ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸುಂದರಿ ಸ್ಪರ್ಧೆಗೆ ಐವತ್ತರ ಸಂಭ್ರಮ

By Staff
|
Google Oneindia Kannada News

priyanka chopraಲಂಡನ್‌ : ಒಂದಾನೊಂದು ಕಾಲದಲ್ಲಿ ದನಗಳ ಜಾತ್ರೆ ಎಂದೇ ಕರೆಸಿಕೊಳ್ಳತ್ತಿದ್ದ ವಿಶ್ವ ಸುಂದರಿ ಸ್ಪರ್ಧೆಗೀಗ (ನವೆಂಬರ್‌ 30) 50 ವರ್ಷದ ಸಂಭ್ರಮ. ಈ ದೀರ್ಘ ಅವಧಿಯಲ್ಲಿ ಸ್ಪರ್ಧೆಯು ದನಗಳ ಜಾತ್ರೆಯ ಹಣೆಪಟ್ಟಿಯನ್ನು ಕಳೆದುಕೊಂಡು ಪ್ರೌಢ ಸ್ಪರ್ಧೆಯೆನಿಸಿದೆ ಎಂದು ಸ್ಪರ್ಧೆಯ ಸಂಸ್ಥಾಪಕರು ಹೇಳಿದರೆ, ದೇಹದ ಒನಪು ಒಯ್ಯಾರಕ್ಕೆ ಪ್ರಶಸ್ತಿ ನೀಡುವ ಸ್ಪರ್ಧೆ ಅರ್ಥವಿಲ್ಲದ್ದು ಎಂದು ಅದನ್ನು ವಿರೋಧಿಸುವ ಮಹಿಳಾ ಗುಂಪು ಹೇಳುತ್ತಿದೆ.

ನ.30 ರಂದು ಲಂಡನ್‌ನಲ್ಲಿ ನಡೆಯುವ ಸ್ಪರ್ಧೆಯಲ್ಲಿ ವೆನಿಜುವೆಲಾ ಮತ್ತು ಭಾರತ ಸುಂದರಿಯರ ನಡುವೆ ಬಿಗಿ ಸ್ಪರ್ಧೆ ಇದೆ. ಪ್ರಾರಂಭದಲ್ಲಿ ಮುನ್ನಡೆ ಸಾಧಿಸಿದ್ದ ಭಾರತದ ಸುಂದರಿ ರೋಮಾಂಚನದ ಕ್ಷಣ ಹತ್ತಿರವಾಗುತ್ತಿದ್ದಂತೆ ಸ್ಪರ್ಧೆಯಲ್ಲಿ ತುಸು ಹಿಂದೆ ಬಿದ್ದಿದ್ದಾರೆ. ವೆನಿಜುವೆಲಾ ಸುಂದರಿ 6-1ರ ಬೆಟ್‌ನಲ್ಲಿದ್ದರೆ , ಭಾರತದ ಪ್ರಿಯಾಂಕಾ ಚೋಪ್ರಾ 7-1ರ ಬೆಟ್‌ಗಳಲ್ಲಿ ಸೆಣಸುತ್ತಿದ್ದಾಳೆ. ನಂತರದ ಸ್ಥಾನದಲ್ಲಿರುವ ಸ್ಪೇಯ್ನ್‌ ಸುಂದರಿ ತೀವ್ರ ಸ್ಪರ್ಧೆಯಿಂದ ಮಾರು ದೂರದಲ್ಲಿದ್ದಾಳೆ. ಈ ತೀವ್ರ ಸ್ಪರ್ಧೆಯಲ್ಲಿ ಸೆಣಸಲು, ಬುದ್ಧಿವಂತಿಕೆ , ಚತುರತೆಗಳನ್ನು ಅಭ್ಯರ್ಥಿಯು ತನ್ನ ಬತ್ತಳಿಕೆಯ ತುಂಬಾ ತುಂಬಿಕೊಂಡಿರಬೇಕು.

1951ರಲ್ಲಿ ಬ್ರಿಟನ್‌ನ ಇಂಪ್ರೆಸಾರಿಯೋ ಎರಿಕ್‌ ಮೋರ್ಲಿ ವಿಶ್ವ ಸುಂದರಿ ಸ್ಪರ್ಧೆಯ ಕಲ್ಪನೆಯನ್ನು ಕಾರ್ಯ ರೂಪಕ್ಕೆ ತಂದರು. 1970ರಲ್ಲಿ ಸ್ಪರ್ಧೆಯನ್ನು ವಿರೋಧಿಸುವ ಗುಂಪುಗಳು ಹೆಚ್ಚಾಗುತ್ತಾ ಹೋದವು. ವಿಶ್ವ ಸುಂದರಿ ಸ್ಪರ್ಧೆ ಸಂಸ್ಥಾಪಕನಾಗಿ 49 ಸುಂದರಿಯರ ಆಯ್ಕೆಯನ್ನು ಕಂಡಿದ್ದ, 82ರ ವಯಸ್ಸಿನ ಎರಿಕ್‌ ಮೋರ್ಲಿ ಇದೇ ತಿಂಗಳಲ್ಲಿ ತೀರಿಕೊಂಡರು. ಅವರ ಹೆಂಡತಿ ಜುಲಿಯಾ ಎಲ್ಲಾ ವಿರೋಧಗಳ ನಡುವೆಯೂ ಸ್ಪರ್ಧೆಯನ್ನು ಬೆಂಬಲಿಸುತ್ತಿದ್ದಾರೆ. ‘ಹಿಂದಿನ ಕಾಲದಲ್ಲಿ ಸ್ಪರ್ಧೆಯು ದನಗಳ ಜಾತ್ರೆಯಂತಿದ್ದಿರಬಹುದು. ಆದರೆ ಈಗ ಹಾಗಿಲ್ಲ. ಮಹಿಳೆಯರ ಕೌಶಲ್ಯ ಸ್ಪರ್ಧೆಯಲ್ಲಿ ವ್ಯಕ್ತವಾಗುತ್ತದೆ. ಮಹಿಳೆಯರು- ವಕೀಲರು, ಸರ್ಜನ್‌ಗಳು, ಇಂಜಿನಿಯರ್‌ಗಳಾಗಿ ಸಾಮಾಜಿಕ ಮಾನ್ಯತೆ ಪಡೆದುಕೊಂಡಿದ್ದಾರೆ. ದ ಕಿಂಗ್‌ ಆಫ್‌ ಟಿವಿ ಟ್ಯಾಕ್‌ ಪ್ರೋಗ್ರಾಂನ ಜೆರ್ರಿ ಸ್ಪ್ರಿ ಂಜರ್‌ ಈ ಸ್ಪರ್ಧೆಯನ್ನು ಪ್ರಸಾರ ಮಾಡಲಿದ್ದು, ಈ ಸ್ಪರ್ಧೆಯನ್ನು ಟಿವಿಯಲ್ಲಿ ವೀಕ್ಷಿಸುವವರು ಅಷ್ಟೇನೂ ಗಂಭೀರವಾಗಿ ಇದನ್ನು ಪರಿಗಣಿಸುವುದಿಲ್ಲ ಎನ್ನುತ್ತಾರೆ.

ಆದರೆ ಸ್ಪರ್ಧೆಯಲ್ಲಿ ಭಾಗವಹಿಸುವ ಎಳೆಯ ಸುಂದರಿಯರು ಸ್ಪರ್ಧೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ತೀರಾ ಕಾಳಜಿಯಿಂದ ವರ್ಷಗಟ್ಟಲೆ ತಯಾರಿ ನಡೆಸಿ ಸ್ಪರ್ಧಾ ವೇದಿಕೆಗೆ ಬರುತ್ತಾರೆ. ಈಗಿನ ಮಿಸ್‌ ಇಂಡಿಯಾ ಸ್ಪರ್ಧಿ ಕ್ಲಿನಿಕಲ್‌ ಸೈಕಾಜಿಸ್ಟ್‌ ಓದುತ್ತಿದ್ದಾಳೆ. ಇನ್ನೊಬ್ಬ ಸ್ಪರ್ಧಿ ಬೇಲಾರುಸ್‌ ಗಣಿತದ ಥಿಯರಿಗಳನ್ನು ಸರಳಗೊಳಿಸುವ ಬಗೆ ಹೇಗೆ ಎಂಬ ವಿಷಯದ ಕುರಿತು ಅಧ್ಯಯನ ಮಾಡುತ್ತಿದ್ದಾಳೆ.

ಅಷ್ಟು ಮಾತ್ರವಲ್ಲದೆ ಪ್ರತಿ ಸ್ಪರ್ಧಿಯೂ ತಾನು ಇನ್ನಷ್ಟು ಕಲಿಯುವುದಿದೆ ಎಂಬ ಭಾವನೆಯಿಟ್ಟುಕೊಂಡೇ ಸ್ಪರ್ಧಾ ಕಣಕ್ಕೆ ಬರುತ್ತಾಳೆ ವಿನಃ ಸ್ಪರ್ಧಾ ಕಣವೇ ತನ್ನ ಜೀವನದ ಅಂತಿಮ ವೇದಿಕೆ ಎಂದು ಭಾವಿಸುವುದಿಲ್ಲ . ಈ ಎಲ್ಲದರ ನಡುವೆ ಮಿಸ್‌ ವರ್ಲ್ಡ್‌ ಸ್ಪರ್ಧೆ ಹೆಣ್ಣಿನ ದೇಹವನ್ನು ಕೀಳಾಗಿ ಕಾಣುವ ನಾಜೂಕಿನ ಲೇಪ ಇರುವ ಮನೋ ಭಾವವುಳ್ಳದ್ದಾಗಿದೆ ಎಂದು ರಾಷ್ಟ್ರೀಯ ಮಹಿಳಾ ವಿದ್ಯಾರ್ಥಿ ಒಕ್ಕೂಟ ಹೇಳುತ್ತದೆ . ಅಲ್ಲದೆ ಮಹಿಳೆಯಲ್ಲಿ ಅಂದ ಚಂದವನ್ನು ಹುಡುಕಿ ಪ್ರಶಸ್ತಿ ನೀಡುವ ಬದಲಿಗೆ ಆಕೆಯ ಸಾಧನೆಗೆ ನೀರೆರೆಯಬೇಕು ಎಂದು ವಿದ್ಯಾರ್ಥಿನಿಯರ ಒಕ್ಕೂಟ ಹೇಳುತ್ತದೆ.

(ರಾಯಿಟರ್ಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X