ಸಾಂಗ್ಲಿಯಾನ : ಕಾಡುಗಳ್ಳನ ವಿರುದ್ಧ ಕೃಷ್ಣ ಪ್ರಯೋಗಿಸಿರುವ ಬ್ರಹ್ಮಾಸ್ತ್ರ !
ಬೆಂಗಳೂರು : ಮುಖ್ಯಮಂತ್ರಿ ಕೃಷ್ಣ ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರವನ್ನೇ ಕೈಗೊಂಡಿದ್ದಾರೆ. ವೀರಪ್ಪನ್ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಎಸ್‌ಟಿಎಫ್ ಮುಖ್ಯಸ್ಥರಾಗಿ ಸಾಂಗ್ಲಿಯಾನ ನೇಮಕವಾಗುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ . ಸರ್ಕಾರದ ಆಯ್ಕೆ ಎಷ್ಟರ ಮಟ್ಟಿಗೆ ಅಚ್ಚರಿಯೋ, ಅಷ್ಟೇ ಮಟ್ಟಿಗೆ ಸ್ವಾಗತಾರ್ಹವೂ ಹೌದು.
ಎಸ್‌ಟಿಎಫ್ ಕಾರ್ಯಾಚರಣೆಗೆ ರಾಜ್ಯ ಸರ್ಕಾರ ಮುಂದಾದಾಗ, ಹಿಂದಿನ ಕಾರ್ಯಾಚರಣೆಗಳ ಫಲಶ್ರುತಿ ಬಲ್ಲವರಿಗೆಲ್ಲಾ ನಿರಾಶೆಯಾಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ . ಆದರೆ, ಮುಖ್ಯಮಂತ್ರಿ ಕೃಷ್ಣ ಸಾಂಗ್ಲಿಯಾನಾರನ್ನು ಎಸ್‌ಟಿಎಫ್‌ನ ಮುಖ್ಯಸ್ಥರನ್ನಾಗಿ ನೇಮಿಸುವ ಮೂಲಕ, ಕಾರ್ಯಾಚರಣೆಯ ಬಗ್ಗೆ ಮತ್ತೆ ಭರವಸೆ ಮೂಡಿಸಿದ್ದಾರೆ.
ಎಚ್.ಟಿ. ಸಾಂಗ್ಲಿಯಾನರಿಗೀಗ 57 ವರ್ಷ. ಅವರ ತವರು ಮಿಜೋರಾಂ. 1967 ರಲ್ಲಿ ಐಪಿಎಸ್ ಸೇವೆಗೆ ಸೇರಿದ ಸಾಂಗ್ಲಿಯಾನ ತಮ್ಮ ಸೇವೆಯ ಹೆಚ್ಚಿನ ಅವಧಿಯನ್ನು ಕಳೆದಿರುವುದು ಕರ್ನಾಟಕದಲ್ಲಿ . ಆದ್ದರಿಂದಲೇ ಅವರನ್ನು ಕನ್ನಡಿಗರೆಂದೇ ಬಹಳಷ್ಟು ಜನ ತಿಳಿದಿದ್ದಾರೆ. ಶಿವಮೊಗ್ಗ, ಗುಲ್ಬರ್ಗಾ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಎಸ್ಪಿಯಾಗಿ ಜನಪ್ರಿಯ ಸೇವೆ ಸಲ್ಲಿಸಿದ್ದಾರೆ. ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರು ಸ್ಪರ್ಧಿಸಿದ್ದ ಸಂದರ್ಭದಲ್ಲಂತೂ ತಮ್ಮ ದಿಟ್ಟ ಕ್ರಮಗಳಿಂದ ಸಾಂಗ್ಲಿಯಾನ ಮನೆ ಮಾತಾಗಿದ್ದರು. ಸಮಾಜ ಘಾತುಕ ಶಕ್ತಿಗಳನ್ನು ಬಗ್ಗು ಬಡಿದ ಎಪ್ಪತ್ತರ ದಶಕದ ಅವರ ಸಾಧನೆಗಳು ದಂತಕತೆಗಳಂತೆ ಜನಮಾನಸದಲ್ಲಿ ಪ್ರಚಲಿತದಲ್ಲಿವೆ.
ಸ್ಫೂರ್ತಿ ತುಂಬಲು ಸಾಂಗ್ಲಿಯಾನ ಹೆಸರಷ್ಟೇ ಸಾಕು !
ಸಾಂಗ್ಲಿಯಾನರ ಸಾಧನೆಗಳ ಸ್ಫೂರ್ತಿಯನ್ನು ವಸ್ತುವಾಗುಳ್ಳ, ಅವರ ಹೆಸರನ್ನೇ ಬಂಡವಾಳವಾಗುಳ್ಳ ಎರಡು ಕನ್ನಡ ಚಿತ್ರಗಳೂ ತೆರೆಕಂಡು ಯಶಸ್ವಿಯಾಗಿವೆ. ದಿವಂಗತ ಶಂಕರ್‌ನಾಗ್ ಸಾಂಗ್ಲಿಯಾನ ಪಾತ್ರದಲ್ಲಿ ನಟಿಸಿದ್ದರು.
ಪೊಲೀಸ್ ಉಪ ಆಯುಕ್ತರಾಗಿ ಬೆಂಗಳೂರು ನಗರ ಸಂಚಾರದಲ್ಲಿ ಅವರು ಗಣನೀಯ ಬದಲಾವಣೆ ತಂದಿದ್ದರು. ಮೊನ್ನೆ ಮೊನ್ನೆ ತಾನೇ ಕಾರಾಗೃಹಗಳ ಜವಾಬ್ದಾರಿಯನ್ನು ಹೊತ್ತು , ಜೈಲುಗಳಿಗೆ ಸುಧಾರಣೆಯ ರೂಪು ಕೊಡಲು ಶ್ರಮಿಸಿದ್ದರು. ಆನಂತರ ಕರ್ನಾಟಕ ಮೀಸಲು ಪೊಲೀಸ್ ಪಡೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಸಾಂಗ್ಲಿಯಾನ ಈಗ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ಕಾಡಿಗೆ ನಡೆದಿದ್ದಾರೆ.
ಗುಡ್ಡಗಾಡು ಪ್ರದೇಶದಿಂದ ಬಂದಿರುವ ಸಾಂಗ್ಲಿಯಾನ ಅವರಿಂದ ವೀರಪ್ಪನ್ ಪ್ರಕರಣಕ್ಕೆ ಕೊನೆಗಾಣಿಸಲು ಸಾಧ್ಯ ಎಂದು ರಾಜ್ಯದ ಜನತೆ ನಂಬಿದ್ದಾರೆ. ವಾಸ್ತವವಾಗಿ ಬಹಳ ವರ್ಷಗಳಿಂದಲೂ, ಎಸ್‌ಟಿಎಫ್ ಮುಖ್ಯಸ್ಥರನ್ನಾಗಿ ಅವರನ್ನು ನೇಮಿಸುವಂತೆ ಜನತೆ ಒತ್ತಾಯಿಸುತ್ತಿತ್ತು . ಅವರ ಒತ್ತಾಯವನ್ನು ಕೃಷ್ಣ ಈಡೇರಿಸಿದ್ದಾರೆ.
ಎರಡು ವರ್ಷ ಒಂಭತ್ತು ತಿಂಗಳು- ಇದು ಉಳಿದಿರುವ ಸಾಂಗ್ಲಿಯಾನ ಅವರ ಸೇವಾವಧಿ. ವಿಶ್ರಾಂತ ಜೀವನಕ್ಕೆ ಹತ್ತಿರವಾಗುವ ದಿನಗಳಲ್ಲಿ ಅವರು ದೊಡ್ಡ ಹೊರೆ ಹೊರಲು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದಾರೆ. ಈವರೆಗೆ ಎಸ್‌ಟಿಎಫ್ ಮುಖ್ಯಸ್ಥರಾಗಿದ್ದ ಹರ್ಷವರ್ಧನ ರಾಜು ಅವರ ಸ್ಥಾನವನ್ನು ಸಾಂಗ್ಲಿಯಾನ ತುಂಬುತ್ತಿದ್ದಾರೆ. ಯಶಸ್ಸು ಅವರದಾಗಲಿ.
(ಯುಎನ್‌ಐ)
ವಾರ್ತಾ ಸಂಚಯ
ಮುಖಪುಟ / ವೀರಪ್ಪನ್ ಶಿಕಾರಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications