Get Updates
Get notified of breaking news, exclusive insights, and must-see stories!

ಭಾರತೀಯ ಸುಂದರಿಯರ ಗೆಲುವಿನ ಹಿಂದಿನಕನಸಿನ ತಂಡ ಯಾವುದು ಗೊತ್ತೆ ?

* ಶಿವಕುಮಾರ್‌

ಮುಂಬೈ : ಒಬ್ಬರ ಹಿಂದೆ ಒಬ್ಬರಂತೆ ವಿಶ್ವ ಸುಂದರಿ, ಭುವನ ಸುಂದರಿ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ಭಾರತೀಯ ಸುಂದರಿಯರ ಕನಸುಗಳ ಹಿಂದಿನ ಶಕ್ತಿಗಳು ಯಾವುವು ಅದಕ್ಕಾಗಿ ಅವರ ಪರಿಶ್ರಮ ಎಷ್ಟು ಎಂಬ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ.

ಪ್ರತಿಷ್ಟಿತ ಈ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸ್ಪರ್ಧಾಳುಗಳನ್ನು ತಯಾರು ಮಾಡಲು ಪರಿಣತರ ಒಂದು ತಂಡವೇ ಇದೆ. ತರಬೇತಿಗೆ ತಜ್ಞರ ತಂಡವನ್ನು ಸುಂದರಿಯರ ಸ್ಪರ್ಧೆ ಏರ್ಪಡಿಸುವ ಫೆಮೀನಾ ಮ್ಯಾಗಜೀನ್‌ ಒಡೆತನವಿರುವ ಬೆನ್ನೆಟ್‌ ಕೋಲ್‌ಮೆನ್‌ ಅಂಡ್‌ ಕಂಪನಿ ಆರಿಸುತ್ತದೆ. ವಿಶ್ವ ಸುಂದರಿ, ಭುವನ ಸುಂದರಿ ಸ್ಪರ್ಧೆಗಳಿಗೆ ಭಾರತದಿಂದ ಸ್ಪರ್ಧಾಳುಗಳನ್ನು ಕಳಿಸಲು ಪರವಾನಿಗೆ ಪಡೆದಿರುವ ಏಕೈಕ ಅಧಿಕೃತ ಸಂಸ್ಥೆ ಈ ಬೆನ್ನೆಟ್‌ ಕೋಲ್‌ಮೆನ್‌ ಅಂಡ್‌ ಕಂಪನಿ.

ಸೌಂದರ್ಯ ಪರಿಣತರಾದ ಅಂಜಲಿ ಮುಖರ್ಜಿ, ಮಿಕಾಯ್‌ ಮೆಹ್ತಾ, ಸಬ್ರಿನಾ ಮರ್ಚೆಂಟ್‌ ಮತ್ತು ಡಾ. ಸಂದೇಶ್‌ ಮಾಯೇಕರ್‌ ಅವರು ಪ್ರಿಯಾಂಕಾಗೆ ಮಾರ್ಗದರ್ಶನ ನೀಡಿದವರಲ್ಲಿ ಪ್ರಮುಖರಾಗಿದ್ದಾರೆ. ಈ ಮಂಚೆ ಪ್ರಶಸ್ತಿ ಬಾಚಿಕೊಂಡವರಿಗೂ ಈ ತಜ್ಞರು ಮಾರ್ಗದರ್ಶಕರಾಗಿದ್ದರು.

ವರ್ಷದ ಬೆವರಿನ ಫಲ : ಮೆಹ್ತಾ ಅವರು ಫಿಟ್‌ನೆಸ್‌ ಮಾಸ್ಟರ್‌. ಪ್ರಿಯಾಂಕಾ ಅವರ ಜಯದ ಹಿಂದಿನ ಪ್ರಮುಖ ಶಕ್ತಿ ಮೆಹ್ತಾ. ಸಮಾಜಿಕ ಕಾರ್ಯಕರ್ತರೂ ದೂರದರ್ಶನದಲ್ಲಿ ಆ್ಯಂಕರರ್‌ ಆಗಿ ಕೆಲಸ ಮಾಡುವ ಸಬ್ರಿನಾ ಮರ್ಚೆಂಟ್‌ ತರಬೇತಿ ಉಸ್ತುವಾರಿ ವಹಿಸಿದ್ದರಲ್ಲಿ ಪ್ರಮುಖರು. ಹಲ್ಲುಗಳ ವೈದ್ಯರಾಗಿರುವ ಚೋಪ್ರಾ, ಪ್ರಿಯಾಂಕ ಅವರ ಜಯದ ಆಕರ್ಷಕ ನಗುವಿಗಾಗಿ ಒಂದು ವರ್ಷದಿಂದ ಬೆವರು ಹರಿಸಿದ್ದಾರೆ.

ಕಳೆದ ಜನವರಿಯಲ್ಲಿ ಪ್ರಿಯಾಂಕಾ ಅವರು ಭಾರತದ ಸುಂದರಿಯಾಗಿ ಆಯ್ಕೆಯಾದಂದಿನಿಂದ ಸಾಮಾನ್ಯ ಜ್ಞಾನದ ಕುರಿತ ತರಬೇತಿ ಸೇರಿದಂತೆ ಮೇಕಪ್‌, ಕೇಶ ವಿನ್ಯಾಸ, ಡ್ತೆಸ್ಸಿಂಗ್‌ ಮುಂತಾದ ಅನೇಕ ವಿಭಾಗಗಳಲ್ಲಿ ಆಕೆಗೆ ಚೋಪ್ರಾ ನೆರವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂಬೈ ಮೂಲದ ಪ್ಯಾಷನ್‌ ಡಿಸೈನರ್‌ ಹೇಮಂತ್‌ ತ್ರಿವೇಧಿ ಅವರು, ಮಿಸ್‌ ವರ್ಲ್ಡ್‌ ಸ್ಪರ್ಧೆಗೆ 50 ತುಂಬಿದ ಸಂದರ್ಭದಲ್ಲಿ ನಡೆದ ಸಮಾರಂಭಕ್ಕಾಗಿ 96 ವಿಶೇಷ ರೀತಿಯ ಇವಿನಿಂಗ್‌ ಗೌನ್‌ಗಳನ್ನು ಕೇವಲ 8 ದಿನಗಳಲ್ಲಿ ತಯಾರಿಸಿದ್ದರು. ವಿವಿಧ ರೀತಿಯ 7 ವಿನ್ಯಾಸಗಳ ಸ್ವಿರ್ಲಿಂಗ್‌ ಸ್ಕರ್ಟ್‌ಗಳು ಇದರಲ್ಲಿ ಸೇರಿವೆ. ಇವರೆಲ್ಲಾ ಪ್ರಿಯಾಂಕಾ ಗೆಲುವಿನ ಹಿಂದಿನ ರೂವಾರಿಗಳು.

(ಐಎಎನ್‌ಎಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+