Get Updates
Get notified of breaking news, exclusive insights, and must-see stories!

ಊರಿನ ವೀರಪ್ಪನ್‌ಗಳನ್ನು ವಿಚಾರಿಸಿಕೊಳ್ಳಿ

Nedumaranಚೆನ್ನೈ : ವರನಟ ರಾಜ್‌ಕುಮಾರ್‌ ಅವರನ್ನು ವೀರಪ್ಪನ್‌ ಒತ್ತೆಯಿಂದ ಬಿಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಮಿಳು ದೇಶೀಯ ಇಯಕ್ಕಂ ನಾಯಕ ಪಿ.ನೆಡುಮಾರನ್‌, ವೀರಪ್ಪನ್‌ ವಿರುದ್ಧ ಎಸ್‌ಟಿಎಫ್‌ ಕಾರ್ಯಾಚರಣೆ ನಡೆಯಕೂಡದು ಎಂದು ಕಿಕ್ಕಿರಿದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ವಿಶೇಷ ಪಡೆ ಕಾರ್ಯಾಚರಣೆ ನಡೆಸಿದಲ್ಲಿ ಸೌಹಾರ್ದಯುತವಾಗಿರುವ ತಮಿಳರ ಹಾಗೂ ಕನ್ನಡಿಗರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜೊತೆಗೆ ಎಸ್‌ಟಿಎಫ್‌ ಸಂತ್ರಸ್ತರ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಸದಾಶಿವ ಅವರ ಆಯೋಗದ ವರದಿ ಸಲ್ಲಿಕೆಯೂ ವಿಳಂಬವಾಗಲಿದೆ. ಎಸ್‌ಟಿಎಫ್‌ ಎಲ್ಲಿಯವರೆಗೆ ಕಾರ್ಯಾಚರಣೆ ನಡೆಸುವುದಿಲ್ಲವೋ ಅಲ್ಲಿಯವರೆಗೆ ವೀರಪ್ಪನ್‌ ಕೂಡ ಯಾರನ್ನೂ ಅಪಹರಿಸುವುದಿಲ್ಲ ಎಂದು ನೆಡುಮಾರನ್‌ ತಿಳಿಸಿದರು.

ಸದಾಶಿವ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದ ತಿರುಳಿನ ಬಗೆಗೆ ಮಾತನಾಡುತ್ತಾ, ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆ ವೇಳೆ ವಿಶೇಷ ಕಾರ್ಯಪಡೆ ಸುಮಾರು 90 ಜನರನ್ನು ಕೊಂದಿದೆ. 60 ಮಹಿಳೆಯರು ಲೈಂಗಿಕ ಶೋಷಣೆಗೆ ತುತ್ತಾಗಿದ್ದಾರೆ. 300ಕ್ಕೂ ಹೆಚ್ಚು ಮಂದಿ ಪೊಲೀಸರ ಮೂರನೇ ದರ್ಜೆಯ ಕಿರುಕುಳಕ್ಕೆ ತುತ್ತಾಗಿದ್ದಾರೆ. ಕೆಲವರು ಕಾಲು ಮುರಿದುಕೊಂಡು ಅಂಗವಿಕಲರಾಗಿದ್ದಾರೆ. ಎಸ್‌ಟಿಎಫ್‌ ಪೊಲೀಸ್‌ ಅಧಿಕಾರಿಗಳ ಎಗ್ಗುಸಿಗ್ಗಿಲ್ಲದ ವರ್ತನೆಯಿಂದ ಅಸಂಖ್ಯ ಅಮಾಯಕರು ಬಲಿಯಾಗಿದ್ದಾರೆ. ಮೊದಲು ಇಂಥ ಹೇಯಕೃತ್ಯಗಳನ್ನು ಎಸಗಿರುವ ಪೊಲೀಸ್‌ ಅಧಿಕಾರಿಗಳಿಗೆ ತಕ್ಕ ಶಾಸ್ತಿಯಾಗಬೇಕು. ಶುಕ್ರವಾರ ಮುಂಜಾನೆ ಮುಖ್ಯಮಂತ್ರಿ ಕರುಣಾನಿಧಿ ಅವರೊಂದಿಗೂ ಈ ವಿಷಯದ ಬಗೆಗೆ ಚರ್ಚಿಸಿದ್ದೇನೆ ಎಂದರು.

ಕಾಡುಗಳ್ಳನಿಗೆ ರಾಜಕಾರಣಿ- ಅಧಿಕಾರಿಗಳ ಬೆಂಬಲ : ವೀರಪ್ಪನ್‌ ಆನೆಗಳನ್ನು ಕೊಂದಿದ್ದಾನೆ, ಗಂಧ ಕದ್ದಿದ್ದಾನೆ, ನಿಜ. ಆದರೆ ಭ್ರಷ್ಟ ರಾಜಕಾರಣಿಗಳ ಹಾಗೂ ಅಧಿಕಾರಿಗಳ ನೆರವಿಲ್ಲದೆ ಇದು ಸಾಧ್ಯವೇ? ಈ ಹೊತ್ತು ಎಲ್ಲರೂ ವೀರಪ್ಪ ನ್‌ನನ್ನು ಶಿಕ್ಷಿಸುವ ಬಗೆಗೇ ಮಾತನಾಡುತ್ತಿದ್ದಾರೆಯೇ ವಿನಃ ಭ್ರಷ್ಟರನ್ನು ಮಟ್ಟ ಹಾಕುವ ಕುರಿತು ಸೊಲ್ಲೆತ್ತುತ್ತಿಲ್ಲ. ವೀರಪ್ಪನ್‌ ಸರಳಜೀವಿ, ಸತ್ಯವಂತ. ಎಸ್‌ಟಿಎಫ್‌ ಕಾರ್ಯಾಚರಣೆಯಲ್ಲಿ ಪೊಲೀಸರು ಅವನ ತಂಗಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ತಮ್ಮನನ್ನು ಕೊಂದು ವಿಶ್ವಾಸಘಾತುಕರಾಗಿದ್ದಾರೆ. ಆದರೂ ವೀರಪ್ಪನ್‌ ಇತರೆ ಸಂತ್ರಸ್ತರ ಪರಿಹಾರದ ಬಗೆಗೇ ಯೋಚಿಸುತ್ತಾನೆ. ವೀರಪ್ಪನ್‌ನಂಥ ಸಮಸ್ಯೆ ನಮ್ಮ ಸಮಾಜಕ್ಕೆ ಅನಿವಾರ್ಯ. ಇದೊಂದು ಸಮಾಜಿಕ- ಆರ್ಥಿಕ ಸಮಸ್ಯೆ. ರಾಜ್‌ಕುಮಾರ್‌ ಅವರನ್ನು ವೀರಪ್ಪನ್‌ ಬಿಡಲು ನನ್ನ ಮತ್ತು ಆತನ ನಡುವಿನ ಪರಸ್ಪರ ನಂಬಿಕೆಗಳೇ ಕಾರಣ ಎಂದು ನೆಡುಮಾರನ್‌ ಭಾವುಕರಾಗಿ ನುಡಿದರು.

ಹಣ- ಶಸ್ತ್ರಾ-ಸ್ತ್ರ ಏನ-ನ್ನೂ ಕೊಟ್ಟಿ-ಲ್ಲ : ನನ-ಗೆ ತಿಳಿ-ದಿ-ರು-ವ ಮಟ್ಟಿ-ಗೆ ವೀರ-ಪ್ಪ-ನ್‌-ಗೆ ಹ-ಣ-ವ-ನ್ನಾ-ಗ-ಲೀ, ಶಸ್ತ್ರಾ-ಸ್ತ್ರ-ಗ-ಳ-ನ್ನಾ-ಗ-ಲೀ ಕೊಟ್ಟಿ-ಲ್ಲ. ಈಗಾ-ಗ-ಲೇ ಹೇಳಿ-ದಂ-ತೆ ಪರ-ಸ್ಪ-ರ ನಂಬಿ-ಕೆ-ಯೇ ರಾಜ್‌ ಬಿಡು-ಗ-ಡೆ-ಗೆ ಕಾರ-ಣ. ಈ -ಬಿ-ಕ್ಕ-ಟ್ಟಿ-ನ ಪರಿ-ಹಾ-ರ- ಮಾನ-ವ ಹಕ್ಕು-ಗ-ಳ ಆಯೋ-ಗ-ಕ್ಕೆ ಸಂದ ಜಯ ಎನ್ನ-ಬ-ಹು-ದು. ಕೆಲ-ವ-ರು ಈ ಪ್ರಕ-ರ-ಣ-ಕ್ಕೆ ರಾಜ-ಕೀ-ಯ ರೂಪ ಕೊಡ-ಲು ಯತ್ನಿ-ಸಿ-ದ-ರಾ-ದ-ರೂ ನಾನು ಅದ-ನ್ನು ಲೆಕ್ಕಿ-ಸ-ದೆ ಮಾನ-ವೀ-ಯ-ತೆ ದೃಷ್ಟಿ-ಯಿಂ-ದ-ಷ್ಟೆ ಕಾಡಿ-ಗೆ ಹೋದೆ ಎಂದು ನೆಡು-ಮಾ-ರ-ನ್‌ ಹೇಳಿ-ದ-ರು.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ರಾಜ್‌ ಬಿಡುಗಡೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+