ನಾಗಪ್ಪ ಅವರನ್ನು ಹುಡುಕಿ ಕೊಟ್ಟವರಿಗೆ ಕೋಟಿ ಬಹುಮಾನ !
ಬೆಂಗಳೂರು : ನಾಗಪ್ಪ ನೇನೋ ಓಡಿ ಬಂದ. ತಗುಲಿ ಹಾಕಿಕೊಂಡವರು ನಾವು ಎಂದು ಗುರುವಾರ ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ರಾಜ್ ಹೇಳುತ್ತಿದ್ದಾಗ, ಮಾಧ್ಯಮದ ಕಣ್ಣುಗಳು ಹುಡುಕಿದ್ದು ನಾಗಪ್ಪನನ್ನು. ಆತ ಅಲ್ಲಿರಲಿಲ್ಲ .
ವೀರಪ್ಪನ್ ಅಡಗುತಾಣದಿಂದ ಓಡಿ ಬಂದ ಮಾರನೆ ದಿನವೇ ನಿಗೂಢವಾಗಿ ಕಣ್ಮರೆಯಾದ ನಾಗಪ್ಪ , ರಾಜ್ ವಾಪಸ್ಸಾದರೂ ಪತ್ತೆಯಾಗಿಲ್ಲ . ರಾಜ್ ಬೆಂಗಳೂರಿಗೆ ಬಂದ ಸಂದರ್ಭದಲ್ಲಾದರೂ, ನಾಗಪ್ಪ ತನ್ನ ಅಜ್ಞಾತವಾಸದಿಂದ ಹೊರಗೆ ಬರಬಹುದೆನ್ನುವ ನಿರೀಕ್ಷೆ ಹುಸಿಯಾಗಿದೆ. ರಾಜ್ ಜೊತೆಯಲ್ಲಿ ನಾಗೇಶ್ ಮತ್ತು ಗೋವಿಂದರಾಜ್ ಕಾಣಿಸಿಕೊಂಡರೂ, ನಾಗಪ್ಪನ ಸುಳಿವೇ ಇರಲಿಲ್ಲ .
ನಾಗಪ್ಪ ಇರುವುದಾದರೂ ಎಲ್ಲಿ ? ಅವರ ಅಜ್ಞಾತವಾಸಕ್ಕೆ ಕಾರಣಗಳೇನು? ಅವರು ಓಡಿ ಬಂದ ಕ್ಷಣದಿಂದ ರಾಜ್ ಕುಟುಂಬ ವಿಚಿತ್ರ ಮೌನಕ್ಕೆ ಜೋತು ಬಿದ್ದುದೇಕೆ? ಮುಂತಾದ ವಿಷಯಗಳಿಗೆ ಉತ್ತರ ಇನ್ನೂ ಸಿಕ್ಕಿಲ್ಲ . ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಾಗಪ್ಪ ನಂತರ ಇದ್ದಕ್ಕಿದ್ದಂತೇ ಕಣ್ಮರೆಯಾದರು.
ನಾಗಪ್ಪ ಓಡಿಬಂದ ವಿಷಯದ ಬಗ್ಗೆ ಸತ್ಯಾಂಶಗಳನ್ನು ರಾಜ್ಯದ ಜನತೆಗೆ ತಿಳಿಸಲು ಕೋರ್ಟ್ ಮುಂದೆ ಹಾಜರಾಗುವಂತೆ ಹೈಕೋರ್ಟ್ ಆದೇಶ ಹೊರಡಿಸಿದರೂ, ಅದನ್ನು ನಾಗಪ್ಪ ಪಡೆಯಲೇ ಇಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಹೊಟ್ಟೆ ಪಕ್ಷದ ರಂಗಸ್ವಾಮಿ ಅವರು, ತಾವೇ ಖುದ್ದಾಗಿ ಕೋರ್ಟ್ ಆದೇಶವನ್ನು ತಲುಪಿಸಲು ನಾಗಪ್ಪನವರ ಮನೆಗೆ ಎಡತಾಕಿದರೂ ಪ್ರಯೋಜನವಾಗಲಿಲ್ಲ .
ನಾಗಪ್ಪನವರ ವಿಚಿತ್ರ ಕಣ್ಮರೆ ನಾಡಿನ ಜನತೆಯ ಕುತೂಹಲ ಕೆರಳಿಸಿದೆ. ವೀರಪ್ಪನ್ ಅಪಹರಿಸಿದ್ದ ನಾಲ್ವರು ಒತ್ತೆಯಾಳುಗಳಲ್ಲಿ ರಾಜ್ ಸೇರಿದಂತೆ ಎಲ್ಲರೂ ಬಿಡುಗಡೆಯಾಗಿದ್ದಾರೆ. ಆದರೆ, ಬಿಡುಗಡೆಯಾಗಿದ್ದರೂ ನಾಗಪ್ಪ ಸಾರ್ವಜನಿಕ ಬದುಕಿನಿಂದ ದೂರವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗಪ್ಪನ ಸೆರೆವಾಸ ಇನ್ನೂ ಮುಗಿದಿಲ್ಲ .
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ರಾಜ್ ಬಿಡುಗಡೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications