ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಪ್ಪುವಿನ ಮರಿ ಮಗಳಿಗೆ ಬ್ರಿಟನ್‌ ರಕ್ಷಣಾಸಚಿವಾಲಯದಿಂದ ಗೌರವ

By Staff
|
Google Oneindia Kannada News

ಲಂಡನ್‌ : ಬ್ರಿಟಿಷ್‌ ಗುಪ್ತದಳದಲ್ಲಿ ಮಹತ್ವದ ಸೇವೆ ಸಲ್ಲಿಸಿರುವ ಹಾಗೂ ನಾರಿkುಗಳ ವಿರುದ್ಧ ಕೆಲಸ ಮಾಡಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನನ ಮರಿ ಮೊಮ್ಮಗಳ ಸೇವೆಯನ್ನು ಗೌರವಿಸಲು ಇಲ್ಲಿನ ರಕ್ಷಣಾ ಸಚಿವಾಲಯ ನಿರ್ಧರಿಸಿದೆ. ರಕ್ಷಣಾ ದಳದಲ್ಲಿ ಸುಮಾರು 200 ವರ್ಷಗಳ ಪರಂಪರೆಯಲ್ಲಿ ಅಲ್ಪಸಂಖ್ಯಾತರು ಸಲ್ಲಿಸಿರುವ ಸೇವೆಯನ್ನು ಸ್ಮರಿಸಲು ಏರ್ಪಡಿಸಿರುವ ಪ್ರದರ್ಶನ ಸಂದರ್ಭದಲ್ಲಿ ಈ ಗೌರವವನ್ನು ಸಲ್ಲಿಸಲಾಗುತ್ತದೆ.

ನೂರ್‌ ಇನಾಯತ್‌ ಖಾನ್‌- ಉತ್ತಮ ಸರೋದ್‌ ವಾದಕಳೂ ಹೌದು. ಹುಟ್ಟಿದ್ದು ಮಾಸ್ಕೋದಲ್ಲಿ . ಶಿಕ್ಷಣ ಪ್ಯಾರಿಸ್‌ನಲ್ಲಿ . ಈಕೆಗೆ ಮರಣೋತ್ತರವಾಗಿ ಜಾರ್ಜ್‌ ಕ್ರಾಸ್‌ ಪ್ರಶಸ್ತಿಯೂ ಸಂದಿದೆ. ಆಕ್ರಮಿತ ಫ್ರಾನ್ಸ್‌ ಪ್ರದೇಶದಲ್ಲಿ ವಿರೋಧಿಗಳ ವಿರುದ್ಧ ವೈರ್‌ಲೆಸ್‌ ಉಪಕರಣವನ್ನು ಬಳಸಿದ್ದು ಅವರ ಸಾಧನೆ.

1940 ರಲ್ಲಿ ಮಹಿಳಾ ಹೆಚ್ಚುವರಿ ವಾಯುದಳಕ್ಕೆ ಸೇರ್ಪಡೆಯಾದ ಖಾನ್‌, ನಂತರ ಪರಿಣತ ಸಂಕೇತ ವಿಷಯಗಳಲ್ಲಿ ಉನ್ನತ ತರಬೇತಿ ಪಡೆಯಲು ಆಯ್ಕೆಯಾದರು. ತರಬೇತಿಯ ತರುವಾಯ ಫ್ರೆಂಚ್‌ ಭಾಷೆಯನ್ನು ಉತ್ತಮವಾಗಿ ಬಲ್ಲ ಅವರು ಗುಪ್ತದಳಕ್ಕೆ ಸೇರ್ಪಡೆಯಾದರು. ಸ್ಥಳೀಯ ಸಹಾಯಕ ದಳಗಳೊಂದಿಗೆ ದುಡಿಯಲು 1943 ರಲ್ಲಿ ಅವರನ್ನು ಫ್ರಾನ್ಸ್‌ಗೆ ವರ್ಗಾಯಿಸಲಾಯಿತು. ಅಲ್ಲಿ ಅವರು ಸಲ್ಲಿಸಿದ ಸೇವೆ ಅತ್ಯಮೂಲ್ಯವಾದುದು.

ಎರಡು ಮಹಾಯುದ್ಧಗಳಲ್ಲಿ ಭಾರತೀಯರು ಭುಜಕ್ಕೆ ಭುಜ ಆನಿಸಿ ಸಲ್ಲಿಸಿದ ಸೇವೆಯನ್ನು ವಿಶೇಷವಾಗಿ ನೂರ್‌ ಖಾನ್‌ ಅವರ ಸೇವೆಯನ್ನು ಸ್ಮರಿಸಲಾಗುತ್ತದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಇಂದಿನ 100 ದಶಲಕ್ಷ ಪೌಂಡ್‌ಗಳಿಗೆ ಸಮನಷ್ಟು ಹಣವನ್ನು ಭಾರತ ದೇಣಿಗೆಯ ರೂಪದಲ್ಲಿ ಒದಗಿಸಿತ್ತು .

ಭಾರತದ ಮಹಾನ್‌ ಸ್ವಾತಂತ್ರ್ಯ ಪ್ರೇಮಿ ಎಂದು ಹೆಸರಾದ ಟಿಪ್ಪು ಸುಲ್ತಾನನ ಬ್ರಿಟೀಷರ ವಿರುದ್ಧ ಸೆಣಸುತ್ತಲೇ ನಿಧನರಾದದ್ದನ್ನು ಇಲ್ಲಿ ನೆನೆಯಬಹುದು. ಆದರೆ, ಅವರ ವಂಶದ ಹೆಣ್ಣು ಮಗಳು ಅದೇ ಬ್ರಿಟೀಷ್‌ ಪಡೆಗಳ ಪರವಾಗಿ ದುಡಿದು ಗೌರವ ಗಿಟ್ಟಿಸುತ್ತಿರುವುದು ಅಪರೂಪದ ವಿಷಯವಾಗಿದೆ.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X