ಶೂ ಧರಿಸಿ ಗಾಯತ್ರಿ ಮಂತ್ರ : ಬಚ್ಚನ್ ವಿರುದ್ಧ ಪಂಡಿತರ ಆಕ್ರೋಶ
ಲಖನೌ : ಸ್ಟಾರ್ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಿಂದ ಮನೆಮಾತಾಗಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಈಗ ಮತ್ತೊಂದು ರೀತಿಯಲ್ಲಿ ಸುದ್ದಿ ಮಾಡಿದ್ದಾರಲ್ಲದೆ, ಕೆಲವರ ಆಕ್ರೋಶಕ್ಕೂ ಕಾರಣರಾಗಿದ್ದಾರೆ.
ಮೊಹಬತೇನ್ ಚಿತ್ರದ ದೃಶ್ಯವೊಂದರಲ್ಲಿ ಅಮಿತಾಬ್ ಬಚ್ಚನ್ ಕಾಲಿಗೆ ಶೂ ಧರಿಸಿ ಪವಿತ್ರವಾದ ಗಾಯತ್ರಿ ಮಂತ್ರ ಪಠಿಸಿದ್ದಾರೆ ಎಂಬುದು ಕಾಶಿ ಪಂಡಿತರುಗಳ ಆಕ್ರೋಶಕ್ಕೆ ಕಾರಣವಾಗಿದೆ. ಬೂಟು ಧರಿಸಿ ಬಚ್ಚನ್ ತಪ್ಪು ತಪ್ಪಾಗಿ ಗಾಯತ್ರಿ ಮಂತ್ರ ಜಪ ಮಾಡಿದ್ದರು ಎಂದು ಈಗಾಗಲೇ ಶಿವಸೇನೆಯ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸಿದ್ದರು.
ಬಚ್ಚನ್ ತಾವು ಗಾಯತ್ರಿ ಮಂತ್ರ ಪಠಿಸುವ ಆ ದೃಶ್ಯದಲ್ಲಿ ಪಾದರಕ್ಷೆ ಧರಿಸಿರಲಿಲ್ಲ. ತಮಗೆ ಧರ್ಮ ಹಾಗೂ ದೇವರ ಬಗ್ಗೆ ಅಪಾರ ಗೌರವವಿದೆ ಎಂದು ಸಮಜಾಯಿಸಿ ನೀಡಿದ್ದರೂ ಕಾಶಿ ವಿಶ್ವೇಶ್ವರ ದೇವಸ್ಥಾನ ಸಮಿತಿ, ವಾರಾಣಸಿಯ ವೇದ ಪಾರಾಯಣ ಕೇಂದ್ರ ಹಾಗೂ ಕಾಶಿ ಸಂಸ್ಕೃತ ರಕ್ಷಾ ಸಂಘರ್ಷ ಸಮಿತಿ ಆಕ್ರೋಶ ಕಡಿಮೆಯಾಗಿಲ್ಲ.
ಚಿತ್ರದಿಂದ ಸಂಪೂರ್ಣವಾಗಿ ಈ ದೃಶ್ಯವನ್ನು ತೆಗೆದುಹಾಕದಿದ್ದರೆ ಉಗ್ರ ಹೋರಾಟ ನಡೆಸುವ ಬೆದರಿಕೆಯನ್ನೂ ಅವರು ಹಾಕಿದ್ದಾರೆ. ಮಿಗಿಲಾಗಿ ಗಾಯತ್ರಿ ಮಂತ್ರಕ್ಕೆ ಬಚ್ಚನ್‌ರಿಂದ ಆಗಿರುವ ಅಪಮಾನದ ಪ್ರಾಯಶ್ಚಿತ್ತಾರ್ಥವಾಗಿ ಡಿಸೆಂಬರ್ 9ರಂದು ಗಾಯತ್ರಿ ಯಾಗ ಕೈಗೊಳ್ಳಲೂ ಸಿದ್ಧತೆಗಳನ್ನು ನಡೆಸಿದ್ದಾರೆ. ಈ ಮಧ್ಯೆ ಹಿಂದೂಗಳ ಪ್ರತಿರೋಧಕ್ಕೆ ಹೆದರಿ ಕೆಲವು ಚಿತ್ರಮಂದಿರಗಳಲ್ಲಿ ಈ ದೃಶ್ಯವನ್ನು ಈಗಾಗಲೇ ತೆಗೆದು ಹಾಕಲಾಗಿದೆಯಂತೆ.
ಋಣಮುಕ್ತ ಕರೋಡ್‌ಪತಿ : ಈ ಮಧ್ಯೆ ಅಮಿತಾಬ್ ಬಚ್ಚನ್ ಅವರು ಕೆನರಾ ಬ್ಯಾಂಕ್‌ಗೆ ತಾವು ಪಾವತಿಸ ಬೇಕಾಗಿದ್ದ 10 ಕೋಟಿ ರುಪಾಯಿಗಳನ್ನು ಪಾವತಿ ಮಾಡಿದ್ದಾರೆ. ಕೆನರಾ ಬ್ಯಾಂಕ್ 10 ಕೋಟಿ ರುಪಾಯಿಗಳ ಸಾಲ ವಸೂಲಿಗೆ ಬಚ್ಚನ್‌ರ ಎಬಿಸಿಎಲ್‌ವಿರುದ್ಧ ದಾವೆ ಹೂಡಿತ್ತು. ದೀರ್ಘ ಕಾಲದ ಕಾನೂನು ಸಮರದ ನಂತರ ಈಗ ಬಚ್ಚನ್ ಋಣಮುಕ್ತರಾಗಿದ್ದಾರೆ.
ಬ್ಯಾಂಕ್ ಈಗ ಬಚ್ಚನ್ ಸಂಸ್ಥೆ ವಿರುದ್ಧ ಹೂಡಿದ್ದ ದಾವೆಯನ್ನು ಹಿಂತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಅಮಿತಾಬ್‌ರ ಪ್ರತೀಕ್ಷಾ ಬಂಗಲೆ ಮುಟ್ಟು ಗೋಲು ಆದೇಶ ರದ್ದಾಗಿದೆ ಎಂದು ಎಬಿಸಿಎಲ್ ವಕೀಲ ನಿಶೀತ್ ಧ್ರುವ ತಿಳಿಸಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications