ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಜೀವನವೆಂಬ ರಸ್ತೆಯ ಬಹುತೇಕ ಹೊಂಡಗಳು ಮುಚ್ಚಲಿರುವ ಸುದಿನ. ಪ್ರೇಯಸಿಯ ಮೊಂಡು ಮುರಿಯಲಿದೆ. ನಿಮ್ಮ ದಿನದ ಕೆಲ ನಿಮಿಷಗಳನ್ನು ಆಕೆಗೇ ಮೀಸಲಿಡಿ. ನೀವು ಬಯಸಿರುವ ಗೌರವಾದರಗಳು ಅಂದುಕೊಂಡಷ್ಟು ಯಾರಿಂದಲೂ ಸಿಗದು.ವೃಷಭ : ಯಾವುದೋ ಕೋಪವನ್ನ ಆಫೀಸಿನ ನಿಮ್ಮ ಜೊತೆಗಾರರ ಮೇಲೆ ತೀರಿಸುವ ಅಪಾಯವಿದೆ. ಎಚ್ಚರ, ಹಾಗೆ ಮಾಡದಿರಿ. ಅದು ನಿಮ್ಮ ಕೆರಿಯರಿಗೇ ಕೊಡಲಿ ಏಟು ಕೊಟ್ಟೀತು.
ಮಿಥುನ : ಜೀವನದ ಗುರಿ ಸಾಧಿಸಲು ನೆಚ್ಚಿರುವ ನಿಮ್ಮವರು ಇವತ್ತು ಎಳ್ಳಷ್ಟೂ ಸೋಮಾರಿತನ ತೋರುವಂತಿಲ್ಲ. ಅವರ ಮನ ನೋಯಿಸದಂತೆ ಎಚ್ಚರ ವಹಿಸಿ. ಮನದನ್ನೆ ಹೃದಯಕ್ಕೆ ಹತ್ತಿರಾಗುತ್ತಾಳೆ, ಕೆಲ ಕ್ಷಣಗಳಷ್ಟೇ. ಅಷ್ಟರಲ್ಲೇ ಆಕೆಯನ್ನು ಹಿಡಿದಿಟ್ಟುಕೊಳ್ಳುವುದು ಒಳ್ಳೆಯದು.
ಕಟಕ : ಪ್ರೀತಿಪಾತ್ರರು ಕೊಡುವ ಹೊಸ ಸಲಹೆ ಮಿಲಿಯನ್ ಡಾಲರ್ ಐಡಿಯಾ ಆಗಿರುತ್ತದೆ. ಅದನ್ನು ಚಾಚೂ ತಪ್ಪದೆ ಅಳವಡಿಸಿಕೊಳ್ಳಿ. ಗೆಳೆಯರೊಡನೆ ಜಗಳ ಮಾತ್ರ ಕಾಯಕೂಡದು. ಕಾದಿರೋ, ಕೆಟ್ಟಿರಿ.
ಸಿಂಹ : ಇವತ್ತಿನ ಮಟ್ಟಿಗೆ ನೀವು ಅತಿ ಭಾವುಕರು. ರಕ್ತ ಹೆಚ್ಚು ಕುದಿಯುವ ದಿನ. ಬಾಯಿಗೆ ಬಂದದ್ದನ್ನ ಆಡೀರಾ ಜೋಕೆ. ಕ್ಷಣ ಚಿತ್ತ ಕ್ಷಣ ಪಿತ್ತ ಸ್ಥಿತಿ ಇವತ್ತು ಇದ್ದದ್ದೇ. ಆದರೂ ಕಡಿವಾಣ, ತಾಳ್ಮೆ ಕಾಯ್ದುಕೊಳ್ಳುವುದು ಅತಿ ಮುಖ್ಯ.
ಕನ್ಯಾ : ವಾವ್ ! ಅಂದುಕೊಂಡಿದ್ದು ಸಿಗೋ ದಿನ. ನಿಮ್ಮ ಸಿಕ್ಸ್‌ತ್ ಸೆನ್ಸ್ ಕರೆಗೆ ಓಗೊಡಿ. ಅದು ಭ್ರಮೆಯಲ್ಲ, ಭವಿಷ್ಯವಾಣಿ. ಪ್ರೀತಿ ಪ್ರೇಮ ಅಂತ ಮುಖ್ಯ ಕೆಲಸ ಮರೆತೀರಾ, ಹುಷಾರು.
ತುಲಾ : ಅವಳ(ನ)ನ್ನು ಒಲಿಸಿಕೊಳ್ಳುವ ದಿನ. ಎಲ್ಲಾ ಜಗಳ, ವೈಮನಸ್ಯಕ್ಕೆ ಇತಿಶ್ರೀ. ಮುನಿಸಿ ತವರಿಗೆ ತೆರಳಿರುವ ಮಡದಿಯೂ ಕರಗುವ ದಿನ. ಕಚೇರಿಯಲ್ಲಿ ಮಾತ್ರ ಸ್ವಲ್ಪ ಕಿರಿಕಿರಿ. ಪ್ರಾಜೆಕ್ಟಿನ ಕೆಲಸದಲ್ಲಿ ವಿಳಂಬ.
ವೃಶ್ಚಿಕ : ದೊಡ್ಡ ಬಂಡೆ ಒಡೆಯೋ ಕೆಲಸಕ್ಕೆ ಕೈಹಾಕಿರುವ ನೀವು ನಿಮ್ಮ ಮೇಲೆ ಹಾರುವ ಪುಡಿಗಲ್ಲುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಅದೇನೂ ಅವೆಲಾಂಚ್ ಅಲ್ಲ.
ಧನಸ್ಸು : ಮನೆಯನ್ನು ಆಲ್ಟರ್ ಮಾಡೋ ಯೋಚನೆಯಲ್ಲಿ ಮುಳುಗಿದ್ದೀರಿ. ನಾಲ್ಕು ಒಳ್ಳೆ ಜನರ ಸಲಹೆ ಪಡೆಯೋದು ಒಳಿತು. ಕೈಯಲ್ಲಿ ದುಡ್ಡಿದೆ ಅಂತ ಅದನ್ನು ನೀರಿನಂತೆ ಸುರಿಯೋದು ಒಳ್ಳೇದಲ್ಲ.
ಮಕರ : ನಿಮ್ಮ ಯೋಚನೆಗಳಿಗೆ ಸ್ಪಂದಿಸುವವರಿಗಿಂತ ಪ್ರತಿರೋಧ ಒಡ್ಡುವವರೇ ಹೆಚ್ಚು. ನೀವೇ ಸರಿ. ತುಂಬಾ ಜನ ಹೇಳ್ತಿದಾರೆ ಅಂತ ಕಿವಿಗೊಡಬೇಡಿ. ಮನಸ್ಸಿದ್ದಂತೆ ಮಹದೇವ.
ಕುಂಭ : ಬರಬೇಕಾಗಿರೋ ದುಡ್ಡು ಬರೋದು ಗ್ಯಾರಂಟಿ. ಟೂರು ಟ್ರಿಪ್ಪು ಅಂತ ಏನಾದ್ರೂ ಕಾರ್ಯಕ್ರಮಗಳಿದ್ದರೆ ಹಾಕಿಕೊಳ್ಳಿ. ಏನೂ ತೊಂದರೆಯಿಲ್ಲ.
ಮೀನ : ಬ್ರೂಟಸ್‌ಗಳ ಭಯವಿದೆ. ಹುಷಾರಾಗಿರಿ. ಕೆರಿಯರ್ರಿನಲ್ಲಿ ಮೇಲೇರುವ ಅವಕಾಶಕ್ಕೆ ಇನ್ನು ಕೆಲವೇ ಗೇಣು. ದುಡ್ಡೇ ಮುಖ್ಯವಲ್ಲ. ಕಾನ್ಫಿಡೆನ್ಷಿಯಲ್ ವಿಷಯಗಳನ್ನು ಹರಕು ಬಾಯಿ ಮಿತ್ರರ ಹತ್ತಿರ ಒದರೀರಾ, ಜೋಕೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications