ರಾಜ್ಯಾದ್ಯಂತ ಕಲಾಗ್ಯಾಲರಿ: ಎಸ್.ಜಿ. ವಾಸುದೇವ್ ನೇತೃತ್ವದಲ್ಲಿ ಸಮಿತಿ
ಬೆಂಗಳೂರು : ರಾಜ್ಯಾದ್ಯಂತ ಕಲಾ ಗ್ಯಾಲರಿಗಳನ್ನು ಸ್ಥಾಪಿಸಲು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಯೋಜಿಸಿದ್ದು, ಇದಕ್ಕಾಗಿ ಕಲಾವಿದ ಎಸ್. ಜಿ. ವಾಸುದೇವ್ ಅವರ ನೇತ ೃತ್ವದಲ್ಲಿ ಸಮಿತಿಯಾಂದನ್ನು ರಚಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಐ.ಎಂ. ವಿಠ್ಠಲ ಮೂರ್ತಿ ಹೇಳಿದ್ದಾರೆ.
ಈ ಸಮಿತಿಯು ಮುಂದಿನ ತಿಂಗಳು 4ರಿಂದ 9ರವರೆಗೆ ಚಿಕ್ಕ ಮಗಳೂರಿನಲ್ಲಿ ಅಖಿಲ ಭಾರತ ಕಲಾವಿದರ ಶಿಬಿರವನ್ನು ಆಯೋಜಿಸಿದ್ದು, ದೇಶದ ಒಂಭತ್ತು ಮಂದಿ ಪ್ರಸಿದ್ಧ ಕಲಾವಿದರು ಮತ್ತು ರಾಜ್ಯದ ಆರು ಮಂದಿ ಕಲಾವಿದರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ರಾಜ್ಯದ 11 ಕಲಾ ಶಾಲೆಗಳಿಂದ ಆಯ್ಕೆ ಮಾಡಲಾದ ತಲಾ ಇಬ್ಬರು ಹಿರಿಯ ವಿದ್ಯಾರ್ಥಿಗಳು ಶಿಬಿರದಲ್ಲಿ ವಿಚಾರ ವಿನಿಮಯ ನಡೆಸಲಿದ್ದಾರೆ ಎಂದು ಮೂರ್ತಿ ಹೇಳಿದರು.
ಮೈಸೂರು, ಗುಲ್ಬರ್ಗಾ ಮತ್ತಿತರ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಲಾ ಶಿಬಿರಗಳನ್ನು ನಡೆಸಲು ಸಂಸ್ಥೆ ಉದ್ದೇಶಿಸಿದೆ. ಚಿಕ್ಕ ಮಗಳೂರಿನ ಶಿಬಿರವನ್ನು ಸಾಹಿತಿ ಪೂರ್ಣ ಚಂದ್ರ ತೇಜಸ್ವಿ ಡಿ. 4 ರಂದು ಉದ್ಘಾಟಿಸುವರು. ದೆಹಲಿಯ ಮನುಪಾರೀಖ್ ಮತ್ತು ಮಾಧವಿ ಪಾರೀಖ್, ಮುಂಬೈನ ಪ್ರಭಾಕರ್ ಕೊಲ್ವೆ ಮತ್ತು ರೇಖಾ ರಾವ್, ಕಲ್ಕತ್ತಾದ ಅಶೋಕ ಭೌಮಿಕ್, ಹೈದರಾ ಬಾದಿನ ಸೂರ್ಯ ಪ್ರಕಾಶ್ , ಬರೋಡದ ಸುರೇಂದ್ರ ನಾಯರ್ ಮತ್ತಿತರ ಪ್ರಸಿದ್ಧ ಕಲಾವಿದರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಒಂದು ವಾರದವರೆಗೆ ನಡೆವ ಶಿಬಿರದ ಕೊನೆಯಲ್ಲಿ ಕಲಾವಿದರ ಕಲಾ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications