ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಸದಸ್ಯರಿಗೆ ರಾಜ್ಯ ಸಚಿವರ ಸ್ಥಾನ ಹಿಂತೆಗದುಕೊಳ್ಳಲು ಒತ್ತಾಯ

By Staff
|
Google Oneindia Kannada News

ಬೆಂಗಳೂರು : ರಾಜ್ಯದ ಲೋಕಸಭಾ ಸದಸ್ಯರಿಗೆ ಸಹಾಯಕ ಸಚಿವರ ಸ್ಥಾನ-ಮಾನ ನೀಡಿ ಹೊರಡಿಸಲಾಗಿರುವ ಆದೇಶವನ್ನು ವಾಪಸ್‌ ಪಡೆಯುವಂತೆ ಒತ್ತಾಯಿಸಿದ ಘಟನೆ ಶುಕ್ರವಾರ ವಿಧಾನಸಭೆಯಲ್ಲಿ ನಡೆಯಿತು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಕೆ. ಜಯಪ್ರಕಾಶ ಹೆಗಡೆ, ಲೋಕಸಭಾ ಸದಸ್ಯರಿಗೆ ನೀಡಿರುವ ಎಲ್ಲ ಸೌಲಭ್ಯಗಳನ್ನೂ ವಾಪಸ್‌ ಪಡೆಯುವಂತೆ ಸರಕಾರವನ್ನು ಒತ್ತಾಯಿಸಿದರು. ಸಂಯುಕ್ತ ಜನತಾದಳದ ನಾಯಕ ಪಿ. ಜಿ. ಆರ್‌. ಸಿಂಧ್ಯಾ, ಈ ಸಂಬಂಧ ವಿಸ್ತುತ ಚರ್ಚೆಯಾಗಬೇಕೆಂದು ಒತ್ತಾಯಿಸದರಲ್ಲದೆ, ಲೋಕಸಭಾ ಸದಸ್ಯರಲ್ಲಿ ಕೆಲವು ಹಿರಿಯ ನಾಯಕರಿದ್ದು ಅವರಿಗೆ ರಾಜ್ಯ ಸಚಿವ ಸ್ಥಾನ-ಮಾನ ನೀಡಿ ಹೊರಡಿಸಲಾಗಿರುವ ಈ ಆದೇಶ ಮುಖಭಂಗ ಉಂಟು ಮಾಡಿದೆ ಎಂದರು.

ರಾಜ್ಯದ ಕೆಲವು ಕಾಂಗ್ರೆಸ್‌ನ ಲೋಕಸಭಾ ಸದಸ್ಯರನ್ನು ಓಲೈಸಲು ಈ ಕೆಟ್ಟ ಸಂಪ್ರದಾಯ ಅನುಸರಿಸಿಕೊಂಡು ಬರಲಾಗುತ್ತಿದೆ ಎಂದ ಸಿಂಧ್ಯಾ, ಸದಸ್ಯರಿಗೆ ಅವರ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಕಾರು, ಕಚೇರಿ ಮತ್ತು ಸಿಬ್ಬಂಧಿ ನೀಡಿರುವುದಕ್ಕೆ ಆಕ್ಷೇಪ ಎತ್ತಲಿಲ್ಲ. ಇದಕ್ಕೆ ಉತ್ತರ ನೀಡಿದ ಕಾನೂನು ಸಚಿವ ಡಿ.ಬಿ. ಚಂದ್ರೇಗೌಡ, ಈಗ ಜಾರಿಯಲ್ಲಿರುವ ನಿಯಮದ ಪ್ರಕಾರ ಸೌಲಭ್ಯ ಒದಗಿಸಲಾಗಿದ್ದು, ಸಹಾಯಕ ಸಚಿವರ ಸ್ಥಾನ-ಮಾನ ನೀಡಿಲ್ಲ ಎಂದರು. ಈ ಸಂಬಂಧ ಮುಖ್ಯಮಂತ್ರಿ ಕೃಷ್ಣ ಅವರ ಜತೆ ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ ಸಭಾಧ್ಯಕ್ಷರಾದ ವೆಂಕಟಪ್ಪ ಚರ್ಚೆಗೆ ಮಂಗಳ ಹಾಡಿದರು.

ತೆಂಗಿನಕಾಯಿ ಬೆಲೆ ಕುಸಿತ ಪ್ರತಿಭಟಿಸಿ ಸಭಾತ್ಯಾಗ : ಕುಸಿದಿರುವ ತೆಂಗಿನಕಾಯಿ ಬೆಲೆ ನಿಯಂತ್ರಿಸಲು ಸರಕಾರ ಮಧ್ಯೆ ಪ್ರವೆಶಿಸಲು ನಿರಾಕರಿಸಿದ್ದನ್ನು ಪ್ರತಿಭಟಿಸಿ ಸಂಯುಕ್ತ ಜನತಾದಳ ಮತ್ತು ಬಿಜೆಪಿ ಸದಸ್ಯರು ಪ್ರತ್ಯೇಕವಾಗಿ ಸಭಾತ್ಯಾಗ ಮಾಡಿದ ಘಟನೆ ನಡೆಯಿತು.

ಪ್ರಶ್ನೋತ್ತರ ವೇಳೆಯಲ್ಲಿ ಎತ್ತಲಾದ ಈ ಕುರಿತ ಪ್ರಶ್ನೆಗೆ, ಕೃಷಿ ಸಚಿವ ಟಿ.ಬಿ. ಜಯಚಂದ್ರ ಮಾರುಕಟ್ಟೆಗೆ ಸರಕಾರದ ಮಧ್ಯಪ್ರವೇಶವನ್ನು ತಿರಸ್ಕರಿಸಿದರು. ತೆಂಗಿನೆಣ್ಣೆಯ ಮೇಲಿನ ಆಮದು ಸುಂಕ ಏರಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗಿದ್ದು, ಮುಖ್ಯಮಂತ್ರಿಗಳೂ ಸಹ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಸಾಧ್ಯವಾದರೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಒತ್ತಾಯಿಸಲಾಗುವುದು ಎಂದರು.

ಈ ಉತ್ತರದಿಂದ ತೃಪ್ತರಾಗದ ಪ್ರತಿಪಕ್ಷದ ಸದಸ್ಯರು, ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ಸಭಾತ್ಯಾಗ ಮಾಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X