Get Updates
Get notified of breaking news, exclusive insights, and must-see stories!

ಕರಿಯರಿಗೆ 192 ಮಿಲಿಯನ್‌ ಡಾಲರ್‌ಪರಿಹಾರಕ್ಕೆ ಕೋಕ್‌ ಒಪ್ಪಿಗೆ

ಅಟ್ಲಾಂಟಾ : ಕರಿಯರ ವಿರುದ್ಧ ವರ್ಣಭೇದ ನೀತಿ ಅನುಸರಿಸಿದ ಕಾರಣಕ್ಕೆ ಅಮೇರಿಕದ ತಂಪು ಪಾನೀಯ ಕಂಪನಿ ಕೊಕಾ ಕೋಲಾ 192.5 ಮಿಲಿಯನ್‌ ಡಾಲರ್‌ನಷ್ಟು ಭಾರೀ ಬೆಲೆ ತೆರಲು ಒಪ್ಪಿಕೊಂಡಿದೆ.

ತನ್ನ ವಿರುದ್ಧದ ವರ್ಣಭೇದ ನೀತಿ ಆಪಾದನೆ ಸಂಬಂಧ ಸಲ್ಲಿಸಲಾಗಿದ್ದ ದೂರಿನನ್ವಯ ಈ ಪರಿಹಾರ ನೀಡಲು ತಾನು ಒಪ್ಪಿಕೊಂಡಿರುವುದಾಗಿ ಗುರುವಾರ ಹೇಳಿದೆ. 2 ಸಾವಿರ ಆಫ್ರಿಕನ್‌ ಅಮೆರಿಕನ್‌ ನೌಕರರ ವಿರುದ್ಧ ಕಂಪನಿ ವರ್ಣಭೇದ ನೀತಿ ಅನುಸರಿಸುತ್ತಿದ್ದು, ಸಂಬಳ ಸೇರಿದಂತೆ ಅನೇಕ ಸೌಲಭ್ಯಗಳ ವಿಷಯದಲ್ಲಿ ಕರಿಯರಿಗೆ ತಾರತಮ್ಯ ತೋರಿಸಲಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.

192.5 ಮಿಲಿಯನ್‌ ಡಾಲರ್‌ ಪರಿಹಾರದಲ್ಲಿ, 113 ಮಿಲಿಯನ್‌ ಡಾಲರ್‌ ಅನ್ನು ಹಣದ ರೂಪದಲ್ಲಿ ಕೊಡುವುದು, 43.5 ಮಿಲಿಯನ್‌ ಡಾಲರ್‌ ಮೊತ್ತದ ನಿಧಿ ಸ್ಥಾಪನೆ ಮತ್ತು 36 ಮಿಲಿಯನ್‌ ಡಾಲರ್‌ ನೆರವಿನಿಂದ ಕೆಲಸದ ಸ್ಥಳದಲ್ಲಿನ ಆಂತರಿಕ ಸೌಲಭ್ಯಗಳನ್ನು ಹೆಚ್ಚಿಸಲು ಬಳಸುವುದು ಸೇರಿದೆ.

ಈ ಬೃಹತ್‌ ಮೊತ್ತ , ವರ್ಣಭೇದ ನೀತಿ ವಿರುದ್ಧ ಹೋರಾಡಿ ಪಡೆದ ಅತ್ಯಂತ ಹೆಚ್ಚು ಪರಿಹಾರವಾಗಿದೆ. 1999ರ ಏಪ್ರಿಲ್‌ನಲ್ಲಿ ಈ ದಾವೆ ಹೂಡಲಾಗಿತ್ತು. ಈ ಒಪ್ಪಂದ 22 ಏಪ್ರಿಲ್‌ 1995ರಿಂದ 14 ಜೂನ್‌ 2000ದ ನಡುವೆ ಕಂಪನಿಯಲ್ಲಿ ಕೆಲಸ ಮಾಡಿದವರಿಗೆ ಅನ್ವಯಿಸುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+