ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಚುನಾವಣೆ: ಮರುಎಣಿಕೆ ತಡೆಗೆ ಫ್ಲೋರಿಡಾ ಕೋರ್ಟ್‌ ನಕಾರ

By Staff
|
Google Oneindia Kannada News

ಫ್ಲೋರಿಡಾ : ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ನಿಖರ ಫಲಿತಾಂಶಕ್ಕಾಗಿ, ಮತಗಳನ್ನು ಯಂತ್ರಗಳ ಸಹಾಯವಿಲ್ಲದೆ, ಮರುಎಣಿಕೆ ಮಾಡುವುದನ್ನು ನಿಷೇಧಿಸಲು ಪ್ಲೋರಿಡಾ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಫ್ಲೋರಿಡಾ ರಾಜ್ಯ ಕಾರ್ಯದರ್ಶಿ ಕ್ಯಾಥರೀನ್‌ ಹ್ಯಾರಿಸ್‌ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ಈ ಅರ್ಜಿಯನ್ನು ಸಹಮತದಿಂದ ಪರಿಗಣಿಸಿದ್ದು ಯಾವುದೇ ಪೂರ್ವಾಗ್ರಹವಿಲ್ಲದೆ ಮರುಎಣಿಕೆಗೆ ತಡೆಯಾಡ್ಡಲು ನಿರಾಕರಿಸಿದೆ ಎಂದು ಹೇಳಿದೆ. ಮರುಎಣಿಕೆಗೆ ತಡೆಯಾಡ್ಡುವುದಿಲ್ಲ ಎಂದ ಕೋರ್ಟ್‌, ಮರುಎಣಿಕೆ ಮುಂದುವರೆಯಲಿ ಎಂದೂ ಹೇಳದೇ ಇರುವುದರಿಂದ, ಕ್ಯಾಥರೀನ್‌ ಹ್ಯಾರಿಸ್‌ ಬೇರೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಅಲ್ಲಿನ ಕೋರ್ಟ್‌ ವಕ್ತಾರ, ಕ್ರಾೖಗ್‌ ವಾಟರ್ಸ್‌ ಹೇಳಿದ್ದಾರೆ.

ಪಾಮ್‌ ಬೀಚ್‌ ಕೌಂಟಿಯ ಮನವಿ ಮೇರೆಗೆ ಈ ಪ್ರಕರಣಕ್ಕೆ ಸಂಬಂಧಿಸಿ ರಿಪಬ್ಲಿಕನ್‌ ಪಕ್ಷದ ಜಾರ್ಜ್‌. ಡಬ್ಲ್ಯೂ ಬುಷ್‌ ಹಾಗೂ ಡೆಮಾಕ್ರೆಟಿಕ್‌ ಪಕ್ಷದ ಆಲ್‌ ಗೋರೆಯವರ ಹೇಳಿಕೆಗಳನ್ನು ಕೋರ್ಟ್‌ ಆಲಿಸಿದೆ. ಆಲ್‌ ಗೋರೆ, ಮರು ಎಣಿಕೆ ಕುರಿತ ಅರ್ಜಿಯನ್ನು ಬೆಂಬಲಿಸಿದರೆ, ಬುಷ್‌ ವಿರೋಧಿಸಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X