ರಾಜ್ ಬಿಡುಗಡೆಗೆ ಕಮಾಂಡೋ ಕಾರ್ಯಾಚರಣೆಗೆಸಿದ್ಧವಿದ್ದ ಕೇಂದ್ರ
ಬೆಂಗಳೂರು : ರಾಜ್ ಅವರನ್ನು ವೀರಪ್ಪನ್ ವಶದಿಂದ ಬಿಡಿಸಿಕೊಂಡು ಬರಲು ಕಮಾಂಡೋ ಕಾರ್ಯಾಚರಣೆಯನ್ನು ನಡೆಸುವ ದುಸ್ಸಾಹಸದ ಒತ್ತಡ ಕೇಂದ್ರ ಸರಕಾರದ ಮೇಲಿತ್ತೇ ? ಹೌದೆನ್ನುತ್ತವೆ ಉನ್ನತ ಮೂಲಗಳು.
ವರನಟನ ಬಿಡುಗಡೆ ವಿಳಂಬವಾದ ಹಿನ್ನೆಲೆಯಲ್ಲಿ ಈ ಸಂಬಂಧ ಕೇಂದ್ರ ಸರಕಾರ ಎರಡೂ ಸರಕಾರಗಳ ಜೊತೆ ಚರ್ಚಿಸಿಯೂ ಇತ್ತು. ಆದರೆ ಸಂಧಾನ ಯತ್ನವನ್ನೇ ಮುಂದುವರಿಸಲು ಎರಡೂ ಸರಕಾರಗಳು ತೀರ್ಮಾನಿಸಿದ್ದರಿಂದ ಮತ್ತು ರಾಜ್ ಅವರ ಕುಟುಂಬದವರು ಕಮಾಂಡೋ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕೇಂದ್ರ ಈ ಯತ್ನ ಕೈಬಿಟ್ಟಿತು.
ಕರ್ನಾಟಕದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಗೃಹ ಸಚಿವ ಎಲ್. ಕೆ. ಆಡ್ವಾಣಿ ಅವರನ್ನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನವೆಂಬರ್ 13ರಂದು ಭೇಟಿ ಮಾಡಿ ಅಪಹರಣ ಪ್ರಕರಣದ ಬಗ್ಗೆ ಚರ್ಚಿಸಿಯೂ ಇದ್ದರು. ಟಾಡಾ ಬಂಧಿಗಳನ್ನು ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ನಿರಾಕರಿಸಿದ ನಂತರ, ವೀರಪ್ಪನ್ ತನ್ನ ನಿಲುವುಗಳಿಗೆ ಅಂಟಿಕೊಂಡಿದ್ದರೆ ಎರಡೂ ರಾಜ್ಯಗಳಿಗೆ ಕೇಂದ್ರದ ಕಮಾಂಡೋ ಕಾರ್ಯಾಚರಣೆಯ ಹೊರತು ಅನ್ಯ ಮಾರ್ಗಗಳೇ ಇರಲಿಲ್ಲ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಉಪಗ್ರಹ ಬಳಕೆ : ಈಗಲೂ ಸಹ ವೀರಪ್ಪನ್ ವಿರುದ್ಧದ ಮುಂದಿನ ಕಾರ್ಯಾಚರಣೆ ಬಗ್ಗೆ ಎರಡೂ ಸರಕಾರಗಳು ಶೀಘ್ರ ಮಾತುಕತೆಗೆ ಮುಂದಾಗಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೂ ಕೇಂದ್ರ ಸರಕಾರ ಎರಡೂ ರಾಜ್ಯಗಳ ಸಲಹೆ , ಸಹಕಾರ ಪಡೆದು ಮುಂದುವರಿಯಲಿದೆ ಎಂದು ಹೇಳಲಾಗಿದೆ. ಇತ್ತೀಚಿನ ಆಧುನಿಕ ಉಪಗ್ರಹ ಸೌಲಭ್ಯಗಳನ್ನು ಬಳಸಿಕೊಂಡು ಕಾಡುಗಳ್ಳನ ಅಡಗುತಾಣಗಳನ್ನು ಹುಡುಕುವುದು ತೀರಾ ಸುಲಭ. ರಾಜ್ ಅವರನ್ನು ಬಿಟ್ಟು ಇನ್ನೊಂದೆಡೆಗೆ ಕಾಲು ಕಿತ್ತಿರುವ ವೀರಪ್ಪನ್, ತಮ್ಮ ಬಿಡುಗಡೆ ವಿಷಯವನ್ನು ಎರಡು ದಿನಗಳವರೆಗೆ ಬಹಿರಂಗಪಡಿಸಬಾರದೆಂದು ರಾಜ್‌ಗೆ ತಾಕೀತು ಮಾಡಿದ್ದಾನೆ.
ಈಗ ದೆಹಲಿಯಲ್ಲಿರುವ ಕರ್ನಾಟಕ ಮುಖ್ಯಮಂತ್ರಿ ಕೃಷ್ಣ ವೀರಪ್ಪನ್ ವಿರುದ್ಧ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಕೇಂದ್ರದೊಂದಿಗೆ ಮತ್ತು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರೊಂದಿಗೆ ಮಾತನಾಡುವರು ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಸಂಬಂಧ ಎರಡೂ ಸರಕಾರಗಳು ಸೂಕ್ತ ಮತ್ತು ಸ್ಪಷ್ಟ ಯೋಜನೆ ರೂಪಿಸಿ ವೀರಪ್ಪನ್ ಪ್ರಕರಣಕ್ಕೆ ಅಂತ್ಯ ಕಾಣಿಸಬೇಕು. ಇಲ್ಲದಿದ್ದರೆ ತಮಿಳು ಉಗ್ರಗಾಮಿಗಳ ಜೊತೆ ಕೈಜೋಡಿಸಿರುವ ವೀರಪ್ಪನ್‌ನನ್ನು ಮಟ್ಟಹಾಕುವುದು ಸಾಧ್ಯವಿಲ್ಲ ಎಂದು ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಾಚರಣೆಗೆ ವಿರೋಧ : ಈ ನಡುವೆ ಕರ್ನಾಟಕದ ತಮಿಳರ ಸಂಘದ ಅಧ್ಯಕ್ಷ ಷಣ್ಮುಗ ಸುಂದರಂ ಅವರು, ವೀರಪ್ಪನ್ ಬೇಡಿಕೆಗಳಲ್ಲಿ ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ನೆಡುಮಾರನ್, ವೀರಪ್ಪನ್‌ಗೆ ಭರವಸೆ ನೀಡಿದ್ದಾರೆ ಎಂಬ ಕರುಣಾನಿಧಿ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಇದರಲ್ಲಿ ಕಮಾಂಡೋ ಕಾರ್ಯಾಚರಣೆ ಬೇಡಿಕೆ ಇದೆಯೋ ಇಲ್ಲವೋ ತಿಳಿದಿಲ್ಲ. ಆದರೆ ಶುಕ್ರವಾರ ಬೆಳಿಗ್ಗೆ ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ನೆಡುಮಾರನ್, ಯಾವುದೇ ರೀತಿಯ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಸಂಧಾನ ತಂಡದಲ್ಲಿದ್ದ ಷಣ್ಮುಗ ಸುಂದರಂ ಅವರು ಎರಡೂ ಸರಕಾರಗಳು ನೀಡಿರುವ ಭರವಸೆಗಳಿಗೆ ಬದ್ದವಾಗದೇ ಹೋದರೆ ತಾವು ಪ್ರಜಾಪ್ರಭುತ್ವ ಮಾಧರಿಯಲ್ಲಿ ಹೋರಾಟ ಮುಂದುವರಿಸುವುದಾಗಿಯೂ ವೀರಪ್ಪನ್‌ಗೆ ನೆಡುಮಾರನ್ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಮುಖಪುಟ / ರಾಜ್ ಬಿಡುಗಡೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications