ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

500 ರು. ನೋಟು : ಹಳೆಯದನ್ನು ಕೊಟ್ಟು ಹೊಸದನ್ನು ಪಡೆಯಿರಿ

By Staff
|
Google Oneindia Kannada News

ನವ ದೆಹಲಿ : ಹೊಸ ನಮೂನೆಯ 500 ರುಪಾಯಿ ನೋಟುಗಳನ್ನು ಭಾರತೀಯ ರಿಜರ್ವ್‌ ಬ್ಯಾಂಕ್‌(ಆರ್‌ಬಿಐ), ನವಂಬರ್‌ 18 ರಿಂದ ಸಾರ್ವಜನಿಕರ ಬಳಕೆಗೆ ಬಿಡುಗಡೆ ಮಾಡುತ್ತಿದ್ದು, ಆರ್‌ಬಿಐನ ಎಲ್ಲಾ ಶಾಖೆಗಳಲ್ಲಿ ಹೊಸ ನೋಟುಗಳು ಲಭ್ಯವಿರುತ್ತವೆ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ.

1987 ರಲ್ಲಿ ಬಿಡುಗಡೆಯಾದ 500 ರು. ನೋಟುಗಳನ್ನು ಆರ್‌ಬಿಐ ಶಾಖೆಗಳಲ್ಲಿ ಹೊಸ ನೋಟುಗಳಿಗೆ ಬದಲಿಸಿಕೊಳ್ಳಬಹುದು. ಹಳದಿ, ಕಂದು ಹಾಗೂ ಉಜ್ವಲ ಧೂಮ ವರ್ಣಗಳನ್ನು ಹೊಸ ನೋಟು ಹೊಂದಿರುತ್ತದೆ. ಈ ಬಣ್ಣಗಳಿಂದಾಗಿ 100 ರು. ನೋಟುಗಳಿಂದ 500 ರು. ನೋಟುಗಳನ್ನು ಸುಲಭವಾಗಿ ಪ್ರತ್ಯೇಕಿಸಬಹುದು. ನೋಟಿನ ಮುಂಭಾಗದಲ್ಲಿರುವ ರುಪಾಯಿ ಮೌಲ್ಯವನ್ನು ಸೂಚಿಸುವ 500 ಸಂಖ್ಯೆಯನ್ನು ಬಣ್ಣ ಬದಲಿಸುವ ಶಾಯಿಯಲ್ಲಿ ಮುದ್ರಿಸಲಾಗಿದೆ. ನೋಟನ್ನು ನೇರ ಹಿಡಿದಾಗ ಹಸಿರಾಗಿ ಕಾಣುವ ಸಂಖ್ಯೆ, ಕೋನ ತಿರುಗಿಸಿ ನೋಡಿದರೆ ನೀಲಿ ಬಣ್ಣದಲ್ಲಿ ಕಾಣುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಹಳೆಯ ಹಸುರು ನೋಟುಗಳಲ್ಲಿ ಬೆಳಕಿಗೆ ಹಿಡಿದಾಗ (ವಾಟರ್‌ ಮಾರ್ಕ್‌ ವಿಂಡೋದಲ್ಲಿ ) ಕಾಣುವ ಅಶೋಕ ಸ್ಥಂಭದ ಬದಲಿಗೆ ಹೊಸ ಹಳದಿ ನೋಟಿನಲ್ಲಿ ಮಹಾತ್ಮ ಗಾಂಧಿ ಅವರ ಚಿತ್ರವಿರುತ್ತದೆ. ಅಂತೆಯೇ ನೋಟಿನ ಮುಂಭಾಗದ ಬಲಭಾಗದಲ್ಲಿರುವ ಗಾಂಧಿ ಚಿತ್ರದ ಕೆಳಗೆ ಹಳೆಯ ನೋಟಿನಲ್ಲಿ ಎಂ.ಕೆ. ಗಾಂಧಿ ಎಂದು ಬರೆದಿದ್ದರೆ, ಹೊಸ ನೋಟಿನಲ್ಲಿ ಮಹಾತ್ಮ ಗಾಂಧಿ ಎಂದು ಬರೆದಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X