ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಲಕ್ಷ್ಮೀ ಬಾರಮ್ಮ ಎಂದು ಈಸು ಕಾಲ ನೀವು ಹಾಡುತ್ತಿದ್ದ ಪ್ರಾರ್ಥನೆ ಮುಟ್ಟ ಬೇಕಾದವರಿಗೆ ಮುಟ್ಟಿದೆ. ಲಕ್ಷ್ಮಿ ಇಂದು ಮನೆ ತುಂಬಲಿದ್ದಾಳೆ. ಮನ ತುಂಬಬೇಕಾದ ಲಕ್ಷ್ಮಿಯ ಪ್ರವೇಶಕ್ಕೆ ನೀವೇ ಮನಸ್ಸು ಮಾಡುತ್ತಿಲ್ಲ.ವೃಷಭ : ನೀವು ಆರಂಭಿಸಿರುವ ದೀರ್ಘ ಹೋರಾಟದ ಮೊದಲನೇ ಹಂತದ ಸೋಲು ನಿಮ್ಮದೇ. ಅಂದ ಮಾತ್ರಕ್ಕೆ ಎದೆಗುಂದುವುದು ಬೇಡ. ಸತ್ಯದ ಪಕ್ಷದಲ್ಲಿ ನೀವಿರುವುದರಿಂದ ನಾಳಿನ ಗೆಲುವು ನಿಮ್ಮದು.
ಮಿಥುನ : ಮನೆದೇವರನ್ನು ಪೂಜಿಸಿ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇಷ್ಟ ಪಾತ್ರರನ್ನು ಭೇಟಿಯಾಗುವ ಹಾಗೂ ಉಳಿದವರನ್ನು ಮರೆಯುವ ಕಾಲ ಹತ್ತಿರದಲ್ಲೇ ಇದೆ.
ಕಟಕ : ಮನೆಯಲ್ಲಿನ ಕಿರಿಕಿರಿ ಇಂದು ಆಫೀಸಿಗೆ ವರ್ಗಾವಣೆಯಾಗಲಿದೆ. ಈ ಬಿಸಿಯಲ್ಲಿ ತಾಳ್ಮೆ ಕಳೆದುಕೊಂಡರೆ ಸಂಜೆಯ ನಿಯೋಜಿತ ಕಾರ್ಯಗಳಲ್ಲಿ ಸಾಕಷ್ಟು ಹಣ ಕೈ ಬಿಡುತ್ತದೆ.
ಸಿಂಹ : ಪ್ರಭಾವಿ ವ್ಯಕ್ತಿಗಳು ನಿಮ್ಮ ಬಾಳಿನಲ್ಲಿ ಪ್ರವೇಶಿಸಲಿದ್ದಾರೆ. ಅವರಿಂದ ನಿಮ್ಮ ಬದುಕಿಗೆ ತಿರುವು ಸಿಗುವ ಸಾಧ್ಯತೆಯೂ ಇದೆ.
ಕನ್ಯಾ : ನಿಮ್ಮ ಸೇವೆಗೆ ಅವರು ಪ್ರಸನ್ನರಾಗಿದ್ದಾರೆ. ಅಂದುಕೊಂಡಿದ್ದೆಲ್ಲಾ ನಿಮ್ಮದಾಗುತ್ತದೆನ್ನುವ ಸ್ಪಷ್ಟ ಸೂಚನೆ ನಿಮಗಿಂದು ಸಿಗಲಿದೆ. ಸುಮ್ಮನೆ ಆತಂಕ ಯಾಕೆ ?
ತುಲಾ : ಹೊಸ ಉದ್ಯಮಕ್ಕೆ ಕೈ ಹಾಕುವುದಾದರೆ ಸ್ನೇಹಿತರ ಸಹಕಾರ ಭಾಗ್ಯವಿದೆ. ಹಳೆಯ ಕ್ಷೇತ್ರವನ್ನು ನಿರ್ಲಕ್ಷಿಸಿದರೆ, ತುಸು ಕಷ್ಟ ಒದಗಬಹುದು. ಹೆಂಡತಿಯಾಡನೆ ಕಟಿಪಿಟಿ ಇರಬಹುದು. ಅದರಿಂದ ಅಂತಹ ತೊಂದರೆಯೇನಿಲ್ಲ.
ವೃಶ್ಚಿಕ : ಎಲ್ಲ ಉತ್ತಮ ಭವಿಷ್ಯ ವಾಣಿಗಳನ್ನು ಓದುತ್ತಾ ಕೈ ಕಟ್ಟಿ ಕುಳಿತರಾಗದು. ನಿಮ್ಮ ನೌಕರಿಯ ಮೇಜಿಗಿಂತ ದೂರದಲ್ಲಿದೆ ಯಶಸ್ಸು. ಕಾರ್ಯಕ್ರಮಗಳು ನಿಮಗೋಸ್ಕರ ಕಾಯುತ್ತಿವೆ. ಪ್ರೀತಿ ಪ್ರೇಮಗಳ ವಿಷಯದಲ್ಲಿ ನಿಮ್ಮ ಯೋಚನೆಗೆ ವ್ಯತಿರಿಕ್ತವಾಗಿ ಘಟನೆಗಳು ನಡೆದರೆ ಬೇಸರ ಬೇಡ.
ಧನಸ್ಸು : ಕಲ್ಪನೆ, ಸೃಜನ ಶೀಲತೆ ನಿಮ್ಮ ಬಳಿ ಇದ್ದರೆ ಇದು ನಿಮಗೆ ಉತ್ತಮ ದಿನ. ಸೌಂದರ್ಯೋಪಾಸನಾ ಯೋಗವಿದೆ ಯಾದ್ದರಿಂದ ಹ್ಯಾಪಿ ಡೇ.
ಮಕರ : ಹಾಕಿದ ಬಂಡವಾಳ ವಾಪಾಸ್ಸು ಬರಬೇಕಿದ್ದರೆ, ಇವತ್ತು ನೀವು ನಿಮ್ಮ ಸ್ನೇಹಿತನಿಗೆ ನೆರವಾಗಬೇಕು. ಎಲ್ಲ ವಿಷಯದಲ್ಲಿಯೂ ಕಮರ್ಷಿಯಲ್ ಯೋಚನೆಗಳಿದ್ದರೆ ಕೆಲಸ ಕೈಗೂಡುವುದಿಲ್ಲ.
ಕುಂಭ : ಆದರ್ಶಗಳು ಮಾತಿಗಿಂತ ಹೆಚ್ಚಾಗಿ ನಡತೆಯಲ್ಲಿ ಕಾಣಬೇಕಲ್ಲವೇ. ಸೋಲುತ್ತಿದ್ದೀರಿ ನೀವು. ಬುದ್ಧಿ ವಾದ ಹೇಳುವವರನ್ನು ತಿರಸ್ಕರಿಸಿದುದರ ಫಲ ಇವತ್ತು ನಿಮಗೆ ಕಾದಿದೆ.
ಮೀನ : ಹಿರಿಯ ಅಧಿಕಾರಿಗಳ ಕೃಪೆ ನಿಮ್ಮ ಮೇಲಿದೆ ಎಂದು ಇತರರನ್ನು ಟೀಕಿಸುವುದು ಹೆಚ್ಚು ದಿನ ನಡೆಯದು. ಅದರಿಂದ ನೀವು ದೊಡ್ಡವರಾಗುವುದುಂಟೇ ? ನಿಮ್ಮ ಸಣ್ಣ ಪುಟ್ಟ ಸಮಸ್ಯೆಗಳಿಗೆ ಇಂದು ಉತ್ತರ ಸಿಗುತ್ತದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications