ಧ್‌ರ ವಾದ.

ಈ ವಾದ ಕೇಳಿ, ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ಹಲವರ ಕಣ್ಣುಗಳು ಕೆಂಪಾಗಿವೆ. ಆದರೂ ಅಶ್ವತ್ಥ್‌ ತಮ್ಮ ವಾದವನ್ನು ಹೀಗೆ ಮುಂದುವರಿಸುತ್ತಾರೆ. ತತ್ವ ಪದ, ಜಾನಪದ ಗೀತೆಗಳು, ದೇವರನಾಮಗಳನ್ನು ಸುಗಮ ಸಂಗೀತದ ದಾಟಿಯಲ್ಲಿ ಹಾಡುವವರು ಇವರೇ ಎಂದು ಹೇಗೆ ನಿರ್ಧರಿಸುತ್ತಾರೆ. ಹೀಗೆಂದು ಅವರಿಗೆ ಸರ್ಟಿಫಿಕೇಟ್‌ ಕೊಡುವವರು ಯಾರು? ಎಂದೂ ಅಶ್ವತ್ಥ್‌ ಪ್ರಶ್ನಿಸುತ್ತಾರೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+