ಕರ್ನಾಟಕದ 7,500 ಹಳ್ಳಿಗಳಿಗೆ ಬಸ್ ಸೌಕರ್ಯವೇ ಇಲ್ಲ !
*ಎಂ.ಕೆ. ಮಧುಸೂದನ್
ಬೆಂಗಳೂರು : ಭಾರತದ ಸಿಲಿಕಾನ್ ಕಣಿವೆ ಎಂದು ಖ್ಯಾತವಾದ ಬೆಂಗಳೂರನ್ನೇ ರಾಜಧಾನಿಯಾಗುಳ್ಳ ಕರ್ನಾಟಕ ತಂತ್ರಜ್ಞಾನದಲ್ಲಿ ಅತ್ಯಂತ ಮುಂದುವರಿದ ರಾಜ್ಯ. ಆದರೆ, ಈ ರಾಜ್ಯದ ಏಳು ಸಾವಿರದ ಐದು ನೂರು ಹಳ್ಳಿಗಳ ಗ್ರಾಮಸ್ಥರು ತಮ್ಮ ಜೀವಿತ ಕಾಲದಲ್ಲಿ ಈ ವರೆಗೂ ತಮ್ಮೂರಿನಲ್ಲಿ ಬಸ್ ಸ್ಟಾಪ್‌ನ್ನೇ ಕಂಡಿಲ್ಲ ಎಂದರೆ ನಿಮಗೆ ಆಚ್ಚರಿಯಾಗಬಹುದು. ಆದರೆ ಇದು ಕಟು ಸತ್ಯ.
ಈ ಸತ್ಯ ರಾಜ್ಯ ಸಾರಿಗೆ ಸಚಿವರಾದ ಸಗೀರ್ ಅಹ್ಮದ್ ಅವರಿಗೂ ತಿಳಿಯದ ವಿಷಯವೇನಲ್ಲ. ರಾಜ್ಯದ 7,500 ಗ್ರಾಮಗಳಿಗೆ ಬಸ್ ಸೌಕರ್ಯವೇ ಇಲ್ಲ ಎಂಬುದನ್ನು ಒಪ್ಪಿಕೊಳ್ಳುವ ಅವರು, ಈ ಹಳ್ಳಿಗಳಿಗೆ ಸರಿಯಾದ ರಸ್ತೆಗಳೇ ಇಲ್ಲದ ಕಾರಣ ಬಸ್ ಓಡಿಸುವುದು ಸಾಧ್ಯವಾಗಿಲ್ಲ ಎಂದು ವಿವರಿಸಿದ್ದಾರೆ. ಮೊದಲು ಈ ಹಳ್ಳಿಗಳಿಗೆ ಹದವಾದ ರಸ್ತೆಗಳ ನಿರ್ಮಾಣ ಮಾಡಿ ಆನಂತರ ಬಸ್ ಓಡಿಸುವ ಭರವಸೆ ವಿಧಾನ ಮಂಡಲದಲ್ಲಿ ಸಚಿವರಿಂದ ಸಿಕ್ಕಿದೆ.
ರಾಜ್ಯ ಸರಕಾರ ಖಾಸಗಿ ಬಸ್‌ಗಳ ಓಡಾಟವನ್ನು ನಿಷೇಧಿಸಿರುವ ಪ್ರದೇಶಗಳ ಗ್ರಾಮಗಳೇ ಬಹುತೇಕ ಬಸ್ ಸೌಲಭ್ಯದಿಂದ ವಂಚಿತವಾಗಿರುವುದು ಮಹತ್ವದ ಸಂಗತಿ. ಆರ್ಥಿಕವಾಗಿ ಹಿಂದುಳಿದಿರುವ ಗುಲ್ಬರ್ಗಾ ಜಿಲ್ಲೆಯ 170ಕ್ಕೂ ಹೆಚ್ಚು ಹಳ್ಳಿಗಳ ಜನರು ಬಸ್ ಸೌಲಭ್ಯದಿಂದ ವಂಚಿತವಾಗಿರುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆ. ಭೂಪ್ರದೇಶದ ದೃಷ್ಟಿಯಿಂದ ಕರ್ನಾಟಕದಲ್ಲಿ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಗುಲ್ಬರ್ಗಾ ಜಿಲ್ಲೆಯಲ್ಲಿ ಬಸ್‌ಗಳ ಕೊರತೆ ಹೆಚ್ಚಾಗಿದ್ದು, ಬಹಳ ವಿರಳವಾಗಿ ಓಡಾಡುವ ಬಸ್‌ಗಳ ಟಾಪ್ ಮೇಲೆ ಕುಳಿತು ಜನರು ಪ್ರಯಾಣಿಸುವ ದೃಶ್ಯ ಸರ್ವೇ ಸಾಮಾನ್ಯ.
ಶಿಕ್ಷಣ ವಂಚಿತ ಮಕ್ಕಳು : ಬಸ್‌ಗಳ ಸಮರ್ಪಕ ಸೇವೆ ಇಲ್ಲದೆ ಜಿಲ್ಲೆಯ ಬಹುತೇಕ ಮಕ್ಕಳು ಕಲಿಕೆಯಿಂದಲೂ ವಂಚಿತರಾಗಿದ್ದಾರೆ. ಶಾಲೆಗಳಿಗೆ ಹೋಗಲು ಇಲ್ಲಿನ ಹಳ್ಳಿಗಳ ಮಕ್ಕಳು ಬಹಳ ದೂರ ನಡೆದೇ ಹೋಗಬೇಕಾದ ಪರಿಸ್ಥಿತಿ ಇದೆ. ಸುಮಾರು 30ಕ್ಕೂ ಹೆಚ್ಚು ಡ್ರೆೃವರ್‌ಗಳು ಹಾಗೂ 70ಕ್ಕೂ ಹೆಚ್ಚು ಕಂಡಕ್ಟರ್‌ಗಳು ವಿವಿಧ ಕಾರಣಗಳಿಗಾಗಿ ಶಿಸ್ತಿನ ಕ್ರಮಕ್ಕೆ ಒಳಗಾಗಿರುವುದು ಹಾಗೂ ಕೆಲವರು ತಾತ್ಕಾಲಿಕವಾಗಿ ಅಮಾನತುಗೊಂಡಿರುವುದೂ ಬಸ್ ಸೇವೆಯ ಕೊರತೆಗೆ ಕಾರಣವಾಗಿದೆ.
ಇಂತಹ ಸಮಸ್ಯೆಗಳನ್ನು ಪರಿಹರಿಸಲು ಹಾಲಿ ಇರುವ ಬಸ್ ನಿಲ್ದಾಣಗಳಲ್ಲಿ ಕಂಪ್ಯೂಟರೀಕೃತ ಟಿಕೆಟ್ ಕಾಯ್ದಿರಿಸುವಿಕೆ ಕೇಂದ್ರಗಳನ್ನು ಸ್ಥಾಪಿಸಲೂ ರಾಜ್ಯ ಸಾರಿಗೆ ಸಚಿವಾಲಯ ಚಿಂತಿಸುತ್ತಿದೆ. ಮಿಗಿಲಾಗಿ ರಾಜ್ಯ ಸಾರಿಗೆ ನಿಗಮದಲ್ಲಿ ಜಿಯೋ ಪೊಸಿಷನಿಂಗ್ ಸ್ಯಾಟಲೈಟ್ ಸಿಸ್ಟಮ್ (ಜಿಪಿಎಸ್‌ಎಸ್) ಅಳವಡಿಸುವ ಬಗ್ಗೆಯೂ ಪ್ರಕ್ರಿಯೆ ಆರಂಭವಾಗಿದೆ ಎಂದು ಸಚಿವ ಸಗೀರ್ ಅಹ್ಮದ್ ಹೇಳಿದ್ದಾರೆ.
ಈ ಯೋಜನೆಯ ಆರಂಭದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ವ್ಯವಸ್ಥೆಯಡಿ ಸಂಚರಿಸುತ್ತಿರುವ ಸುಮಾರು 200 ಬಸ್‌ಗಳಲ್ಲಿ ಜಿಪಿಎಸ್‌ಎಸ್ ಅಳವಡಿಸಿ ಅದರ ಸಾಧಕ ಬಾಧಕ ಅರಿತ ಮೇಲೆ ವಿಸ್ತರಣಾಕಾರ್ಯ ಆರಂಭವಾಗಲಿದೆ. ಇದು ಕೆಲವೇ ಮಾರ್ಗಗಳಿಗೆ ಕೇಂದ್ರೀಕೃತವಾಗಿರುವ ಇಲ್ಲವೇ ಕೆಲವು ಮಾರ್ಗಗಳಲ್ಲಿ ಉಂಟಾಗಿರುವ ಬಸ್ ಕೊರತೆಯನ್ನು ನಿವಾರಿಸಲು ನೆರವಾಗಲಿದೆ. ರಸ್ತೆಗಳು ನೆಟ್ಟಗಾಗಿ, ರಾಜ್ಯದ ಎಲ್ಲ ಹಳ್ಳಿಗಳಿಗೂ ಬಸ್ ಸೌಲಭ್ಯ ದೊರೆತೀತೇ ಎಂದು ಕಾದು ನೋಡಬೇಕು. (ಐಎಎನ್‌ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications