ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಜೋರು ಮಳೆಯ ನಂತರದ ಮೌನದಂತೆ ನಿಮ್ಮ ಮನಸ್ಸೀಗ ನಿರಾಳವಾಗಿದ್ದೀತು. ಗ್ರಹಗತಿಗಳೆಲ್ಲಾ ನಿಮ್ಮ ಪರವಾಗೇ ಇವೆ. ಹೀಗಿದ್ದೂ ಎಡವಟ್ಟಾಯಿತೆಂದರೆ ಅದಕ್ಕೆ ನಿಮ್ಮ ದುಡುಕೇ ಕಾರಣ.ವೃಷಭ : : ಅದೇ ಆಫೀಸು. ಅದೇ ಮುಖಗಳು ಅನ್ನುವ ಬೇಜಾರು ಕೊನೆಯಾಗಲಿದೆ. ಅಂದರೆ ನಿಮಗೀಗ ಪ್ರಯಾಣ ಯೋಗ. ಟ್ರಿಪ್ಪು ಗಮ್ಮತ್ತಾಗಿರುವಾಗ ಜೇಬು ಸಣ್ಣಗಾಗುತ್ತಿರುವುದರ ಬಗ್ಗೆ ಹೆಚ್ಚಿನ ಗಮನ ಕೊಡಬೇಡಿ.
ಮಿಥುನ : ನಿಮ್ಮದು ಮದ್ದಾಯನಕನಹಳ್ಳಿ ಬಂಡೆಯಂಥಾ ಮನಸ್ಸು . ನಾಜೂಕು ಎಂದು ನೀವಂದುಕೊಂಡರೂ, ಅದರ ಕಠಿಣತೆ ಗೊತ್ತಾಗುವುದು ಎದುರಿನವರಿಗೆ. ನಾನಿರುವುದೇ ಹಾಗೆ ಅನ್ನುವುದು ಅಷ್ಟೇನೂ ಒಳ್ಳೆಯ ಲಕ್ಷಣ ಅಲ್ಲ.
ಕಟಕ : ಬಿಸಿಯಾಗಿದ್ದಾಗಲೇ ಕಬ್ಬಿಣವನ್ನು ಬಗ್ಗಿಸಬೇಕು. ನಿಮಗಿದು ಗೊತ್ತಿಲ್ಲದ್ದೇನೂ ಅಲ್ಲ . ಆದರೆ, ಸರಿಯಾದ ಸುತ್ತಿಗೆಯನ್ನೇ ಬಳಸಿ. ಶ್ರಮವಾಗಬಾರದು, ಲಾಭವಾಗಬೇಕು. ಹಿಂಜರಿಕೆ ಬಿಟ್ಟು ಒಮ್ಮನದಿಂದ ಪ್ರಯತ್ನಿಸಿದರೆ ಗೆಲುವು ನಿಮ್ಮದೇ.
ಸಿಂಹ : ಹೊಸ ಅವಕಾಶಗಳು ನಿಮ್ಮ ಕಾಲಿಗೇ ಎಡತಾಕುತ್ತಿವೆ. ಒಪ್ಪಿಕೊಳ್ಳುವ ಮುನ್ನ ಈ ಮೊದಲಿನ ಅನುಭವ ನೆನಪಿನಲ್ಲಿರಲಿ. ದುಡುಕಿ ಪಶ್ಚಾತಾಪ ಪಡುವ ಸಂಕಟ ನಿಮ್ಮದಾಗುವುದು ಬೇಡ.
ಕನ್ಯಾ : ಅಬ್ಬಾ ! ಆಗಲೇ ಕೆಂಪಾಗಿದ್ದೀರಿ. ಗೆಳೆಯರು, ಸಹೋದ್ಯೋಗಿಗಳು ಅಸೂಯೆ ಪಡುವಂಥ ಅದೃಷ್ಟ ನಿಮ್ಮದು.
ತುಲಾ : ಹೊಸ ಐಡಿಯಾಗಳು ಈ ಹೊತ್ತು ನಿಮ್ಮದಾಗಲಿವೆ. ನಿಮ್ಮ ಸೃಜನಶೀಲತೆಗೆ ಕಚೇರಿಯಲ್ಲಿ ಮನ್ನಣೆ ದೊರೆಯಲಿದೆ. ವೈಯಕ್ತಿಕ ಬದುಕಿನಲ್ಲೂ ಬಡ್ತಿಯ ಸಂಭವವಿದೆ.
ವೃಶ್ಚಿಕ : ಹುಷಾರಾಗಿರಿ. ಅಪಘಾತಗಳು ಹತ್ತಿರದಲ್ಲೇ ಇವೆ. ಮನಸ್ಸು, ದೇಹ ಎರಡಕ್ಕೂ ಕಡಿವಾಣ ಹಾಕಿ. ಇಂದಲ್ಲದಿದ್ದರೆ ನಾಳೆ ಅನ್ನುವ ಸಮಾಧಾನದ ಮಂತ್ರ ಪಠಿಸದೆ ಗತ್ಯಂತರವಿಲ್ಲ.
ಧನಸ್ಸು :ಕನಸು ಕಾಣಲಿಕ್ಕೆ ಹೇಳಿ ಮಾಡಿಸಿದಂಥಾ ದಿನ. ನಿಮ್ಮ ಸ್ವಭಾವವೂ ಅದೇ ಅಲ್ಲವೇ. ತಮಾಷೆ ನೋಡಿ, ವಾತಾವರಣವೂ ನಿಮ್ಮ ಪರವಾಗಿಯೇ ಇದೆ. ಎದುರು ನೋಡಿರದ ಸೋಜಿಗವೊಂದು ಎದುರಾಗುವ ನಿರೀಕ್ಷೆಯಿದೆ. ಅದನ್ನೂ ಕನಸೆಂದುಕೊಂಡರೆ ಮುಟ್ಟಾಳರಾಗುತ್ತೀರಿ.
ಮಕರ : ನಿಮ್ಮನ್ನು ನೀವು ಏನೆಂದುಕೊಂಡಿದ್ದೀರಿ. ಜಗತ್ತಿನಲ್ಲಿ ನೀವೊಬ್ಬರೆ ಒಳ್ಳೆಯವರೇನೂ ಅಲ್ಲ . ಬಾವಿಯಲ್ಲಿನ ಕಪ್ಪೆಯಂತೆ ಬದುಕುವುದನ್ನು ಬಿಟ್ಟು ಬೆಳಕಿಗೆ ಬನ್ನಿ .
ಕುಂಭ : ಕಠೋರ ವಾಸ್ತವಕ್ಕೇ ಜೋತು ಬೀಳುವ ಮನೋಭಾವ ನಿಮ್ಮದಾಗಿರುವುದರಿಂದ ಈ ದಿನ ನಿಮ್ಮದಲ್ಲ ಎಂದರೆ ನೀವೇನೂ ಬೇಜಾರು ಮಾಡಿಕೊಳ್ಳುವುದಿಲ್ಲ . ನಿಮ್ಮ ಕೆಲಸವೇ ನಿಮ್ಮನ್ನು ಕಾಯುವುದು.
ಮೀನ : ಇದೀಗ ತಾನೆ ಹುಟ್ಟಿದಂತೆ ಕಾಣುತ್ತಿದ್ದೀರಿ. ಈ ನಡುವೆ ಹುಚ್ಚುಚ್ಚಾಟ ಬೇಡಿರಪ್ಪ . ದೊಡ್ಡವರ ಮಾತಿಗೆ ಕಿವಿಕೊಡಿ. ನಿಮ್ಮ ಒಳ್ಳೆಯದಕ್ಕೇ ಹೇಳುತ್ತಿದ್ದಾರೆ ಅನ್ನುವುದನ್ನು ನೀವು ಬೇಗ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications