Get Updates
Get notified of breaking news, exclusive insights, and must-see stories!

ಚಂದ್ರಗ್ರಹಕ್ಕೆ ಇನ್ನಾರು ವರ್ಷದಲ್ಲಿ ಭಾರತ ವಿಜ್ಞಾನಿಗಳ ಅಭಿಯಾನ

ಬೆಂಗಳೂರು : ಹಿಂದೂಗಳು ದೇವರೆಂದೇ ತಿಳಿದಿರುವ ಚಂದ್ರನಲ್ಲಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯೇ ಅಂತರಿಕ್ಷಯಾನ ಕೈಗೊಳ್ಳುವ ಕನಸು ನನಸಾಗುವ ಕಾಲ ದೂರವೇನಿಲ್ಲ. ಇನ್ನು 6 ವರ್ಷಗಳ ಅವಧಿಯಾಳಗೇ ಇದು ಕೈಗೂಡಬಹುದು ಎಂಬ ಸೂಚನೆಯನ್ನು ಇಸ್ರೋದ ಅಧ್ಯಕ್ಷ ಕೆ. ಕಸ್ತೂರಿರಂಗನ್‌ ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಕಸ್ತೂರಿ ರಂಗನ್‌, ಆದರೆ ಈ ಅಭಿಯಾನಕ್ಕೆ ನಿರ್ದಿಷ್ಟ ಕಾಲಮಿತಿಯನ್ನೇನೂ ವಿಧಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಇಂತಹ ಕಾರ್ಯಾಚರಣೆಗೆ ಪೂರ್ವ ಯೋಜಿತ ಕಾರ್ಯಕ್ರಮವನ್ನೇ ರೂಪಿಸಬೇಕಾಗುತ್ತದೆ ಎಂದರು.

ಈ ಸಂಬಂಧ ಇಸ್ರೋ ಬಹಳ ಗಂಭೀರ ಚಿಂತನೆಯಲ್ಲಿ ನಿರತವಾಗಿದ್ದು, ಪ್ರಯೋಗಾತ್ಮಕ ಸಲಹೆ ಸೂಚನೆಗಳಿಗಾಗಿ ವೈಜ್ಞಾನಿಕ ಹಾಗೂ ಏರೋನಾಟಿಕಲ್‌ ಸಮುದಾಯದೊಂದಿಗೆ ಚಿಂತನ ಮಂಥನ ನಡೆಸುತ್ತಿದೆ ಎಂದರು. ಅಲ್ಲದೆ ನೀತಿ ನಿಯಮ ರೂಪಕರ ಸಲಹೆ ಪಡೆದು ಒಟ್ಟಾರೆಯಾಗಿ ಈ ಅಭಿಯಾನದ ಯಶಸ್ಸಿಗೆ ಶ್ರಮಿಸುವುದು ಎಂದರು.

ಕನಸಿನ ಯೋಜನೆಯಲ್ಲ : ಪ್ರಶ್ನೆಯಾಂದಕ್ಕೆ ಉತ್ತರಿಸಿದ ಅವರು, ಇದೇನು ಕೇವಲ ಕನಸಿನ ಯೋಜನೆಯಲ್ಲ . ಈ ಅಭಿಯಾನದಿಂದ ಹೆಚ್ಚಿನದನ್ನು ಸಾಧಿಸುವ ಉದ್ದೇಶವಿದೆ ಎಂದರು. ಜಿ.ಎಸ್‌.ಎಲ್‌.ವಿ. ಉಡಾವಣೆಯ ಕಾರ್ಯ ಸಂಪೂರ್ಣ ಯಶಸ್ಸಿನ ಪಥದಲ್ಲಿದ್ದು, ಉಡಾವಣೆಯ ಕಾಲವನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದರು. ಮುಂದಿನ ವರ್ಷ ಫೆಬ್ರುವರಿ ಮಧ್ಯ ಭಾಗದಲ್ಲಿ ಈ ಉಪಗ್ರಹ ಉಡಾವಣೆ ಆಗಲಿದೆ ಎಂದೂ ಅವರು ಹೇಳಿದರು. (ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+