ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಮಳೆ ಬಂದ ಮೇಲಿನ ನಿರುಮ್ಮಳ ಮೌನ ನಿಮ್ಮ ಪಾಲಿಗಿಲ್ಲ . ಉಳಿದಿರುವುದು ಕಿರಿಕಿರಿ, ಕೊಚ್ಚೆ . ಇದರಲ್ಲಿ ನಿಮ್ಮ ತಪ್ಪಿನ ಪಾಲು ಹೆಚ್ಚಿರುವುದರಿಂದ ಇತರರನ್ನು ದೂರುವುದರಲ್ಲಿ ಅರ್ಥವಿಲ್ಲವೃಷಭ : ಹರಿವಿನ ಕಡೆಗೆ ಚಲಿಸುವುದು ಎಷ್ಟು ಮುಖ್ಯ ಅನ್ನುವುದು ನಿಮಗೆ ಇಂದು ಅರ್ಥವಾಗಲಿದೆ. ಇತರರೊಂದಿಗೆ ರಾಜಿ ಮಾಡಿಕೊಳ್ಳುವುದು ಅಂದರೆ ನಿಮ್ಮ ಸೋಲೇನೂ ಅಲ್ಲ.
ಮಿಥುನ : ನೀವು ವೃಥಾ ಕೊರಗುತ್ತೀರಿ. ಹೊಳೆಯಲ್ಲಿ ಹರಿದ ನೀರಿನ ಬಗ್ಗೆ ಚಿಂತೆ ಬೇಡ. ಹೊಸ ಹುರುಪಿನಿಂದ ಕಾರ್ಯೋನ್ಮುಖರಾಗಿ, ದಿನವನ್ನು ಖುಷಿಯಾಗಿಸಿಕೊಳ್ಳಿ.
ಕಟಕ : ಅಪ್ಪ ಅಮ್ಮನ ಮಾತನ್ನು ಕೇಳುವ ಜಾಣರು ನೀವು ಹೌದು. ಆದರೆ, ಅಪ್ಪ ನೆಟ್ಟಾಲಕ್ಕೆ ಜೋತು ಬೀಳುವುದು ಜಾಣತನವೇನೂ ಅಲ್ಲ . ಬಹಳ ದಿನಗಳ ಇಬ್ಬಂದಿತನವನ್ನು ಹರಿದುಕೊಂಡು ನಿಮ್ಮ ಅಸ್ತಿತ್ವವನ್ನು ಪ್ರಕಟಗೊಳಿಸಲು ಈ ದಿನ ಪ್ರಶಸ್ತವಾಗಿದೆ.
ಸಿಂಹ : ಕುಟುಂಬದ ವೈದ್ಯರನ್ನು ಭೇಟಿ ಮಾಡುತ್ತೀರಿ. ದಣಿದ ದೇಹಕ್ಕೆ ಇದು ಅನಿವಾರ್ಯ ಕರ್ಮವಾದ್ದರಿಂದ ಬೇಜಾರು ಪಟ್ಟುಕೊಳ್ಳುವಂತದ್ದೇನೂ ಇಲ್ಲ . ಆದರೆ, ಜೇಬು ಹಗುರಾಗುತ್ತದೆ. ಅದು ಅನಿವಾರ್ಯ.
ಕನ್ಯಾ : ಇತರರು ನಿಮ್ಮ ಬಗ್ಗೆ ಏನು ಮಾತಾಡಿಕೊಳ್ಳುತ್ತಾರೆ ಅನ್ನುವ ಬಗ್ಗೆ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಇಂದು ಹಣಕಾಸಿನ ಹಿನ್ನಡೆಯ ದಿನ. ಹುಷಾರಿಗಿರಿ.
ತುಲಾ : ಗುರುದರ್ಶನದ ಲಾಭ ಇಂದು ನಿಮ್ಮದಾಗುತ್ತದೆ. ಆ ಧನ್ಯತೆಯಲ್ಲಿ ಹೊಸ ಐಡಿಯಾಗಳು ಸಿಕ್ಕರೂ ಸಿಗಬಹುದು.
ವೃಶ್ಚಿಕ : ಅಬ್ಬಾ ! ದಿನ ಎಷ್ಟು ದೀರ್ಘ ಅನ್ನಿಸುವುದು ಖಂಡಿತಾ. ಗೆಳೆಯರೊಡನೆ ಮನಸ್ತಾಪ ಬೇಡ. ಅವರು ಮಾತಿನಲ್ಲೇ ಹೊಡೆಯುತ್ತಾರೆ. ದೇಹದ ಪೆಟ್ಟು ಬೇಗ ಮಾಯುತ್ತದಾದರೂ, ಮನಸ್ಸಿನ ಮೇಲಾಗುವ ಪೆಟ್ಟು ಇಷ್ಟಿಷ್ಟೇ ಕೊಲ್ಲುತ್ತದೆ ಎನ್ನುವ ಇತರರ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ
ಧನಸ್ಸು : ಅತಿಥಿಗಳ ಆಗಮನ. ಜೊತೆಗೆ ಅಭ್ಯಾಗತರೂ ಆಗಮಿಸಿದರೆ ಮುಖ ಸಣ್ಣದು ಮಾಡಿಕೊಳ್ಳಬೇಡಿ. ಅವರಿಂದ ನಿಮಗೆ ಲಾಭವಾಗಲಿದೆ.
ಮಕರ : ಅವನಿಂತವ ಇವನಿಂತವ ಎಂದ್ಹೇಳುವ ಮೊದಲರಿಯುವ ನಾನೆಂತವ ಎಂದು, ನನ್ನೊಳಗಿರಬಹುದವ ಎಂದು- ಅನ್ನುವ ಮಾತು ನಿಮಗೆ ಹೆಚ್ಚು ಸೂಕ್ತವಾದೀತು. ನೀವು ಕಮಲದಂತೆ ನಳನಳಿಸುವುದು ಯಾವಾಗ ಎಂದು ಯಾರಾದರೂ ಕೇಳಿದರೆ ಅದರಲ್ಲಿ ಕೆಸರು ಹುಡುಕಬೇಡಿ.
ಕುಂಭ : ತುಂತುರಿಗೆ ಮೈಯ್ಯಾಡ್ಡುತ್ತಾ ಖುಷಿಯಾಗಿ ಬೀದಿ ಸುತ್ತುವ ನಿಮ್ಮಿಷ್ಟದ ದಿನ. ಇಷ್ಟ ಪಾತ್ರರು ಜೊತೆಗಿರುವುದರಿಂದ ನಿಮ್ಮ ಪಾಲಿಗೆ ಇಮ್ಮಡಿ ಖುಷಿ.
ಮೀನ : ಬದುಕಿನ ಬಹು ದೊಡ್ಡ ತಿರುವಿನಲ್ಲಿ ನೀವು ನಿಂತಿದ್ದೀರಿ. ಗ್ರಹಗತಿಗಳು ಚೆನ್ನಾಗಿರುವುದರಿಂದ ಅಗ್ನಿದಿವ್ಯದಲ್ಲಿ ಗೆದ್ದು ನಗುತ್ತೀರಿ. ಆದರೆ, ಗೆಳೆಯರ ಬಾಹ್ಯ ನಡವಳಿಕೆಗಳಲ್ಲಿ ಹುಳುಕು ಹುಡುಕುವ ಪ್ರಯತ್ನ ಬೇಡ. ನೀವು ಸಣ್ಣವರಾಗುತ್ತೀರಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications