Get Updates
Get notified of breaking news, exclusive insights, and must-see stories!

ಆಟ ಕದ್ದ ಖದೀಮರಿಗೆ ಕ್ರಿಕೆಟ್‌ನಿಂದ ಉಚ್ಚಾಟನೆ

ನವದೆಹಲಿ : ಕ್ರಿಕೆಟ್‌ನಲ್ಲಿ ಮೋಸದಾಟ ಆಡಿದರೆಂಬ ಆರೋಪ ಹೊತ್ತ ಇಬ್ಬರನ್ನು ಆಜೀವ ಪರ್ಯಂತ ಕ್ರಿಕೆಟ್‌ ರಂಗದಿಂದ ಹೊರಗಟ್ಟುವ ಮೂಲಕ ಭಾರತೀಯ ಕ್ರಿಕೆಟ್‌ನ ಮೊದಲ ಅಧ್ಯಾಯ ಮುಗಿದಿದೆ.

ಮೊಹಮ್ಮದ್‌ ಅಜರುದ್ದೀನ್‌ ಮತ್ತು ಮಾಜಿ ಟೆಸ್ಟ್‌ ಆಟಗಾರ ಅಜಯ್‌ ಶರ್ಮ ಇನ್ನು ಮುಂದೆ ಅವರ ಜೀವಮಾನದಲ್ಲೇ ಯಾವುದೇ ಕ್ರಿಕೆಟ್‌ ಚಟುವಟಿಕೆಯಲ್ಲಿ ತೊಡಗುವಂತಿಲ್ಲ. ಅಜಯ್‌ ಜಡೇಜ ಮತ್ತು ಮನೋಜ್‌ ಪ್ರಭಾಕರ್‌ಗೆ 5 ವರ್ಷಗಳ ಕಾಲ ನಿಷೇಧ. ಎರಡು ವಾರಗಳಿಂದ ಮೂರು ಬಾರಿ ಚರ್ಚೆ ಮಾಡಿದ ಬಿಸಿಸಿಐ ಕೊನೆಗೂ ಒಂದು ಪಕ್ಕಾ ತೀರ್ಮಾನ ಕೊಟ್ಟಿದೆ. ಭಾರತ ಕ್ರಿಕೆಟ್‌ನ ಮಾಜಿ ಫಿಸಿಯೋ ಅಲಿ ಇರಾನಿಗೂ 5 ವರ್ಷಗಳ ನಿಷೇಧ ಹೇರಿದೆ.

ಬಿಸಿಸಿಐನ 30 ಅಧಿಕಾರಿಗಳ ಪೈಕಿ 28 ಮಂದಿ ಅಜರ್‌ಗೆ ಆಜೀವ ನಿಷೇಧ ಹೇರಬೇಕೆಂದು ಮಂಗಳವಾರ ಚೆನ್ನೈನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮತ ಹಾಕಿದರು.

ನಿಷೇಧಕ್ಕೆ ಒಳಗಾಗಿರುವ ಆಟಗಾರರ ಪೈಕಿ ಜಡೇಜ ಮತ್ತೆ ಬ್ಯಾಟ್‌ ಹಿಡಿಯುವ ಸಾಧ್ಯತೆಯಿರುವ ಏಕೈಕ ಕ್ರಿಕೆಟಿಗ. ಮಂಡಳಿಯ ಅಧಿಕಾರಿಗಳು ಅಯ್ಯೋ ಪಾಪ ಎಂದದ್ದೂ ಜಡೇಜಾಗೆ ಮಾತ್ರ. ಭಾರತದ ಬುಕ್ಕಿ ಜಾನ್‌ ಎಂಬುವನಿಂದ ಹಣ ಪಡೆದದ್ದನ್ನು ಒಪ್ಪಿಕೊಂಡ ನಂತರವೂ ಆಡುತ್ತಿರುವ ಆಸ್ಟ್ರೇಲಿಯಾದ ಶೇನ್‌ ವಾರ್ನ್‌ ಮತ್ತು ಮಾರ್ಕ್‌ ವಾ, ಇದೇ ರೀತಿ ಆರೋಪ ಎದುರಿಸುತ್ತಿರುವ ಪಾಕ್‌ನ ವಾಸಿಂ ಅಕ್ರಂ ಮತ್ತು ಮುಷ್ತಾಕ್‌ ಅಹ್ಮದ್‌ ಅವರನ್ನು ಉದಾಹರಣೆ ಕೊಡುವ ಮೂಲಕ ಜಡೇಜ ತಪ್ಪನ್ನು ಕ್ಷಮಿಸಬೇಕೆಂಬ ಮಾತುಗಳು ಸಭೆಯಲ್ಲಿ ಕೇಳಿಬಂದವು.

ಸಭೆಯ ನಂತರ ಮಾಧ್ಯಮಗೋಷ್ಠಿ ನಡೆಸಿದ ಬಿಸಿಸಿಐ ಅಧ್ಯಕ್ಷ ಎ.ಸಿ.ಮುತ್ತಯ್ಯ ಈ ಎಲ್ಲಾ ವಿವರಣೆಗಳನ್ನು ಕೊಟ್ಟರು.

(ಎಎಫ್‌ಪಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+