Get Updates
Get notified of breaking news, exclusive insights, and must-see stories!

ರಣಜಿ: ಕೆಚ್ಚಿನ ಆಟವಾಡಿದ ಕರ್ನಾಟಕಕ್ಕೆ ಆಂಧ್ರ ವಿರುದ್ಧ ನಿಚ್ಚಳ ಗೆಲುವು

ಬೆಳಗಾವಿ : ಸೋತರೆ ನಾಕೌಟ್‌ ಹಾದಿ ದೂರವಾಗುತ್ತದೆ ಅನ್ನುವುದನ್ನು ಅರಿತಂತೆ ಕೆಚ್ಚಿನಿಂದ ಆಡಿದ ಕರ್ನಾಟಕ ತಂಡ, ಆಂಧ್ರದ ವಿರುದ್ಧ 5 ವಿಕೆಟ್‌ಗಳ ನಿಚ್ಚಳ ಗೆಲುವು ಸಾಧಿಸಿ ಪಣಕ್ಕಿದ್ದ ಎಲ್ಲಾ 8 ಪಾಯಿಂಟುಗಳನ್ನು ಗಳಿಸಿದೆ. ಇದರೊಂದಿಗೆ ರಾಜ್ಯ ತಂಡ ಈವರೆಗಿನ 3 ಪಂದ್ಯಗಳಿಂದ 16 ಪಾಯಿಂಟು ಸಂಪಾದಿಸಿದೆ.

ಎರಡನೆ ದಿನದ ಕೊನೆಗೆ 8 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿದ್ದ ಆಂಧ್ರ ತಂಡ, ಶುಕ್ರವಾರದ ಆಟದಲ್ಲಿ ಗಳಿಸಿದ್ದು 17 ರನ್‌ ಮಾತ್ರ. ಮೊದಲ ಇನಿಂಗ್ಸ್‌ ಮುನ್ನಡೆಯೂ ಸೇರಿದಂತೆ ಎದುರಾಳಿಗಳ ತಂಡ ಒಡ್ಡಿದ 263 ರನ್‌ಗಳ ಗುರಿಯನ್ನು ಬೆನ್ನತ್ತಿದ ಕರ್ನಾಟಕ 265 ರನ್‌ಗಳನ್ನು ಗಳಿಸಿ ಗೆಲುವಿನ ನಗೆಯಾಡಿತು. ರಾಜ್ಯದ ಗೆಲುವಿನಲ್ಲಿ ತಂಡದ ನಾಯಕ ಜೆ. ಅರುಣ್‌ಕುಮಾರ್‌ ಅವರ 82 ರನ್‌ಗಳು ಪ್ರಮುಖ ಪಾತ್ರ ವಹಿಸಿದವು. ಅರುಣ್‌ ಅವರ ಸ್ಕೋರ್‌ನಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು.

ಸುಜಿತ್‌ ಸೋಮಸುಂದರ್‌ (36) ವರ ಜೊತೆಯಲ್ಲಿ 78 ರನ್‌ಗಳ ಹಾಗೂ ತಿಲಕ್‌ ನಾಯ್ಡು (ಔಟಾಗದೆ 71) ಅವರೊಂದಿಗಿನ 62 ರನ್‌ಗಳ ಎರಡು ಉತ್ತಮ ಜೊತೆಯಾಟದಲ್ಲಿ ಅರುಣ್‌ ಪಾಲ್ಗೊಂಡರು. ಈ ಉತ್ತಮ ಜೊತೆಯಾಟಗಳಿಂದಾಗಿ ರಾಜ್ಯ ತಂಡದ ಜಯ ಇನ್ನೂ ಒಂದು ದಿನ ಇರುವಂತೆ ಶುಕ್ರವಾರವೇ ಸಾಧ್ಯವಾಯಿತು. ಉತ್ತಮವಾಗಿ ಬ್ಯಾಟ್‌ ಬೀಸಿದ ದೊಡ್ಡ ಗಣೇಶ್‌ 6 ಬೌಂಡರಿಗಳಿದ್ದ 30 ರನ್‌ ಗಳಿಸಿ ತಿಲಕ್‌ ನಾಯ್ಡು ಅವರೊಂದಿಗೆ ಔಟಾಗದೆ ಉಳಿದರು. ಆಂಧ್ರದ ಪರ ರಂಗನಾಥ್‌ 3 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರೆ, ಶಹಾಬುದ್ದೀನ್‌ ಮತ್ತು ವಾಟೇಕರ್‌ ತಲಾ 1 ವಿಕೆಟ್‌ ಗಳಿಸಿದರು.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+