Get Updates
Get notified of breaking news, exclusive insights, and must-see stories!

ನಾರಾಯಣ ಮೂರ್ತಿ, ಪ್ರೇಮ್‌ಜಿ ಅವರಿಗೆ ವಿಶೇಷಪೊಲೀಸ್‌ ರಕ್ಷಣೆ

ಇಮ್ರಾನ್‌ ಖುರೇಷಿ

ಬೆಂಗಳೂರು : ಭಾರತದ ಐಟಿ ದಿಗ್ಗಜರಾದ ಬೆಂಗಳೂರು ನಿವಾಸಿಗಳಾಗಿರುವ ವಿಪ್ರೋದ ಅಜೀಮ್‌ ಪ್ರೇಮ್‌ಜೀ ಮತ್ತು ಇನ್ಫೋಸಿಸ್‌ನ ನಾರಾಯಣ ಮೂರ್ತಿ ಅವರುಗಳಿಗೆ Z ಕೆಟಗರಿ ಪೊಲೀಸ್‌ ರಕ್ಷಣೆಯನ್ನು ಒದಗಿಸಲಾಗಿದೆ.

ರಾಜ್‌ ಕುಮಾರ್‌ನ್ನು ವೀರಪ್ಪನ್‌ ಅಪಹರಿಸಿ, ಬಿಡುಗಡೆ ಮಾಡಿಯಾಯಿತು. ಮತ್ತೊಮ್ಮೆ ಇಂತಹ ಯಾವುದೇ ವೀರಪ್ಪನ್‌ಗಳ ಅಪಹರಣ ಬಲೆಗೆ ರಾಜ್ಯದ ಗಣ್ಯ ವ್ಯಕ್ತಿಗಳು ಬೀಳಬಾರದು ಎಂಬ ಮುಂದಾಲೋಚನೆಯ ಮಿಂಚು ಹೊಳೆದು ರಾಜ್ಯ ಸರಕಾರ ಈ ಆದೇಶ ಹೊರಡಿಸಿದೆ. ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕರ ನೇತೃತ್ವದ ಸಮಿತಿಯ ಸಲಹೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿರುವ ಕೆಲವು ಗಣ್ಯ ವ್ಯಕ್ತಿಗಳಿಗೆ ರಕ್ಷಣೆ ಒದಗಿಸುವ ಅಗತ್ಯ ಅಂತಹ ಅಸಾಮಾನ್ಯ ವಿಷಯ ವೇನಲ್ಲ ಎಂದು ರಕ್ಷಣಾ ವಿಭಾಗದ ಹಿರಿಯ ಅಧಿಕಾರಿಗಳು ಐಎಎನ್‌ಎಸ್‌ ಜೊತೆ ಮಾತನಾಡುತ್ತಾ ಹೇಳುತ್ತಾರೆ.

ರಾಜ್‌ ಕುಮಾರ್‌ ಅಪಹರಣ ವಾದ ಕೆಲವು ದಿನಗಳಲ್ಲಿಯೇ ಬೆದರಿಕೆ ಕರೆಗಳ ಕುರಿತು ಅಧ್ಯಯನ ನಡೆದಿದ್ದು, ಪ್ರೇಮ್‌ಜಿ ಮತ್ತು ನಾರಾಯಣ ಮೂರ್ತಿ ಅವರಿಗೆ ಬೆದರಿಕೆ ಕರೆಗಳೇನಾದರೂ ಬಂದಿತ್ತೇ ಎಂಬ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಿಲ್ಲ.

ತಮಗೆ ಸರಕಾರ ರಕ್ಷಣೆ ಒದಗಿಸಿರುವ ಕುರಿತು ಯಾವುದೇ ವಿವರಣೆ ನೀಡಲು ಪ್ರೇಮ್‌ಜಿ ಮತ್ತು ಮೂರ್ತಿ ನಿರಾಕರಿಸಿದ್ದಾರೆ. ಸರಕಾರದ ಈ ಕ್ರಮವು ನಾಸ್ದಾಕ್‌, ಭಾರತೀಯ ಶೇರು ಮಾರುಕಟ್ಟೆ ಮತ್ತು ನ್ಯೂಯಾರ್ಕ್‌ ಶೇರು ವಿನಿಮಯ ಕೇಂದ್ರದ ವಲಯಗಳಲ್ಲಿ ಭಾರೀ ಸುದ್ದಿಯನ್ನೇ ಮಾಡಿದೆ. ಅದೇನೇ ಇರಲಿ, ಸಿಲಿಕಾನ್‌ ವ್ಯಾಲಿಯ ಈ ಇಬ್ಬರು ದೊರೆಗಳು ಎಂದಿನಂತೆ ಆರಾಮವಾಗಿ ಇದ್ದಾರೆ. ಮಧ್ಯಮ ವರ್ಗದ ಜನರಂತೆಯೇ ವಾಣಿಜ್ಯ ನಗರಗಳ ವ್ಯಸ್ತ ರಸ್ತೆಗಳನ್ನು ಅವರು ದಾಟುತ್ತಾರೆ ’ ಎಂದು ಸೆಕ್ಯುರಿಟಿ ಅಧಿಕಾರಿಗಳು ಹೇಳುತ್ತಾರೆ.

ಐಟಿ ದಿಗ್ಗಜರ ಅಪಹರಣವಾಗಿದ್ದರೆ !

ಪ್ರೇಮ್‌ಜೀ ಭಾರತದ ಶ್ರೀಮಂತ ವ್ಯಕ್ತಿ ಎಂದು ಗುರುತಿಸಲ್ಪಟ್ಟರೂ ಕೂಡ ಸಾಮಾನ್ಯ ಮನುಷ್ಯರಂತೆಯೇ ಜೀವನ ನಡೆಸುತ್ತಿರುವ ವ್ಯಕ್ತಿ . ಯಾಕೆಂದರೆ ಸಿರಿವಂತಿಕೆ ಒಂದು ರಾಷ್ಟ್ರೀಯ ಮೌಲ್ಯ, ನಾನು ಕೆಲವೇ ಶೇರುಗಳನ್ನು ಮಾರಿದರೂ ನನ್ನ ಸಿರಿವಂತಿಕೆ ಎಲ್ಲ ಈ ಕ್ಷಣದಲ್ಲಿಯೇ ಹೋಗಿಬಿಡುತ್ತದೆ ಎಂದು ಪ್ರೇಮ್‌ಜಿ ಕೆಲವು ತಿಂಗಳ ಹಿಂದೆ ಹೇಳಿದ್ದರು. ನಮ್ಮ ನಿಮ್ಮ ಮತ್ತು ಸಮಾಜದ ದೃಷ್ಟಿಯಲ್ಲಿ ಪ್ರೇಮ್‌ಜಿ ಮತ್ತು ನಾರಾಯಣ ಮೂರ್ತಿ ನ್ಯಾಷನಲ್‌ ವ್ಯಾಲ್ಯೂ ಉಳ್ಳವರು. ಆದರೆ, ಅಪಹರಣಕಾರರಿಗೆ ಅದೆಲ್ಲಾ ಅರ್ಥವಾಗುವುದಿಲ್ಲ , ಅವರು ಅಪಹರಿಸುತ್ತಾರೆ, ನಂತರ ಬೇಡಿಕೆಗಳ ಕ್ಯಾಸೆಟ್‌ ಕಳುಹಿಸುತ್ತಾರೆ ಅಷ್ಟೇ. ರಾಜ್‌ಕುಮಾರ್‌ ಅಪಹರಣವಾದಂತೆ ಈ ಐಟಿ ದಿಗ್ಗಜರೇನಾದರೂ ಅಪಹರಣಗೊಂಡಿದ್ದಲ್ಲಿ ಶೇರುಮಾರುಕಟ್ಟೆಯ ಗತಿಯೇನಾಗುತ್ತಿತ್ತು ? ಯೋಚಿಸಿ, ಪೊಲೀಸ್‌ ಅಧಿಕಾರಿಯಾಬ್ಬರು ಹಾಗಾಗಲಿಲ್ಲವಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ.

ದೇಶದ ಪ್ರತಿಷ್ಠಿತ ವ್ಯಕ್ತಿಗಳು ಬೆಂಗಳೂರಿನಲ್ಲಿದ್ದಾರೆ ಎನ್ನುವ ಹೆಮ್ಮೆಗೆ ಮಸಿಯಾಗದ ಹಾಗೆ ಸರಕಾರ ಕೈಗೊಂಡಿರುವ ಈ ಕ್ರಮ , ರಾಜ್‌ ಅಪಹರಣದಿಂದ ಕಲಿತ ಪಾಠವಾಗಿರಬಹುದು. ಅಥವಾ ಸುಪ್ರೀಂ ಕೋರ್ಟ್‌ನ ಛೀಮಾರಿಯ ಬಿಸಿಯ ಫಲವಾಗಿರಲೂ ಬಹುದು. ಅಪಹರಣ, ಬೆದರಿಕೆಗಳಂತಹ ಸಾಮಾಜಿಕ ಅನಿಷ್ಟಗಳ ತಾಯಿ ಬೇರನ್ನು ಕಿತ್ತೆಸೆಯುವ ಯಾವುದೇ ಕ್ರಮವಾಗಲಿ , ಸ್ವಾಗತಾರ್ಹ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+