Get Updates
Get notified of breaking news, exclusive insights, and must-see stories!

ಕಳಂಕಿತ ಆಟಗಾರರ ಬಗ್ಗೆ ಸಿಬಿಐ ನಿರ್ಧಾರ : ನ.29 ರಂದು ಪ್ರಕಟಣೆ

ಮುಂಬಯಿ : ಮ್ಯಾಚ್‌ ಫಿಕ್ಸಿಂಗ್‌ ಹಗರಣದಲ್ಲಿ ಸಿಬಿಐ ಹೆಸರಿಸಿರುವ ಆಟಗಾರರ ಬಗ್ಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ನಿರ್ಧಾರವನ್ನು ನ.29 ರಂದು ಪ್ರಕಟಿಸಲಿದೆ.

ತನಿಖೆಗಾಗಿ ಬಿಸಿಸಿಐ ನೇಮಿಸಿರುವ ವಿಶೇಷ ಆಯುಕ್ತ ಮಾಧವನ್‌ ಅವರು, ನಂ.25 ರಂದು ತಮ್ಮ ತನಿಖಾ ವರದಿಯನ್ನು ಬಿಸಿಸಿಐಗೆ ಸಲ್ಲಿಸಲಿದ್ದಾರೆ. ಅಜರ್‌, ಮೊಂಗಿಯಾ, ಮನೋಜ್‌ ಪ್ರಭಾಕರ್‌, ಜಡೇಜಾ ಹಾಗೂ ಶರ್ಮ ಅವರ ತನಿಖೆ ನಡೆಸಿರುವ ಮಾಧವನ್‌ ಅವರು, ತಮ್ಮ ತನಿಖೆಯ ಫಲಶ್ರುತಿಯನ್ನು ಸಿಬಿಐ ವರದಿಯಾಂದಿಗೆ ತುಲನೆ ಮಾಡಿದ ನಂತರ ತಮ್ಮ ವರದಿಯನ್ನು ಅಂತಿಮಗೊಳಿಸುವರು. ಅವರ ವರದಿಯನ್ನು ಮೊದಲಿಗೆ ಬಿಸಿಸಿಐನ ಶಿಸ್ತು ಸಮಿತಿಯು ಪರಿಶೀಲಿಸಲಿದೆ. ತನ್ನ ಪರಿಶೀಲನೆಯ ನಂತರ ಕೆಲವು ಶಿಫಾರಸ್ಸುಗಳನ್ನು ಶಿಸ್ತು ಸಮಿತಿ ಕಲ್ಕತ್ತಾದಲ್ಲಿ ನಡೆಯುವ ಬಿಸಿಸಿಐನ ಸಭೆಯ ಮುಂದೆ ಮಂಡಿಸುವುದು.

ನ.29 ರಂದು ಕಲ್ಕತ್ತದಲ್ಲಿ ಬಿಸಿಸಿಐನ ವಿಶೇಷ ಮಹಾಸಭೆ ನಡೆಯಲಿದ್ದು , ಅಲ್ಲಿ ಈ ಬಗ್ಗೆ ವಿಶೇಷ ಚರ್ಚೆ ನಡೆಸಲಾಗುವುದು ಎಂದು ಮಂಡಳಿಯ ಮೂಲಗಳು ತಿಳಿಸಿವೆ. 5 ಟೆಸ್ಟ್‌ ಹಾಗೂ 5 ಏಕ ದಿನ ಪಂದ್ಯಗಳನ್ನಾಡಲು ಫೆಬ್ರವರಿಯಲ್ಲಿ ಭಾರತಕ್ಕೆ ಆಗಮಿಸುತ್ತಿರುವ ಆಸ್ಟ್ರೕಲಿಯಾ ತಂಡದ ಪ್ರವಾಸದ ಬಗೆಗೂ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+