‘ಆ ನೂರೆಂಟು ದಿನ’ ಆಕಾಶವಾಣಿಯಲ್ಲಿ ರಾಜ್ ಸಂದರ್ಶನ ಸರಣಿ
ಬೆಂಗಳೂರು : ಕಾಡಿನಲ್ಲಿ 108 ದಿನ ಕಳೆದ ಕನ್ನಡದ ವರನಟ ರಾಜ್ಕುಮಾರ್ ತಮ್ಮ ಕಾಡಿನ ಅನುಭವಗಳನ್ನು ನಾಡಿನಲ್ಲಿ ಹಂಚಿಕೊಂಡಿದ್ದಾರೆ. ಕಾಡಿನಿಂದ ನಾಡಿಗೆ ಸಂದೇಶ ರವಾನಿಸುತ್ತಿದ್ದ ಬಾನುಲಿಯೇ ಈಗ ರಾಜ್ ಅಂತರಂಗದ ಮಾತುಗಳನ್ನು ಕನ್ನಡಿಗರಿಗೆ ಕೇಳಿಸುತ್ತಿದೆ.
‘ಆ ನೂರೆಂಟು ದಿನ’ ಎಂಬ ಶೀರ್ಷಿಕಿಯ ಈ ಕಾರ್ಯಕ್ರಮ ಸರಣಿ ನವೆಂಬರ್ 30ರ ಗುರುವಾರದಿಂದ 10 ದಿನಗಳ ಕಾಲ ಬಿತ್ತರಗೊಳ್ಳಲಿದೆ. ಪ್ರತಿದಿನ ಬೆಳಗ್ಗೆ 7-45ರಿಂದ ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾಗುವ ಈ ಕಾರ್ಯಕ್ರಮವನ್ನು ರಾಜ್ಯದ ಇತರೆ ಬಾನುಲಿ ಕೇಂದ್ರಗಳು ಸಹ ಪ್ರಸಾರ ಮಾಡಲಿವೆ.
ಅಪಹರಣ ಹೇಗೆ ನಡೆಯಿತು ಎನ್ನುವುದರಿಂದ ಹಿಡಿದು ಕಾಡಿನಲ್ಲಿ 108 ದಿನ ಹೇಗೆ ಕಳೆದೆ ಎಂಬ ಅನುಭವಗಳನ್ನು ರಾಜ್ಕುಮಾರ್ ಶ್ರೋತೃಗಳೊಂದಿಗೆ ಹಂಚಿಕೊಂಡಿದ್ದಾರೆ. ಪುಟ್ಟ ರೇಡಿಯೋ ತಮಗೆ ಹೇಗೆ ಆಸರೆಯಾಗಿತ್ತು, ಬದುಕಲು ಹೇಗೆ ನವ ಚೈತನ್ನ ನೀಡುತ್ತಿತ್ತು ಎಂಬುದನ್ನು ವಿವರಿಸಿದ್ದಾರೆ ಎಂದು ಆಕಾಶವಾಣಿಯ ಪ್ರಕಟಣೆ ತಿಳಿಸಿದೆ. ಈ ಸಂದರ್ಶನ ಆಧಾರಿತ ಸರಣಿ ಕಾರ್ಯಕ್ರಮವನ್ನು ಬೆಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಉದಯಾದ್ರಿ ನಿರ್ಮಿಸಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications