ಸವಾಲ್ ದಸ್ ಕರೋಡ್ ಕಾ ದಿಂದ ಅನುಪಮ್ ಖೇರ್ ಎತ್ತಂಗಡಿ
ಮುಂಬಯಿ : ಸವಾಲ್ ದಸ್ ಕರೋಡ್ ಕಾ(ಎಸ್‌ಡಿಸಿಕೆ) ವೈಫಲ್ಯಕ್ಕೆ ಕಾರ್ಯಕ್ರಮದ ನಿರೂಪಕ ಅನುಪಮ್ ಖೇರ್ ಅವರನ್ನು ಹೊಣೆಯಾಗಿಸಿರುವ ರಿkುೕ ಟೀವಿ, ವೃತ್ತಿ ನೈಪುಣ್ಯದ ಕೊರತೆಯ ಕಾರಣವೊಡ್ಡಿ ನಿರೂಪಕ ಹುದ್ದೆಯಿಂದ ಖೇರ್ ಅವರಿಗೆ ಕೊಕ್ ನೀಡಿದೆ.
ಇದು ತೀರಾ ಬಾಲಿಶ ಹಾಗೂ ಅಸಂಬದ್ಧ ನಡವಳಿಕೆ ಎಂದು ಸವಾಲ್ ದಸ್ ಕರೋಡ್ ಕಾದಿಂದ ತಮಗೆ ಕೊಕ್ ನೀಡಿರುವ ರಿkುೕನ ಕ್ರಮವನ್ನು ಅನುಪಮ್ ಖೇರ್ ಟೀಕಿಸಿದ್ದಾರೆ. ಕಾರ್ಯಕ್ರಮದ ವೈಫಲ್ಯತೆ ಸಾಮೂಹಿಕ ಜವಾಬ್ದಾರಿ ಹೊರುವ ಬದಲು ನನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಅವರು ವಿಷಾದಿಸಿದ್ದಾರೆ.
ಒಪ್ಪಂದದ ಪ್ರಕಾರ ಹುದ್ದೆಯಿಂದ ತೆಗೆಯುವ 60 ದಿನಗಳ ಮುನ್ನ ಲಿಖಿತ ನೋಟೀಸ್ ನೀಡಬೇಕಿತ್ತು . ಆದರೆ, ಎಸ್‌ಡಿಸಿಕೆ ನಿರ್ದೇಶಕ ಗಜೇಂದ್ರ ಸಿಂಗ್ ಅವರು ಮೌಖಿಕವಾಗಿ ರಿkುೕ ತೀರ್ಮಾನವನ್ನು ನನಗೆ ತಿಳಿಸಿದ್ದಾರೆ ಎಂದು ಖೇರ್ ತಿಳಿಸಿದ್ದಾರೆ.
ಕಾರ್ಯಕ್ರಮದ ಮುಂದಿನ ಭಾಗಗಳ ಚಿತ್ರಿಕರಣಕ್ಕೆ ತಮ್ಮ ಬಳಿ ಸಮಯ ಇಲ್ಲ ಎನ್ನುವ ಆಪಾದನೆಗಳನ್ನು ತಳ್ಳಿ ಹಾಕಿದ ಅವರು, ಒಪ್ಪಂದದ ಪ್ರಕಾರ ಪ್ರತಿ ತಿಂಗಳ 17 ರಿಂದ 25 ರವರೆಗೆ ಚಿತ್ರೀಕರಣದಲ್ಲಿ ಭಾಗವಹಿಸಬೇಕಿತ್ತು ಎಂದರು. ಆದರೆ, ರಿkುೕ ಮೂಲಗಳು ಖೇರ್ ಅವರು ಸಿನಿಮಾ ಚಟುವಟಿಕೆಗಳಲ್ಲಿ ವ್ಯಸ್ತರಾಗಿರುವುದರಿಂದ ಮುಂದಿನ ಚಿತ್ರೀಕರಣಕ್ಕೆ ತೊಂದರೆಯಾಗುತ್ತಿತ್ತು ಎಂದು ಹೇಳಿವೆ. ಎಸ್‌ಡಿಸಿಕೆ ನಿರ್ದೇಶಕ ಗಜೇಂದ್ರ ಸಿಂಗ್ ಹಾಗೂ ಖೇರ್ ನಡುವೆ ಮಾತುಕತೆ ಇನ್ನೂ ನಡೆಯುತ್ತಿದೆ ಎಂದೂ ಮೂಲಗಳು ತಿಳಿಸಿವೆ. ಖೇರ್ ಸ್ಥಾನಕ್ಕೆ ಬದಲಿಯನ್ನು ರಿkುೕ ಮೂಲಗಳು ಇನ್ನೂ ಸ್ಪಷ್ಟಪಡಿಸಿಲ್ಲ .
ಸ್ಟಾರ್ ಟೀವಿಯ ಕೌನ್ ಬನೇಗಾ ಕರೋಡ್‌ಪತಿ ಜನಪ್ರಿಯ ಕಾರ್ಯಕ್ರಮಕ್ಕೆ ಸೆಡ್ಡು ಹೊಡೆಯುವ ಉದ್ದೇಶದಿಂದ ರಿkುೕ ಮಹತ್ವಾಕಾಂಕ್ಷೆಯಿಂದ ಎಸ್‌ಡಿಸಿಕೆ ಪ್ರಾರಂಭಿಸಿತ್ತು . ಆದರೆ, ರಿkುೕನ ಕಾರ್ಯಕ್ರಮಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗದಿರುವುದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications