For Daily Alerts
ಅಜಯ್ ಕುಮಾರ್ ಸಿಂಗ್‌ರ ಅಲ್ಲಮಪ್ರಭು ಹಿಂದಿ ಕೃತಿ ಬಿಡುಗಡೆ
ಬೆಂಗಳೂರು : ಟ್ರಾಫಿಕ್ ಪೊಲೀಸ್ ಕಮಿಷನರ್ ಡಾ. ಅಜಯ್ ಕುಮಾರ್ ಸಿಂಗ್ ಅವರ ಹಿಂದಿ ಭಾಷೆಯ ಅಲ್ಲಮ ಪ್ರಭು ಕೃತಿಯನ್ನು ಡಾ. ಯು. ಆರ್ ಅನಂತ ಮೂರ್ತಿ ಶನಿವಾರ ಬಿಡುಗಡೆ ಮಾಡಿದ್ದಾರೆ.
ಭಾರತೀಯ ಭಾಷೆಗಳಲ್ಲಿ ಪರಸ್ಪರ ಕೊಡು ಕೊಳ್ಳುವಿಕೆ ಇರಬೇಕು. ಕನ್ನಡಿಗರಿಗೆ ಉತ್ತರ ಭಾರತ ಸಾಹಿತ್ಯದ ಬಗ್ಗೆ ಮತ್ತು ಸಾಹಿತಿಗಳ ಬಗ್ಗೆ ಉತ್ತಮ ಜ್ಞಾನವಿದೆ. ಆದರೆ ಅವರಿಗೆ ಕನ್ನಡಿಗರ ಬಗ್ಗೆ ಹೆಚ್ಚಾಗಿ ಏನೂ ತಿಳಿದಿಲ್ಲ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಯು.ಆರ್. ಅನಂತ ಮೂರ್ತಿ ಹೇಳಿದರು.
ಅಲ್ಲಮಪ್ರಭುವಿನ ಬಗೆಗೆ ಹಿಂದಿ ಭಾಷೆಯಲ್ಲಿ ಪುಸ್ತಕ ಹೊರ ಬರುತ್ತಿರುವುದನ್ನು ಅವರು ಶ್ಲಾಘಿಸಿದರು. ಮಾಸ್ತಿ, ಕುವೆಂಪು, ಬೇಂದ್ರೆಯಂತಹ ಹಿರಿಯ ಮತ್ತು ಪ್ರಸಿದ್ಧ ಸಾಹಿತಿಗಳನ್ನೂ ಹಿಂದಿ ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕಾರ್ಯ ನಡೆಯಬೇಕು ಎಂಬ ಆಶಯವನ್ನು ಅನಂತ ಮೂರ್ತಿ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರ ಪತಿ ಬಿ.ಡಿ. ಜತ್ತಿ ಮತ್ತು ಹೈಕೋರ್ಟ್‌ನ ನ್ಯಾಯಾಧೀಶ ಹರಿನಾಥ್ ಮೋತಿಲಾಲ್ ತಿವಾರಿ ಉಪಸ್ಥಿತರಿದ್ದರು.
(ಇನ್ಫೋ ವಾರ್ತೆ)