ಭರವಸೆ ಹುಟ್ಟಿಸಿದ ಬದಾನಿಗೆ ಟೋನಿ ಗ್ರೇಗ್ ಶಹಭಾಷ್‌ಗಿರಿ
ಕಟಕ್ : ‘ನಾನೇನಾದರೂ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡುವವನಾದರೆ ಹೇಮಾಂಗ್ ಬದಾನಿ ಮತ್ತು ಯುವರಾಜ್ ಸಿಂಗ್‌ನನ್ನು ಯಾವುದೇ ಕಾರಣಕ್ಕೂ ಡ್ರಾಪ್ ಮಾಡೋಲ್ಲ’. ಕ್ರಿಕೆಟ್ ರಂಗದಲ್ಲಿ ನಿರ್ದಾಕ್ಷಿಣ್ಯ, ನೇರ ಮಾತುಗಳಿಗೆ ಹೆಸರುವಾಸಿಯಾಗಿರುವ ಪಂದ್ಯ ವೀಕ್ಷಕ ವಿವರಣೆಗಾರ ಟೋನಿ ಗ್ರೇಗ್ ಹೇಳಿರುವ ಮಾತಿದು. ಸಂದರ್ಭ, ಶನಿವಾರದ ಜಿಂಬಾಬ್ವೆ ವಿರುದ್ಧದ ಭಾರತದ ಪಂದ್ಯ.
ಸಚಿನ್, ಗಂಗೂಲಿ 100ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ಆಡಿ ಕೊಟ್ಟರೂ ನಂತರದ ಅಗ್ರ ಕ್ರಮಾಂಕದ ಒಂದಿಬ್ಬರು ಅಗ್ಗವಾಗೇನಾದರೂ ಔಟಾದರೆ ಅಲ್ಲಿಗೆ ಭಾರತದ ಕತೆ ಮುಗಿಯಿತು ಎಂಬ ಸಂಪ್ರದಾಯವನ್ನು ಹೊಸಬರು ಅಳಿಸಿ ಹಾಕಿದ್ದಾರೆ.
ಆಡುವ ಮೊದಲ ಎಸೆತವನ್ನೇ ಬೌಂಡರಿಗಟ್ಟುವ ಬಲಶಾಲಿ ಯುವರಾಜ್, ಒಂದೆಡೆ ವಿಕೆಟ್‌ಗಳು ತುಪು ತುಪು ಉದುರುತ್ತಿದ್ದರೂ ತಾಳ್ಮೆ ಕಾಯ್ದುಕೊಂಡು ಅಗತ್ಯಕ್ಕೆ ತಕ್ಕ ಆಟ ಆಡುವ ಬದಾನಿ, ಭಾರತದ ವಿಕೆಟ್ ಕೀಪರ್‌ಗಳು ಉತ್ತಮ ಬ್ಯಾಟ್ಸ್‌ಮನ್‌ಗಳಲ್ಲ ಅನ್ನುವ ಹಣೆಪಟ್ಟಿ ಕಿತ್ತೆಸೆದಿರುವ ವಿಜಯ್ ದಹಿಯಾ, ಸ್ಲಾಗ್ ಓವರ್‌ಗಳಲ್ಲಿ ಅಗತ್ಯ ಬೌಂಡರಿ ಹೊಡೆಯುವ ಸಾಮರ್ಥ್ಯವಿರುವ ಜೋಷಿ ಹಾಗೂ ಅಗರ್ಕರ್ ಭಾರತ ಕ್ರಿಕೆಟ್ ತಂಡದ ಹೊಸ ಭರವಸೆಗಳು.
ಶನಿವಾರದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸಚಿನ್- ಗಂಗೂಲಿ ಜೋಡಿ ಉತ್ತಮ ಆರಂಭ ಒದಗಿಸಿಕೊಟ್ಟರೂ, ನಂತರ ಕೆಟ್ಟ ಹೊಡೆತಗಳಿಗೆ ಬೆಲೆ ತೆತ್ತರು. ರನ್ನಿಂಗ್ ಬಿಟ್ವೀನ್ ದಿ ವಿಕೆಟ್ಸ್‌ನಲ್ಲಿ ಸದಾ ಕುಂಟುವ ಭಾರತ ದ್ರಾವಿಡ್ ಹಾಗೂ ಹೊಸಬ ರಿತಿಂದರ್ ಸಿಂಗ್ ಸೋದಿ ವಿಕೆಟ್ ಕಳೆದುಕೊಂಡದ್ದೂ ತನ್ನ ಈ ಹಳೆ ಚಾಳಿಯಿಂದಲೇ. ಯುವರಾಜ್ ಆತ್ಮವಿಶ್ವಾಸದಿಂದ ಆಟ ಶುರು ಮಾಡಿದರೂ, ತೀರಾ ಕೆಳಗೆ ಬಂದ ಚೆಂಡು ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿತು. 150 ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಭಾರತದ ಕತೆ ಮುಗಿಯಿತೆಂದು ವೀಕ್ಷಕರು ಮನೆಗೆ ಹೋಗಲು ಪ್ರಾರಂಭಿಸಿದರು.
ಆಗ ಗೆದ್ದದ್ದು ಪಂದ್ಯ ಪುರುಷೋತ್ತಮರಾದ ಬದಾನಿ ತಾಳ್ಮೆ (ಅಜೇಯ 55). ದಹಿಯಾ ಆಕ್ರಮಣ (35 ಎಸೆತಗಳಿಗೆ 35). ಕೊನೆಗ, 7 ಬಾರಿ ಒಂದೇ ಸಮ ಶೂನ್ಯ ಸಂಪಾದನೆ ಮಾಡಿರುವ ನಂಬಲಿಕ್ಕೇ ಲಾಯಕ್ಕಲ್ಲದ ಅಜಿತ್ ಅಗರ್ಕರ್(3 ಬೌಂಡರಿಗಳಿದ್ದ ಅಜೇಯ 19 ) ಅವರ ಅಗತ್ಯಕ್ಕೆ ತಕ್ಕ ಆಟ. ಪರಿಣಾಮ ಜಿಂಬಾಬ್ವೆಯ 254 ರನ್‌ಗಳ ಸವಾಲಿಗೆ ಭಾರತದ 255 ರನ್‌ಗಳ ಅನಿರೀಕ್ಷಿತ ಜವಾಬು. ಭಾರತಕ್ಕೆ 3 ವಿಕೆಟ್‌ಗಳ ಜಯ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ, ಕಾರ್ಲೈಲ್ (ಅಜೇಯ 91) ಹಾಗೂ ಕ್ಯಾಂಪ್‌ಬೆಲ್ (69) ಆಟದ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 253 ರನ್ ಕಲೆ ಹಾಕಿತು. ಬೌಲ್ ಮಾಡಲು ಹೆಚ್ಚು ಸಮಯ ತೆಗೆದುಕೊಂಡ ಭಾರತ 49 ಓವರ್‌ಗಳಲ್ಲೇ ಗುರಿ ಮುಟ್ಟಬೇಕಾಯಿತು. ಶನಿವಾರ ಬೌಲರ್‌ಗಳ ದಿನವಾಗಿರಲಿಲ್ಲ. ಭಾರತದ ಪರ ವೆಂಕಿ ಹಾಗೂ ಅಗರ್ಕರ್ ತಲಾ 2, ಜಿಂಬಾಬ್ವೆ ಪರ ಮರ್ಫಿ ಹಾಗೂ ವಿಜಾನ್ ತಲಾ 2 ವಿಕೆಟ್ ಗಳಿಸಿದರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications