ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಭವನದಲ್ಲಿ ತಿಂಗಳಿಗೊಮ್ಮೆ ನೃತ್ಯ, ಸಂಗೀತ, ಪ್ರವಚನ ಕಾರ್ಯಕ್ರಮಗಳು

By Staff
|
Google Oneindia Kannada News

ಬೆಂಗಳೂರು : ರಾಜ ಭವನದಲ್ಲಿ ತಿಂಗಳಿಗೊಮ್ಮೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗುವುದು ಮತ್ತು ಅದರಲ್ಲಿ ಸಾರ್ವಜನಿಕರಿಗೂ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ರಾಜ್ಯಪಾಲೆ ವಿ.ಎಸ್‌. ರಮಾದೇವಿ ಗುರುವಾರ ಹೇಳಿದ್ದಾರೆ.

ಅವರು ಭಾರತೀಯ ವಿದ್ಯಾಭವನದ ಭವನೋತ್ಸವ-2000 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜಭವನದ ದರ್ಬಾರ್‌ ಹಾಲ್‌ ಮತ್ತು ಗಾಜಿನ ಮನೆಯಲ್ಲಿ ತಿಂಗಳಿಗೊಮ್ಮೆ ಸಂಗೀತ, ನೃತ್ಯ, ಪ್ರವಚನ ಮತ್ತು ಉಪನ್ಯಾಸಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮವನ್ನು ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್‌ ಅವರೊಂದಿಗೆ ಚರ್ಚಿಸಲಾಗುವುದು ಎಂದು ರಾಜ್ಯಪಾಲರು ಹೇಳಿದರು.

ಸಾರ್ವಜನಿಕರಿಗೆ ತೆರೆದುಕೊಳ್ಳಲಿರುವ ರಾಜಭವನ : ಗಣರಾಜ್ಯೋತ್ಸವದ ನಂತರ ಅಂದರೆ ಜನವರಿ 26 ರಿಂದ ಫೆಬ್ರವರಿ 2ರವರೆಗೆ ಮತ್ತು ಆಗಸ್ಟ್‌ 15ರಿಂದ 22 ರವರೆಗೆ ರಾಜಭವನವನ್ನು ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ರಮಾದೇವಿ ಹೇಳಿದರು. ಪ್ರವಾಸಿಗಳು ಮತ್ತು ಮಕ್ಕಳು ರಾಜಭವನ ವೀಕ್ಷಣೆಗೆ ಒಂದು ತಿಂಗಳ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X